ನಾಪೋಕ್ಲು, ಅ. ೨೪ ಒಂದು ಜನಾಂಗದ ಪದ್ಧತಿ ಆಚಾರವಿಚಾರ ಪದ್ಧತಿ ಪರಂಪರೆಗಳ ಬಗ್ಗೆ ದೃಢವಾದ ನಂಬಿಕೆ ಇದ್ದಾಗ ಮಾತ್ರ ಆ ಜನಾಂಗದ ಒಳಿತುಗಳನ್ನು ಇತರರಿಗೆ ಹೇಳಲು ಸಾಧ್ಯ ಎಂದು ಹೈಕೋರ್ಟ್ ವಕೀಲ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಹೇಳಿದರು. ಇಲ್ಲಿನ ಚೆರಿಯಪ ರಂಬುವಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾಂಗಣದಲ್ಲಿ ನಾಲ್ಕುನಾಡು ಪ್ಲಾಂರ‍್ಸ್ ರಿಕ್ರಿಯೇಷನ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೊಡವ ಜನಾಂಗ ಹಿಂದಿನಿAದಲೂ ಆಚರಿಸಿಕೊಂಡು ಬಂದ ಪದ್ದತಿ ಪರಂಪರೆಗಳನ್ನು ಮುಂದುವರೆಸಬೇಕು. ಇದನ್ನು ಎಲ್ಲರೂ ಪಾಲಿಸಿದಾಗ ಮಾತ್ರ ಕೋವಿಯ ಹಕ್ಕಿನ ಹೋರಾಟದಲ್ಲಿ ಜಯಲಭಿಸಲು ಸಾಧ್ಯ ಎಂದರು.

ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಬಾಚಮಂಡ ಪೂವಣ್ಣ ಮಾತನಾಡಿದರು. ಶೂಟಿಂಗ್ ಸ್ಪರ್ಧೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಸ್ಪರ್ಧೆಯೊಂದರ

(ಮೊದಲ ಪುಟದಿಂದ) ವಿಜೇತರನ್ನು ಕೇಟೋಳಿರ ಶಾರದಾ, ಮೂವೇರ ಧರಣಿ ಗಣಪತಿ ಹಾಗೂ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ ಆಯ್ಕೆ ಮಾಡಿದರು.

ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಕ್ಲಬ್ ಉಪಾಧ್ಯಕ್ಷ ಅರೆಯಡ ರತ್ನ ಪೆಮ್ಮಯ್ಯ, ಕಾರ್ಯದರ್ಶಿ ಚಿಯಕಪೂವಂಡ ಅಪ್ಪಚ್ಚು, ಸಹ ಕಾರ್ಯದರ್ಶಿ ಕೇಟೋಳಿರ ಹರೀಶ್ ಪೂವಯ್ಯ, ಖಜಾಂಚಿ ಕರವಂಡ ಬೆಲ್ಲು ಬೆಳ್ಯಪ್ಪ, ಸದಸ್ಯರಾದ ಬೊಳ್ಳಚೆಟ್ಟೀರ ಸುರೇಶ್, ಅರೆಯಡ ಅಶೋಕ, ಚೇನಂಡ ಸುರೇಶ್, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಬಡಕಡ ಸುರೇಶ್ ಬೆಳ್ಯಪ್ಪ, ಕೇಟೋಳಿರ ವಿನೋದ್, ಕುಂಡ್ಯೋಳAಡ ಬೋಪಣ್ಣ, ಕೇಟೋಳಿರ ಶಮ್ಮಿ, ಚೋಕಿರ ರೋಷನ್ ಇದ್ದರು.

ಚೋಕಿರ ಸಜಿತ್ ಪ್ರಾರ್ಥಿಸಿ, ಬಾಚಮಂಡ ಲವ ಚಿಣ್ಣಪ್ಪ ಸ್ವಾಗತಿಸಿದರು. ಮುಕ್ಕಾಟಿರ ವಿನಯ್ ನಿರೂಪಿಸಿ, ಕೇಟೋಳಿರ ಹರೀಶ್ ಪೂವಯ್ಯ ವಂದಿಸಿದರು. - ದುಗ್ಗಳ / ಪ್ರಭಾಕರ್