೧೯೭೯ ಸೆಪ್ಟಂಬರ್ ೨ ಅಂರ‍್ರಾಷ್ಟಿçÃಯ ರೋಟರಿ ಅಧ್ಯಕ್ಷ ಜೇಮ್ಸ್ ಎಸ್.ಎಲ್. ಬೋಮರ್ ಆ ಪುಟ್ಟ ಮಗುವಿಗೆ ಪುಟ್ಟ ಹನಿಗಳನ್ನು ಬಾಯಿಗೆ ಹಾಕುವಾಗ ಸ್ವತಃ ಅವರ ಕಣ್ಣಂಚಿನಲ್ಲಿ ನೀರು ಹರಿಯಲು ಸಿದ್ಧವಾಗಿತ್ತು.
ಪೋಲಿಯೋ ಎಂಬ ಮಾರಣಾಂತಿಕ ಸೋಂಕಿಗೆ ಬಲಿಯಾದ ಲಕ್ಷಾಂತರ ಪುಟ್ಟ ಮಕ್ಕಳ ಮುಖಗಳು ಬೋಮರ್ ಮನದಲ್ಲಿ ಮೂಡಿತ್ತು. ತಾವು ಹಾಕುತ್ತಿರುವ ಲಸಿಕೆ ಏನಾದರೂ ವಿಶ್ವವ್ಯಾಪಿ ಯಶಸ್ವಿಯಾದರೆ ಅದೆಷ್ಟು ಕೋಟಿ ಮಕ್ಕಳ ಜೀವ ಉಳಿಯಬಹುದು ಎಂದು ಯೋಚಿಸಿಯೇ ಬೋಮರ್ ರೋಮಾಂಚನಗೊAಡಿದ್ದರು. ಲಸಿಕೆ ಹಾಕಿದ ಬಳಿಕ ಬೋಮರ್ ಅವರನ್ನುದ್ದೇಶಿಸಿ ಮಗುವೊಂದು ಥ್ಯಾಂಕ್ಯು ರೋಟರಿ ಎಂದಾಗ ಬೋಮರ್‌ಗೆ ಆ ಸೇವೆ ಸಾರ್ಥಕ ಎನ್ನಿಸಿತು.
ಕಾಲಿನ ಸ್ನಾಯುಗಳನ್ನು ನಿಶಕ್ತಿಗೊಳಿಸುವ ಪೋಲಿಯೋ ಎಂಬ ಮಾರಕ ಸೋಂಕಿನ ವಿರುದ್ಧದ ಹೋರಾಟಕ್ಕೆ ರೋಟರಿ ಎಂಬ ಅಂರ‍್ರಾಷ್ಟಿçÃಯ ಸೇವಾ ಸಂಸ್ಥೆಯ ಜಾಗತಿಕ ಸಮರ ಅಂದಿನಿAದಲೇ ಪ್ರಾರಂಭವಾಯಿತು. ಪೋಲಿಯೋ ಸೋಂಕಿನಿAದ ಪುಟ್ಟ ಮಕ್ಕಳ ಸಾವನ್ನು ತಡೆಯಲು, ಸೋಂಕಿನಿAದ ಹೆಜ್ಜೆ ಹಾಕಲೂ ಸಾಧ್ಯವಾಗದಂತೆ ಕಾಲಿನ ಸ್ನಾಯುಗಳನ್ನೇ ನಿಶಕ್ತಿಗೊಳಿಸುವ ಸೋಂಕಿನ ವಿರುದ್ಧ ರೋಟರಿ ಹಮ್ಮಿಕೊಂಡ ಬೃಹತ್ ಹೋರಾಟಕ್ಕೆ ಈಗ ೩೫ ವರ್ಷಗಳು ತುಂಬಿವೆ.
ಪೋಲಿಯೋವನ್ನು ವಿಶ್ವದಾದ್ಯಂತಲಿನಿAದ ನಿರ್ಮೂಲನೆ ಮಾಡಬೇಕೆಂಬ ರೋಟರಿಯ ಮಹತ್ವದ ಹೋರಾಟದ ಹೆಜ್ಜೆಯಲ್ಲಿ ೨೧೨ ದೇಶಗಳ ಲಕ್ಷಾಂತರ ರೋಟರಿ ಸದಸ್ಯರ ಶ್ರಮವಿದೆ. ಕೋಟಿಗಟ್ಟಲೆ ಹಣ ರೋಟರಿ ಮೂಲಕ ವ್ಯಯವಾಗಿದೆ. ರೋಟರಿ ಸದಸ್ಯರ ಅಮೂಲ್ಯ ಸಮಯ ಪೋಲಿಯೋ ವಿರುದ್ಧದ ಹೋರಾಟಕ್ಕೆ ಮುಡಿಪಾಗಿದೆ.
