*ವೀರಾಜಪೇಟೆ, ಅ. ೨೩ : ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಗಣಪತಿ ಬೀದಿಯ ವಿಜಯ ಕುಮಾರಿ ಎಂಬವರ ಮನೆಯ ತಡೆಗೋಡೆ ಕುಸಿದು, ಮನೆಯ ಎರಡು ಕೊಠಡಿಗಳು ಸಂಪೂರ್ಣ ಹಾನಿಯಾಗಿವೆ.

ಐದು ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಈ ವಿಷಯದ ಬಗ್ಗೆ ಸಂಬAಧಿಸಿದ ಇಲಾಖೆ ಅವರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುತ್ತೇನೆ ಎಂದು ವಾರ್ಡಿನ ಸದಸ್ಯ ಅನಿತಾ ಕುಮಾರ್ ಮಾಹಿತಿ ನೀಡಿದರು. ಮಳೆ ಪರಿಹಾರ ನಿಧಿಯಲ್ಲಿ ಕೆಲಸ ಮಾಡಲು ಕ್ರಮವನ್ನು ಕೈಗೊಳ್ಳುತ್ತೇವೆ. ಈಗಾಗಲೇ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಂದು ಮನೆಯ ಮಾಲೀಕರಾದ ವಿಜಯ ಕುಮಾರಿ ತಿಳಿಸಿದ್ದಾರೆ.