*ವೀರಾಜಪೇಟೆ, ಅ. ೨೫: ವೀರಾಜಪೇಟೆ ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಬಿಸಿಯೂಟ ಯೋಜನೆ ಆರಂಭವಾಗಿದ್ದು, ದಸರಾ ರಜೆ ನಂತರ ಶಾಲೆಗಳ ಹಾಜರಾತಿ ಶೇ. ೪೩ ರಷ್ಟಿದ್ದು, ವೀರಾಜಪೇಟೆ ತಾಲೂಕಿನ ಆರರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳು ಸಿಹಿಯ ಜೊತೆಗೆ ಬಿಸಿಯೂಟ ಸೇವಿಸಿದರು.
ತಾಲೂಕಿನ ಹಲವು ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ, ಬಿಆರ್‌ಸಿ, ಬಿಆರ್‌ಪಿ, ಇ.ಸಿ.ಒ, ಸಿಆರ್‌ಪಿ ಸೇರಿದಂತೆ ಅಕ್ಷರ ದಾಸೋಹ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಬಿಸಿಯೂಟದ ರುಚಿ ಸವಿದು ಪರಿಶೀಲನೆ ನಡೆಸಿದರು. ೨೦೨೦-೨೧ ನೇ ಸಾಲಿನಲ್ಲಿ ೧೧೯೯೧ ಇದ್ದದ್ದು ೨೦೨೧-೨೨ ನೇ ಸಾಲಿಗೆ ೧೨೦೩೪ ವಿದ್ಯಾರ್ಥಿಗಳಿಗೆ ಹೆಚ್ಚಾಗಿರುತ್ತದೆ ಎಂದು ಅಕ್ಷರ ದಾಸೋಹ ಅಧಿಕಾರಿ ರಾಜೇಶ್ ಮಾಹಿತಿ ನೀಡಿದರು.