ಪೋಲಿಯೋ ವಿರುದ್ಧದ ಸಮರ ಇನ್ನೂ ನಿಂತಿಲ್ಲ. ಯಾಕೆಂದರೆ ಪೋಲಿಯೋವನ್ನು ಇನ್ನೂ ಸಂಪೂರ್ಣವಾಗಿ ಜಗತ್ತಿನಲ್ಲಿ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ.
ಹೀಗಾಗಿ ಪ್ರತೀ ವರ್ಷ ಅಕ್ಟೋಬರ್ ೨೪ ರಂದು ಪೋಲಿಯೋ ನಿರೋಧಕ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದ್ದು, ಪೋಲಿಯೋ ಮುಕ್ತ ವಿಶ್ವಕ್ಕೆ ರೋಟರಿ ಪಣ ತೊಟ್ಟಿದೆ. ವಿಶ್ವದಾದ್ಯಂತ ಅಕ್ಟೋಬರ್ ೨೪ ರಂದು ೫ ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ನಿರೋಧಕ ಲಸಿಕೆ ಹಾಕುವ ಮೂಲಕ ಪೋಲಿಯೋ ಸೋಂಕು ತಡೆಗಟ್ಟುವಲ್ಲಿ ಸರ್ಕಾರದೊಂದಿಗೆ ರೋಟರಿ ಕೂಡ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಲೇ ಬಂದಿದೆ.
***
ಪೋಲಿಯೋ ಇತಿಹಾಸವನ್ನು ಅವಲೋಕಿಸುವುದಾದಲ್ಲಿ...
೧೮೯೪ ರಲ್ಲಿ ಅಮೇರಿಕಾ ಸಂಸ್ಥಾನದಲ್ಲಿ ಮೊದಲ ಬಾರಿಗೆ ಮಕ್ಕಳಲ್ಲಿ ಕಾಣಿಸಿಕೊಂಡ ವಿಚಿತ್ರ ಸೋಂಕು ಆ ವರ್ಷ ೧೮ ಕಂದಮ್ಮಗಳನ್ನು ಬಲಿ ತೆಗೆದುಕೊಂಡಿತ್ತು. ೧೩೨ ಪುಟಾಣಿಗಳು ಶಾಶ್ವತವಾಗಿ ಅಂಗವೈಕಲ್ಯತೆ ಹೊಂದಿದರು.
೧೯೦೫ ರಲ್ಲಿ ಸ್ವೀಡನ್‌ನ ವೈದ್ಯ ಡಾ. ವಿಕ್‌ಮೆನ್ ಈ ಸೋಂಕು ಸಾಂಕ್ರಾಮಿಕವಾಗಿದ್ದು, ವ್ಯಕ್ತಿಯಿಂದ ವ್ಯಕ್ತಿಗೆ ಯಾವುದೇ ಸಂದರ್ಭವೂ ಹಬ್ಬುತ್ತದೆ ಎಂದು ತನ್ನ ಸಂಶೋಧನೆಯನ್ನು ಜಗತ್ತಿಗೆ ಮನವರಿಕೆ ಮಾಡಿದರು.
೧೯೦೮ ರಲ್ಲಿ ವೀಯನ್ನ ದೇಶದ ಡಾ. ಇಡ್ವಿನ್ ಪೋಪರ್ ಇದು ಮಾರಣಾಂತಿಕ ಸೋಂಕು ಎಂದು ಸಂಶೋಧನೆಯ ಮೂಲಕ ತಿಳಿಸಿದರಲ್ಲದೇ ಇದು ವಿಶ್ವವ್ಯಾಪಿ ವ್ಯಾಪಿಸುತ್ತಾ ಹಲವರ ಸಾವಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
೧೯೧೬ - ಅಪಾಯದ ವರ್ಷ ಎದುರಾಗಿಯೇ ಬಿಟ್ಟಿತು. ನ್ಯೂಯಾರ್ಕ್ ನಗರದಲ್ಲಿಯೇ ೨ ಸಾವಿರ ಮಕ್ಕಳು ಸೋಂಕಿಗೆ ಬಲಿಯಾದರೆ ಅಮೇರಿಕಾದಲ್ಲಿ ಒಟ್ಟು ೬೦೦೦ ಮಕ್ಕಳು ಸೋಂಕಿನಿAದ ಕೊನೆ ಉಸಿರೆಳೆದರು. ಸಾವಿರಾರು ಮಕ್ಕಳ ಅಂಗಾAಗ ನಿಷ್ತೇಜವಾಯಿತು. ನಿಜವಾದ ಭಯ ವಿಶ್ವವ್ಯಾಪಿ ಆವರಿಸಿಕೊಂಡಿತ್ತು.
