ಮಡಿಕೇರಿ, ಅ. ೨೫: ಕೊಡಗು ಜಿಲ್ಲೆಯ ರೈತರ ಪಂಪ್ ಸೆಟ್ಗಳಿಗೆ ನೀಡಿದ್ದ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿರುವ ಸೆಸ್ಕ್ ಕ್ರಮ ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಕಡಿತ ಮಾಡಿರುವ ಸೆಸ್ಕ್ ಕ್ರಮ ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕ ನೇತೃತ್ವದಲ್ಲಿ ನೂರಾರು ರೈತರು ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆತಡೆ ನಡೆಸಿದರು. ಇದರಿಂದ ಸಂಚಾರ ಸಮಸ್ಯೆ ಉಂಟಾಯಿತು. ಬಳಿಕ ಮೆರವಣಿಗೆ ಮೂಲಕ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ (ಸೆಸ್ಕ್) ತೆರಳಿದ ಪ್ರತಿಭಟನಾನಿರತರು ಅಲ್ಲಿಯೂ ಸಂಜೆ ತನಕ ಪ್ರತಿಭಟಿಸಿದರು.
ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ಕೊಡಗು ಜಿಲ್ಲೆಯ ರೈತರನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ. ೧೦ ಹೆಚ್.ಪಿ ತನಕದ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡುವುದಾಗಿ ಹೇಳಿದ್ದ ಭರವಸೆ ಇಂದಿಗೂ ಈಡೇರಿಲ್ಲ. ಇದರೊಂದಿಗೆ ಕೊಡಗು ಜಿಲ್ಲೆಯ ಕೆಲ ಭಾಗಗಳಲ್ಲಿ ಪಂಪ್ ಸೆಟ್ಗೆ ವಿದ್ಯುತ್ ಸಂಪರ್ಕ ಕಡಿತ ಮಾಡಿರುವ ಕ್ರಮ ಸರಿಯಲ್ಲ. ಪರಿಣಾಮ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಒಂದು ವಾರದೊಳಗೆ ಕಡಿತ ಮಾಡಿರುವ ವಿದ್ಯುತ್ ಸಂಪರ್ಕವನ್ನು ಮರು ಜೋಡಿಸಬೇಕು. ಬೇಡಿಕೆಗೆ ತ್ವರಿತವಾಗಿ ಸ್ಪಂದನ ನೀಡದಿದ್ದಲ್ಲಿ ಹೋರಾಟ ತೀವ್ರ ಸ್ವರೂಪಕ್ಕೆ ಕೊಂಡೊಯ್ಯ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸರ್ಕಾರದ ಅವೈಜ್ಞಾನಿಕ ನೀತಿ ಯಿಂದ ಜಿಲ್ಲೆಯ ಸಣ್ಣ ಬೆಳೆಗಾರರು ತೊಂದರೆಗೆ ಸಿಲುಕಿದ್ದಾರೆ. ಕೊರೊನಾ ದಿಂದ ರೈತರ ಆರ್ಥಿಕ ಸ್ಥಿತಿಯೂ ಹದಗೆಟ್ಟಿದೆ. ಒಮ್ಮೆಲೆ ಲಕ್ಷಾಂತರ ರೂಪಾಯಿಯ ಬಿಲ್ ನೀಡಿದರೆ ಬೆಳೆಗಾರರು ಪಾವತಿ ಮಾಡುವು ದಾದರೂ ಹೇಗೆ?
(ಮೊದಲ ಪುಟದಿಂದ) ಎಂದು ಪ್ರಶ್ನಿಸಿದ ಮನು ಸೋಮಯ್ಯ, ಜಿಲ್ಲೆಯಲ್ಲಿ ಕಾಫಿ ವಾರ್ಷಿಕ ಬೆಳೆ. ಕೊಯ್ಲು ಮಾಡಿದ ಮೇಲೆ ರೈತರಿಗೆ ಹಣ ಸಿಗುತ್ತದೆ. ಮಾರ್ಚ್ ತನಕ ಬಿಲ್ ಪಾವತಿಗೆ ಅವಕಾಶ ನೀಡಬೇಕು. ಯಾವುದೇ ಬಡ್ಡಿ ವಿಧಿಸದಂತೆ ಆಗ್ರಹಿಸಿದರು.
ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಮಾತನಾಡಿ, ವಿದ್ಯುತ್ ಸಂಪರ್ಕ ಕಡಿತದಿಂದ ಸಣ್ಣ ಬೆಳೆಗಾರರು ತೊಂದರೆಗೆ ಸಿಲುಕಿದ್ದಾರೆ. ಕೂಡಲೇ ಮರು ಸಂಪರ್ಕ ಕಲ್ಪಿಸಬೇಕು. ಎಂದು ಒತ್ತಾಯಿಸಿದರು.
