ಸೋಮವಾರಪೇಟೆ, ಅ.೨೫: ಮಡಿಕೇರಿ ವಿಧಾನ ಸಭಾ ಕ್ಷೇತ್ರಕ್ಕೆ ಸಂಬAಧಿಸಿದAತೆ ಅತೀ ಅಪಾಯ ಕಾರಿ ತಿರುವುಗಳಿರುವ ರಸ್ತೆಗಳ ಅಭಿವೃದ್ಧಿಗೆ ಲೋಕೋಪ ಯೋಗಿ ಇಲಾಖೆ ಮೂಲಕ ರೂ. ೧೭ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಕಾಮಗಾರಿಗಳು ಪ್ರಾರಂಭವಾಗಲಿವೆ ಎಂದು ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.
ಇದರೊಂದಿಗೆ ಮಳೆಹಾನಿ ಪರಿಹಾರ ನಿಧಿ, ಎನ್ಡಿಆರ್ಎಫ್, ಜಿ.ಪಂ. ಮೂಲಕ ಸೋಮವಾರಪೇಟೆ ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ ೩೪ ಕೋಟಿ ಅನುದಾನ ಮಂಜೂರಾಗಿದ್ದು, ಮುಂದಿನ ಒಂದು ವಾರದೊಳಗೆ ಕಾಮಗಾರಿಗಳಿಗೆ ಚಾಲನೆ ನೀಡಲಾಗು ವುದು ಎಂದು ಶಾಸಕರು ತಿಳಿಸಿದರು.
ಲೋಕೋಪಯೋಗಿ ಇಲಾಖಾ ಮೂಲಕ ಪಿಆರ್ಎಎಂಸಿ ಯೋಜನೆಯ ಅಪಘಾತ ವಲಯಗಳ ಅಭಿವೃದ್ಧಿ ಕಾಮಗಾರಿಯಡಿ ರೂ. ೨.೭೫ ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿರುವ ನೇಗಳ್ಳೆ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗುಡ್ಡಗಾಡು ಪ್ರದೇಶವಾಗಿರುವ ಹಿನ್ನೆಲೆ ರಸ್ತೆಗಳಲ್ಲಿ ಅತೀ ತಿರುವುಗಳಿವೆ. ಇವುಗಳಲ್ಲಿ ಕೆಲವೊಂದು ತಿರುವುಗಳು ಅಪಾಯಕಾರಿಯಾಗಿದ್ದು, ಇದನ್ನು ಅಗಲೀಕರಣ ಮಾಡಿ ರಸ್ತೆ ಅಭಿವೃದ್ಧಿ ಪಡಿಸಲು ಲೋಕೋಪಯೋಗಿ ಇಲಾಖೆ ಮೂಲಕ ಮಡಿಕೇರಿ ಕ್ಷೇತ್ರಕ್ಕೆ ೧೭ ಕೋಟಿ ಅನುದಾನ ಬಿಡುಗಡೆ ಯಾಗಿದೆ ಎಂದ ರಂಜನ್, ರಸ್ತೆ ಅಗಲೀಕರಣ ಸಂದರ್ಭ ಸಾರ್ವಜನಿಕರು ಅಗತ್ಯ ಸ್ಥಳಾವಕಾಶ ಬಿಟ್ಟುಕೊಡಬೇಕು. ಗುಣಮಟ್ಟದ ಕಾಮಗಾರಿ ನಡೆಯುವಂತೆ ಮುತುವರ್ಜಿ ವಹಿಸಬೇಕೆಂದರು.
ನೇಗಳ್ಳೆ ಗ್ರಾಮ ಸಂಪರ್ಕಿಸುವ ೨ ಕಿ.ಮೀ. ಉದ್ದದ ರಸ್ತೆಯನ್ನು ಈ ಯೋಜನೆಯಡಿ ರೂ. ೨.೭೫ ಕೋಟಿ ಅನುದಾನದಡಿ ಅಭಿವೃದ್ಧಿ ಪಡಿಸಲಾ ಗುವುದು. ಐದೂವರೆ ಮೀಟರ್ ಅಗಲದ ಡಾಂಬರು ರಸ್ತೆ, ತಡೆಗೋಡೆ, ಮೋರಿಗಳ ನಿರ್ಮಾಣವಾಗಲಿದೆ ಎಂದು ರಂಜನ್ ಮಾಹಿತಿ ನೀಡಿದರು.
ಇದರೊಂದಿಗೆ ಮಳೆಹಾನಿ ಪರಿಹಾರ ನಿಧಿ, ಎನ್ಡಿಆರ್ಎಫ್, ಜಿಲ್ಲಾ ಪಂಚಾಯತ್ ಮೂಲಕ ಸೋಮವಾರಪೇಟೆ ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ ೩೪ ಕೋಟಿ ಅನುದಾನ ಮಂಜೂರಾಗಿದ್ದು, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ೩೦ ರಿಂದ ೪೦ ಲಕ್ಷ ವೆಚ್ಚದ ಕಾಮಗಾರಿ ಕೈಗೊಳ್ಳಲಾಗುವುದು. ಒಂದು ರಸ್ತೆಗೆ ೫ ಲಕ್ಷದಂತೆ ಅನುದಾನ ಒದಗಿಸಲಾಗುವುದು. ಮುಂದಿನ ೧ ವಾರದೊಳಗೆ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಶಾಸಕರು ತಿಳಿಸಿದರು.
ಈ ಸಂದರ್ಭ ಲೋಕೋಪ ಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್ಕುಮಾರ್, ಅಭಿಯಂತರ ಪೀಟರ್, ಜಿ.ಪಂ. ಮಾಜಿ ಸದಸ್ಯ ಬಿ.ಜೆ. ದೀಪಕ್, ಪ.ಪಂ. ಸದಸ್ಯ ಪಿ.ಕೆ. ಚಂದ್ರು, ಪ್ರಮುಖರಾದ ಮನುಕುಮಾರ್ ರೈ, ಪ್ರದೀಪ್, ನೇಗಳ್ಳೆ ಜೀವನ್, ಕಿಬ್ಬೆಟ್ಟ ಮಧು, ದಿವಾಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.