ಪೊನ್ನಂಪೇಟೆ, ಅ.೨೫: ಗೋಣಿಕೊಪ್ಪಲು ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ, ಮಡಿಕೇರಿ ತಾಲೂಕಿನ ಐಕೊಳ ಗ್ರಾಮದ ಪಾರೇರ ಸುಮಿ ವಸಂತ್ ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಳ್ಳುವ ಮೂಲಕ ರಾಷ್ಟç ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಇವರು ೨೦೦೫ ರಲ್ಲಿ ಬಳ್ಳಾರಿಯಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾ ಕೂಟದಲ್ಲಿ ಭಾರದ ಗುಂಡು ಎಸೆತ, ಭರ್ಜಿ ಎಸೆತ ಹಾಗೂ ಥ್ರೋಬಾಲ್ ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದರು. ೨೦೧೫ ರಲ್ಲಿ ಮಂಡ್ಯದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭರ್ಜಿ ಎಸೆತದಲ್ಲಿ ಪ್ರಥಮ ಸ್ಥಾನವನ್ನು ಪಡೆದು,ಪುಣೆಯಲ್ಲಿ ನಡೆದ ರಾಷ್ಟç ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಪ್ರಸ್ತುತ ಐಕೊಳದ ಅಯ್ಯಪ್ಪ ಯುವತಿ ಮಂಡಳಿಯ ಥ್ರೋ ಬಾಲ್ ಕ್ಲಬ್‌ನ ಸದಸ್ಯರಾಗಿರುವ, ಸುಮಿ ವಸಂತ್ ರಂಗಸಮುದ್ರದ ಗೋವಿಂದಮ್ಮನ ಶಾರದ ಹಾಗೂ ರಾಮಯ್ಯ ದಂಪತಿಯ ಪುತ್ರಿ.