(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ಅ. ೨೪: ಕೊಡಗು ಜಿಲ್ಲೆಯಾದ್ಯಂತ ಪ್ರಾಚೀನ ಕಾಲದ ದೇವಾಲಯಗಳು ಜೀರ್ಣೋದ್ಧಾರಗೊಳ್ಳುತ್ತಿರುವುದು ಪ್ರಸ್ತುತ ಕಂಡು ಬರುತ್ತಿದೆ. ಜೀರ್ಣೋದ್ಧಾರದ ಸಂದರ್ಭದಲ್ಲಿ ಆಯಾ ದೇಗುಲಗಳಲ್ಲಿ ಭಗ್ನಗೊಂಡ ವಿಗ್ರಹಗಳು ಗೋಚರಿಸುತ್ತಿವೆ. ಆದರೆ ಇಂತಹ ವಿಗ್ರಹಗಳು ಹಾಗೂ ಇತರ ಪ್ರಾಚೀನ ಕಾಲದ ವಸ್ತುಗಳು ನೀರು ಪಾಲಾಗುತ್ತಿವೆ ಎಂಬ ಮಾತು ಕೇಳಿ ಬಂದಿದೆ.
ಈ ನಿಟ್ಟಿನಲ್ಲಿ ಇಂತಹ ವಿಗ್ರಹಗಳು ಮತ್ತಿತರ ವಸ್ತುಗಳನ್ನು ಪೂಜಾ ವಿಧಿ-ವಿಧಾನಗಳ ಬಳಿಕ ನೀರಿನಲ್ಲಿ ವಿಸರ್ಜನೆ ಮಾಡುವ ಬದಲಾಗಿ ಮಡಿಕೇರಿಯಲ್ಲಿರುವ ಸರಕಾರಿ ವಸ್ತು ಸಂಗ್ರಹಾಲಯಕ್ಕೆ ನೀಡುವಂತೆ ಮನವಿ ಮಾಡಲಾಗಿದೆ. ಈ ರೀತಿಯಲ್ಲಿ ಪತ್ತೆಯಾಗುವ ವಿಗ್ರಹಗಳನ್ನು ಮೂಢ ನಂಬಿಕೆಯAತಹ ಕಾರಣಗಳಿಂದಲೋ ಅಥವಾ ಮತ್ತೆ ಯಾವುದೋ ನಂಬಿಕೆಯAತೆ ಅಲ್ಲಲ್ಲಿ ನೀರಿನಲ್ಲಿ ವಿಸರ್ಜನೆ ಮಾಡಲಾಗುತ್ತಿದೆ. ಆದರೆ ಇವುಗಳು ಪ್ರಾಚೀನ ಪರಂಪರೆಗೆ ಸಾಕ್ಷಿಯಾದಂತಿವೆ. ಇವುಗಳನ್ನು ಈ ರೀತಿಯಾಗಿ ನಾಶ ಮಾಡುವ ಬದಲಾಗಿ ವಸ್ತು ಸಂಗ್ರಹಾಲಯಕ್ಕೆ ನೀಡಿದಲ್ಲಿ ಅದನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಿ ಇಡಲಾಗುವುದು ಎಂದು ವಸ್ತು ಸಂಗ್ರಹಾಲಯದ ಕ್ಯೂರೇಟರ್ ಆಗಿರುವ ರೇಖಾ ಅವರು ‘ಶಕ್ತಿ’ ಮೂಲಕ ಮನವಿ ಮಾಡಿದ್ದಾರೆ.
