ಮಡಿಕೇರಿ, ಅ. ೨೫: ಅಕ್ರಮ ಕರುಗಳ ಸಾಗಾಟ ವಿಚಾರದಲ್ಲಿ ೬ ಮಂದಿ ಆರೋಪಿಗಳು ಜಾಮೀನಿನ ಅಡಿ ಬಿಡುಗಡೆಯಾಗಿದ್ದಾರೆ.

ತಾ. ೨೪ ರಂದು ಬೆಸಗೂರು ಗ್ರಾಮದಿಂದ ಕರುಗಳ ಸಾಗಾಟವಾಗುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಕರುಗಳನ್ನು ರಕ್ಷಿಸಿ, ಒಂದು ಪಿಕಪ್ ಹಾಗೂ ಮಾರುತಿ ವ್ಯಾನ್ ಅನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದರು. ಪರಾರಿಯಾಗಿದ್ದ ಆರೋಪಿಗಳಾದ ಜಿಹಾದ್, ಯೂಸಫ್, ಸಂಶು, ಸುನಿಲ್, ದೊರೆ ಗಣಪತಿ ವೀರಾಜಪೇಟೆ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಶರಣಾಗಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಪ್ರಕರಣದಲ್ಲಿ ಬಂಧಿತನಾಗಿದ್ದ ೬ನೇ ಆರೋಪಿ ಕಿರಣ್ ಅನ್ನು ತಾ. ೨೪ ರ ರಾತ್ರಿ ಜಾಮೀನಿನ ಮೇಲೆ ಪ್ರಕರಣ ನಡೆದ ದಿನದಂದೆ ಬಿಡುಗಡೆಯಾಗಿದ್ದಾರೆ ಎಂದು ಅರೋಪಿಗಳ ಪರ ವಕಾಲತ್ತು ವಹಿಸಿದ್ದ ಕೊಕ್ಕಂಡ ಅಪ್ಪಣ್ಣ ತಿಳಿಸಿದ್ದಾರೆ.