ಪೊನ್ನಂಪೇಟೆ, ಅ.೨೪: ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಸಗೂರು ಗ್ರಾಮದಲ್ಲಿ ಅಕ್ರಮವಾಗಿ ಗೋವುಗಳ ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ೩ ಹೋರಿ ಕರುಗಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ.

ತಾ.೨೩ ರಂದು ರಾತ್ರಿ ೧೦.೪೫ ಗಂಟೆ ಸಮಯದಲ್ಲಿ ವೃತ್ತ ನಿರೀಕ್ಷಕ ಜಯರಾಮ್ ಅವರ ಮೊಬೈಲ್‌ಗೆ ಕರೆ ಮಾಡಿದ ಮಾಹಿತಿದಾರರೊಬ್ಬರು, ಬೆಸಗೂರು ಗ್ರಾಮದಲ್ಲಿ ೩ ಕರುಗಳನ್ನು ಕಟ್ಟಿ ಹಾಕಿ ಪಿಕ್‌ಅಪ್ ವಾಹನದಲ್ಲಿ ಅಕ್ರಮ ಸಾಗಾಟ ಮಾಡಲು ತಯಾರಿ ನಡೆಸುತ್ತಿದ್ದಾರೆ ಎಂಬುದಾಗಿ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ವೃತ್ತ ನಿರೀಕ್ಷಕ ತಡಮಾಡದೆ ತಮ್ಮ ಸಿಬ್ಬಂದಿಯನ್ನು ಕರೆದುಕೊಂಡು ಬೆಸಗೂರು ಗ್ರಾಮಕ್ಕೆ ದೌಡಾಯಿಸಿದ್ದಾರೆ.

(ಮೊದಲ ಪುಟದಿಂದ) ಎಂಬುದಾಗಿ ಮಾಹಿತಿ ದೊರೆತಿದೆ. ಎರಡೂ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಗಾಡಿಯನ್ನು ಬಿಟ್ಟು ಓಡಿ ಹೋದವರು ತಮ್ಮ ಮೊಬೈಲ್ ಫೋನನ್ನು ಗಾಡಿಯಲ್ಲಿಯೇ ಬಿಟ್ಟು ಹೋಗಿದ್ದು, ಅವರ ಮೊಬೈಲ್ ಆದರಿಸಿ ತನಿಖೆ ನಡೆಸಲಾಗುತ್ತಿದ್ದು, ಸದ್ಯದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು. ರಕ್ಷಣೆ ಮಾಡಿದ ಕರುಗಳನ್ನು ಮೈಸೂರಿನ ಗೋ ಸಂರಕ್ಷಣಾ ಕೇಂದ್ರ ಪಿಂಜರ ಪೋಲ್‌ಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗುವುದು ಎಂದು ವೃತ್ತ ನಿರೀಕ್ಷಕರಾದ ಜಯರಾಮ್ ತಿಳಿಸಿದ್ದಾರೆ.

ಕಾರ್ಯಾಚರಣೆ ಸಂದರ್ಭ ಎಎಸ್‌ಐ ಉದಯಕುಮಾರ್, ಪಿ.ಜಿ.ದೇವರಾಜು, ಹೆಡ್ ಕಾನ್ಸ್ಟೇಬಲ್ ಅಬ್ದುಲ್ ಮಜೀದ್, ಸಿಬ್ಬಂದಿಗಳಾದ ಲೋಕೇಶ್, ಕೃಷ್ಣಮೂರ್ತಿ, ಹರೀಶ್ ಹಾಗೂ ಚಾಲಕ ಬಶೀರ್ ಭಾಗವಹಿಸಿದ್ದರು. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. -ಚನ್ನನಾಯಕ