ಈಗಾಗಲೇ ಹಲವಾರು ವಿಗ್ರಹಗಳು ಮೈತಾಡಿ, ಭಾಗಮಂಡಲ, ತಲಕಾವೇರಿ, ಬೇತ್ರಿ, ಕುಶಾಲನಗರ ವ್ಯಾಪ್ತಿಯ ನದಿಗಳಲ್ಲಿ ವಿಸರ್ಜಿಸಲ್ಪಟ್ಟಿದೆ ಎಂಬದಾಗಿ ತಿಳಿದು ಬಂದಿದೆ ಎಂದು ವಿಷಾದಿಸಿರುವ ಅವರು, ಇಂತಹ ವಸ್ತುಗಳನ್ನು ಪೂಜೆ ಮತ್ತಿತರ ವಿಧಿ-ವಿಧಾನಗಳನ್ನು ನೆರವೇರಿಸಿದ ಬಳಿಕ ವಸ್ತು ಸಂಗ್ರಹಾಲಯವನ್ನು ಸಂಪರ್ಕಿಸಿದರೆ ಇಲಾಖೆಯ ಮೂಲಕವೇ ಅದನ್ನು ಆಯಾ ಸ್ಥಳದಿಂದಲೇ ಸಂಗ್ರಹಿಸಲಾಗುವುದು. ಬಳಿಕ ಅದನ್ನು ವಸ್ತು ಸಂಗ್ರಹಾಲಯದಲ್ಲಿ ಆಯಾ ಊರಿನ ಹೆಸರು, ದೇವಾಲಯದ ಹೆಸರಿನ ಮಾಹಿತಿಯ ಸಹಿತವಾಗಿ ಸಂರಕ್ಷಿಸಿ ಇಡಲಾಗುವುದು ಎಂದು ರೇಖಾ ಅವರು ವಿನಂತಿಸಿದ್ದಾರೆ. ಇವು ಮುಂದಿನ ಪೀಳಿಗೆಗೂ ನೆರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬಿರುನಾಣಿಯಿಂದ ಬಂದ ವಿಗ್ರಹ : ಕೆಲವು ದಿನಗಳ ಹಿಂದೆ ಬಿರುನಾಣಿಯ ಶ್ರೀ ಲಕ್ಷಿö್ಮ ನಾರಾಯಣ ದೇವಾಲಯದಲ್ಲಿ ೧೨-೧೩ನೇ ಶತಮಾನಕ್ಕೆ ಸೇರಿದಂತಹ ಭಗ್ನಗೊಂಡ ವಿಷ್ಣುಮೂರ್ತಿ ವಿಗ್ರಹವೊಂದು ಪತ್ತೆಯಾಗಿತ್ತು. ಇದನ್ನು ಅಲ್ಲಿನ ಸ್ಥಳೀಯರು ನೀಡಿದ ಮಾಹಿತಿ ಹಾಗೂ ಸಹಕಾರದೊಂದಿಗೆ ಇದೀಗ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದ್ದು, ಸಾರ್ವಜನಿಕರ ಪ್ರದರ್ಶನಕ್ಕೆ ಮಾಹಿತಿ ಸಹಿತವಾಗಿ ಸಿದ್ಧಪಡಿಸಲಾಗಿದೆ. ಆದರೆ ಕೈಕೇರಿ ಗ್ರಾಮದ ಭಗವತಿ ದೇವಸ್ಥಾನದ ಕೆರೆಯಲ್ಲಿ ಪತ್ತೆಯಾದ ವಿಗ್ರಹವೊಂದು ಮತ್ತೆ ನೀರಿನಲ್ಲಿ ಕಣ್ಮರೆಯಾಗಿದೆ. ನಂಜರಾಯಪಟ್ಟಣದ ದೇವಿರಮ್ಮ ವಿಗ್ರಹವೊಂದು ಇದೇ ರೀತಿ ನೀರು ಪಾಲಾಗಿದೆ ಎಂಬ ಮಾಹಿತಿ ದೊರೆತಿದೆ. ಇಂತಹ ಇನ್ನು ಕೆಲವು ಮಾಹಿತಿಗಳ ಆಧಾರದಲ್ಲಿ ಬೇತ್ರಿ, ಮೈತಾಡಿಯಂತಹ ಕಡೆಗಳಲ್ಲಿ ವಸ್ತು ಸಂಗ್ರಹಾಲಯದ ಅಧಿಕಾರಿಗಳು ನೀರಿನಲ್ಲಿ ಮುಳುಗು ತಜ್ಞರ ನೆರವಿನಿಂದ ಹುಡುಕಾಟ ನಡೆಸಿರುವರಾದರೂ ಪ್ರಯೋಜನವಾಗಿಲ್ಲ. ವಿಗ್ರಹಗಳು ನೀರಿನ ಸೆಳೆತದೊಂದಿಗೆ ಕೊಚ್ಚಿ ಹೋಗಿರುತ್ತವೆ ಎಂದು ರೇಖಾ ತಿಳಿಸಿದ್ದಾರೆ.
