ಮಡಿಕೇರಿ, ಅ. ೨೩: ಸಂಪ್ರದಾಯದAತೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಪರದಂಡ ಕುಟುಂಬಸ್ಥರಿAದ ಆಚರಿಸಿಕೊಂಡು ಬರಲಾಗುತ್ತಿರುವ ತೊಲಿಯಾರು ೧೦ರ ಆರಾಧನೋತ್ಸವ ತಾ. ೨೭ ರಂದು ನಡೆಯಲಿದೆ. ಎಂದಿನAತೆ ಪೂಜಾ ವಿಧಿವಿಧಾನಗಳು ನಡೆಯಲಿದ್ದು, ತುಲಾಭಾರ ಸೇವೆ ನಡೆಸಲು ಇಚ್ಚಿಸುವ ಭಕ್ತರು ದೇವಸ್ಥಾನದ ಪಾರುಪತ್ಯೆ ಗಾರರನ್ನು ಸಂಪರ್ಕಿಸಬಹುದು.

ಭಕ್ತಾದಿಗಳು ಕೋವಿಡ್ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಶ್ರೀ ಇಗ್ಗುತ್ತಪ್ಪ ದೇವರ ಉತ್ಸವ ಮೂರ್ತಿಯ ನಾಟ್ಯ ಪ್ರದಕ್ಷಿಣೆಯಲ್ಲಿ ಭಾಗವಹಿಸಬಹುದು ಎಂದು ದೇವತಕ್ಕರಾದ ಪರದಂಡ ಕುಟುಂಬಸ್ಥರು ತಿಳಿಸಿದ್ದಾರೆ.