ಪೊನ್ನAಪೇಟೆ, ಅ. ೨೩: ಪೊನ್ನಂಪೇಟೆ ತಾಲೂಕಿಗೆ ಸಂಬAಧಿಸಿದ ಭೂ ದಾಖಲೆಗಳ ಮಾಹಿತಿಯನ್ನು ಬೆಂಗಳೂರಿನ ಭೂಮಿ ಕೇಂದ್ರಕ್ಕೆ ಲಿಂಕ್ ಮಾಡಲಾಗಿದ್ದು, ಇನ್ನು ಮುಂದೆ ಪೊನ್ನಂಪೇಟೆ ತಾಲೂಕಿಗೆ ಸಂಬAಧಿಸಿದ ಭೂದಾಖಲೆಗಳಲ್ಲಿ (ಆರ್‌ಟಿಸಿ) ವೀರಾಜಪೇಟೆ ತಾಲೂಕಿನ ಬದಲು ಪೊನ್ನಂಪೇಟೆ ತಾಲೂಕು ಎಂದು ನಮೂದಾಗಿರುತ್ತದೆ ಎಂದು ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗಾನಂದ ಮಾಹಿತಿ ನೀಡಿದ್ದಾರೆ.
ಪೊನ್ನಂಪೇಟೆ ನಾಗರಿಕ ವೇದಿಕೆಯವರ ನಿರಂತರ ಪ್ರಯತ್ನ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕರಾದ ಕೆ ಜಿ ಬೋಪಯ್ಯ ಅವರ ಸಹಕಾರದಿಂದ ಈ ಬದಲಾವಣೆಯಾಗಿದೆ ಎಂದು ವೇದಿಕೆ ಅಧ್ಯಕ್ಷ ಪೂಣಚ್ಚ ಹರ್ಷ ವ್ಯಕ್ತಪಡಿಸಿದ್ದಾರೆ. ಪೊನ್ನಂಪೇಟೆ ತಾಲೂಕು ಕಚೇರಿಯ ವಿಷಯಕ್ಕೆ ಸಂಬAಧಿಸಿದAತೆ ಪೊನ್ನಂಪೇಟೆ ನಾಗರಿಕ ವೇದಿಕೆಯ ಪದಾಧಿಕಾರಿಗಳಾದ ಮೂಕಳೇರ ಕುಶಾಲಪ್ಪ, ಎರ್ಮು ಹಾಜಿ, ಮತ್ರಂಡ ಅಪ್ಪಚ್ಚು ಹಾಗೂ ಪಿ.ಕೆ. ಗಿರೀಶ್ ಮಡಿಕೇರಿಯ ಜಿಲ್ಲಾಧಿಕಾರಿಗಳ ಭವನಕ್ಕೆ ತೆರಳಿ ನೂತನ ಜಿಲ್ಲಾಧಿಕಾರಿ ಸತೀಶ ಅವರನ್ನು ಭೇಟಿ ಮಾಡಿ ಪೊನ್ನಂಪೇಟೆ ತಾಲೂಕಿಗೆ ತಹಶೀಲ್ದಾರ್‌ರನ್ನು ನೇಮಕ ಮಾಡುವಂತೆ ಹಾಗೂ ಸದ್ಯಕ್ಕೆ ಪೊನ್ನಂಪೇಟೆ ನಾಡಕಚೇರಿಯಲ್ಲಿ ಭೂ ದಾಖಲೆಗಳನ್ನು ಪಡೆಯಲು ಅವಕಾಶವಿದ್ದು, ಪೊನ್ನಂಪೇಟೆ ತಾಲೂಕು ಕಚೇರಿಯಲ್ಲಿಯೂ ಕೂಡ ದಾಖಲೆಗಳು ಸಿಗುವಂತೆ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ತಾಲೂಕು ಕಛೇರಿಗೆ ಇಬ್ಬರು ಕಂಪ್ಯೂಟರ್ ಆಪರೇಟರ್‌ಗಳನ್ನು ಶೀಘ್ರವಾಗಿ ನೇಮಿಸಬೇಕು ಎಂಬದಾಗಿ ಮನವಿ ಮಾಡಿಕೊಂಡಿದ್ದಾರೆ. ಮನವಿಗೆ ಸ್ಪಂದಿಸಿರುವ ಜಿಲ್ಲಾಧಿಕಾರಿಗಳು ಪೊನ್ನಂಪೇಟೆ ತಾಲೂಕಿಗೆ ಭೇಟಿ ನೀಡಿ, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ನಾಗರಿಕ ವೇದಿಕೆ ತಿಳಿಸಿದೆ.
-ಚನ್ನನಾಯಕ್