ಸರಕಾರಿ ವಸ್ತು ಸಂಗ್ರಹಾಲಯವು ಪ್ರಾಚ್ಯ ವಸ್ತು ಸಂಗ್ರಹಾ ಇಲಾಖೆಯ ಅಧೀನದಲ್ಲಿ ಬರುತ್ತಿದ್ದು, ನಗರದ ಕೋಟೆ ಆವರಣದಲ್ಲಿ ಈ ವಸ್ತು ಸಂಗ್ರಹಾಲಯವಿದೆ. ಈ ಬಗ್ಗೆ ವಿವರಗಳು, ಮಾಹಿತಿ, ಸಹಾಯಕ್ಕೆ (೨೨೫೬೭೪, ೯೯೧೬೧೫೪೨೩೭) ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.
ವಸ್ತು ಸಂಗ್ರಹಾಲಯ ಕುರಿತು
ಕೊಡಗು ಕರ್ನಾಟಕದ ಒಂದು ಪ್ರಮುಖ ಜಿಲ್ಲೆ. ಸೃಷ್ಟಿ ಸೌಂದರ್ಯಕ್ಕೆ ಕಾಫಿ, ಏಲಕ್ಕಿ, ಕಿತ್ತಳೆಗಳಿಗೆ ಪ್ರಸಿದ್ಧವಾಗಿದ್ದರೂ, ಮೂಲತಃ ಇಲ್ಲಿನ ಜನರ ಸಂಸ್ಕೃತಿ, ಆಚಾರ-ವಿಚಾರಗಳು ಹಾಗೂ ವೇಷಭೂಷಣಗಳು ಮತ್ತು ಭಾಷೆ ಇವುಗಳಿಗೆ ತಮ್ಮದೇ ಆದ ವೈಶಿಷ್ಟö್ಯವಿದೆ. ಪಾರಂಪರಿಕವಾಗಿ ಕೊಡವರು ಇಂದಿಗೂ ಕೂಡ ತಮ್ಮ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿದ್ದಾರೆ. ಈ ಸಂಪ್ರದಾಯದ ಜೊತೆ ವಿವಿಧ ಕೋಮಿಗೆ ಸೇರಿದ ಕಲೆ, ಪ್ರಾಚೀನ ಶಿಲ್ಪಗಳು, ಸ್ಮಾರಕಗಳು, ಶಾಸನಗಳು, ವಿವಿಧ ವಿನ್ಯಾಸದ ಆಯುಧಗಳು ಇಂದಿಗೂ ಉಳಿದು ಬಂದಿವೆ. ಇವೆಲ್ಲ ಕೊಡಗು ಪ್ರದೇಶವನ್ನು ಆಳಿದ ರಾಜಮಹಾರಾಜರ ಕಾಲದ ಪ್ರಮುಖ ಅವಶೇಷಗಳಾಗಿವೆ.
ಗಂಗ, ಕೊಂಗಾಳ್ವ, ಚೆಂಗಾಳ್ವ, ಹೊಯ್ಸಳ, ವಿಜಯನಗರ, ಬೇಲೂರು ನಾಯಕರು, ನಂತರ ಕೊಡಗಿನ ರಾಜರು ಈ ಪ್ರದೇಶವನ್ನು ಆಳಿದರು. ಇವರ ನಂತರ ಸ್ವಾತಂತ್ರö್ಯದವರೆಗೆ ಈ ಪ್ರದೇಶ ಬ್ರಿಟಿಷ್ ಅಧಿಕಾರಕ್ಕೆ ಒಳಪಟ್ಟಿತ್ತು.