ಜಿಲ್ಲೆಯ ಹಲವು ಸ್ಥಳಗಳಲ್ಲಿ ಕಾಫಿ ತೋಟದ ಮಧ್ಯದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಯಿAದ ಕಾರ್ಮಿಕರು ಹಾಗೂ ಕಾಡುಪ್ರಾಣಿಗಳು ತೊಂದರೆಗೆ ಸಿಲುಕುತ್ತಿವೆ. ಇದನ್ನು ತಪ್ಪಿಸಲು ತೋಟದಲ್ಲಿನ ವಿದ್ಯುತ್ ಮಾರ್ಗ ಬದಲಾವಣೆ ಮಾಡಬೇಕು ಎಂದು ರೈತರು ಒತ್ತಾಯಿಸಿದರು.
ಬೇಡಿಕೆಗಳು
ಕೊಡಗಿನ ರೈತರಿಗೆ ೧೦ ಹೆಚ್.ಪಿಗೂ ಕಡಿಮೆ ಇರುವ ಎಲ್ಲಾ ಪಂಪ್ ಸೆಟ್ಗಳಿಗೆ ಉಚಿತ ವಿದ್ಯುತ್ ನೀಡಬೇಕು, ಕೊಡಗು ಜಿಲ್ಲೆಯಾದ್ಯಂತ ನಿರಂತರ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು, ರೈತರ ೧೦ ಹೆಚ್.ಪಿಗಿಂತ ಹೆಚ್ಚಿನ ಎಲ್ಲಾ ತರಹದ ಪಂಪ್ಸೆಟ್ಗಳಿಗೆ ನೀಡಿದ ಶುಲ್ಕದ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡುವುದು, ಈಗಾಗಲೇ ನಿಷ್ಕಿçಯಗೊಳಿಸಿದ ರೈತರ ಪಂಪ್ ಸೆಟ್ ಮತ್ತು ಮನೆಗಳಿಗೆ ಕೂಡಲೇ ವಿದ್ಯುತ್ ಪೂರೈಕೆ ಮಾಡಬೇಕು ಎಂಬ ಬೇಡಿಕೆಯನ್ನು ರೈತ ಸಂಘ ಮುಂದಿಟ್ಟಿತು.
ಇಂಧನ ಸಚಿವರೊಂದಿಗೆ ಮಾತುಕತೆ
ಸಮಸ್ಯೆಯ ಬಗ್ಗೆ ಹಾಗೂ ಮನವಿ ಸ್ವೀಕರಿಸಲು ಉನ್ನತ ಅಧಿಕಾರಿಗಳು ಬಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಇಂಧನ ಸಚಿವ ಸುನಿಲ್ಕುಮಾರ್ ಅವರಿಗೆ ಕಾಡ್ಯಮಾಡ ಮನು ಸೋಮಯ್ಯ ಅವರು ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಸಮಸ್ಯೆಗೆ ಸರಿಯಾದ ಸ್ಪಂದನ ದೊರೆಯುತ್ತಿಲ್ಲ. ಅಲ್ಲದೆ ಅಧಿಕಾರಿಗಳು ಪ್ರಭಾರ ಹುದ್ದೆಯಲ್ಲಿರುವುದರಿಂದ ಸಮಸ್ಯೆ ಪರಿಹಾರವಾಗುತ್ತಿಲ್ಲ. ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ವೀಣಾ ಅಚ್ಚಯ್ಯ ಭೇಟಿ
ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಭೇಟಿ ನೀಡಿ ರೈತರ ಬೇಡಿಕೆಯನ್ನು ಆಲಿಸಿದರು. ಇದು ನ್ಯಾಯಾಯುತ ಬೇಡಿಕೆಯಾಗಿದ್ದು, ಸರಕಾರ ಸೂಕ್ತವಾಗಿ ಸ್ಪಂದನ ನೀಡಬೇಕು. ಈ ಸಂಬAಧ ಸರಕಾರದ ಗಮನ ಸೆಳೆಯುವುದಾಗಿ ರೈತ ಸಂಘಕ್ಕೆ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ತಾಲೂಕು ಸಂಚಾಲಕ ಪುಚ್ಚಿಮಾಡ ಸುಭಾಷ್, ಪ್ರಮುಖರಾದ ಮೂಕಳೇರ ಕುಶಾಲಪ್ಪ, ಅಜ್ಜಮಾಡ ಚಂಗಪ್ಪ, ಸಬಿತಾ ಭೀಮಯ್ಯ, ಪುಚ್ಚಿಮಾಡ ರಾಯ್ ಮಾದಪ್ಪ, ಮೇಚಂಡ ಕಿಸ, ಆಲೆಮಾಡ ಮಂಜುನಾಥ್, ಚಂಗುಲAಡ ಸೂರಜ್, ಶಂಕರಪ್ಪ, ಭವಿಕುಮಾರ್, ಜಯಶಂಕರ್, ಸುಬ್ಬಯ್ಯ, ಹೂವಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.