೧೯೫೫ - ಡಾ. ಜೋನ್ಸ್ ಸೈಕ್ ಎಂಬ ಅಮೇರಿಕಾದ ವೈರಾಣು ಸಂಶೋಧಕ ಸೋಂಕಿಗೆ ಲಸಿಕೆ ಕಂಡುಹಿಡಿದರು. ಇದು ಸೋಂಕಿನಿAದ ಸುರಕ್ಷಿತ ಮತ್ತು ಪ್ರಭಾವಶಾಲಿಯಾಗಿದೆ ಎಂದು ಅನೇಕ ವರ್ಷಗಳ ಪ್ರಯೋಗದಿಂದ ಖಚಿತವಾಗಿತ್ತು. ಸೋಂಕಿಗೆ ಪೋಲಿಯೋ ಎಂದು ಹೆಸರಿಡಲಾಯಿತು. (ಅನಂತರ ಡಾ. ಜೋನ್ಸ್ ಸೈಕ್‌ನ ಹುಟ್ಟು ಹಬ್ಬವಾದ ಅಕ್ಟೋಬರ್ ೨೪ ರಂದೇ ಜಗತ್ತಿನಾದ್ಯಂತ ಪೋಲಿಯೋ ನಿರೋಧಕ ದಿನವನ್ನು ಆಚರಿಸಲಾಗುತ್ತಿದೆ).
೧೯೬೦ ರಲ್ಲಿ ಅಮೇರಿಕಾ ದೇಶ ಲಸಿಕೆಗೆ ಅಧಿಕೃತ ಮನ್ನಣೆ ನೀಡಿ ಮಕ್ಕಳಿಗೆ ಇದನ್ನು ಹಾಕಬಹುದು ಎಂದಾಗ ಜಗತ್ತಿನ ಇತರ ದೇಶಗಳು ಕೂಡ ಪೋಲಿಯೋ ವಿರುದ್ಧದ ಲಸಿಕೆ ಹಾಕಲು ಮುಂದೆ ಬಂದವು.
೧೯೭೯ ರಲ್ಲಿ ಪೋಲಿಯೋ ಸೋಂಕು ಭಾರೀ ಸಂಖ್ಯೆಯಲ್ಲಿ ಜಗತ್ತಿನಾದ್ಯಂತ ವ್ಯಾಪಿಸತೊಡಗಿತು. ಈ ಸಂದರ್ಭ ಫಿಲಿಫೈನ್ಸ್ ದೇಶದ ರೋಟರಿ ಸಂಸ್ಥೆಯೊAದು ತನ್ನ ಯೋಜನಾ ಕಾರ್ಯಕ್ರಮವಾಗಿ ಕ್ಲಬ್ ವ್ಯಾಪ್ತಿಯ ಮಕ್ಕಳಿಗೆ ಪೋಲಿಯೋ ನಿರೋಧಕ ಲಸಿಕೆ ಅಭಿಯಾನ ಪ್ರಾರಂಭಿಸಿತ್ತು. ಈ ಯೋಜನೆಗೆ ದೊರಕಿದ ಯಶಸ್ಸು ಮುಂದಿನ ದಿನಗಳಲ್ಲಿ ಅಂರ‍್ರಾಷ್ಟಿçÃಯ ಮಟ್ಟದಲ್ಲಿ ರೋಟರಿ ಸಂಸ್ಥೆಯು ತನ್ನ ಪ್ರಧಾನ ಆರೋಗ್ಯ ಯೋಜನೆಯಾಗಿ ಪೋಲಿಯೋ ವಿರುದ್ಧದ ಹೋರಾಟಕ್ಕೆ ಮುಂದಡಿ ಇಡಲು ಪ್ರೇರಣೆಯಾಯಿತು.
೧೯೮೫ ರಲ್ಲಿ ಅಂರ‍್ರಾಷ್ಟಿçÃಯ ರೋಟರಿ ಸಂಸ್ಥೆಯು ಪೋಲಿಯೋ ಪ್ಲಸ್ ಎಂಬ ಮತ್ತೊಂದು ಜಾಗತಿಕ ಆಂದೋಲನ ಪ್ರಾರಂಭಿಸಿತು. ೧೨೦ ಬಿಲಿಯನ್ ಡಾಲರ್ ಹಣವನ್ನು ಯೋಜನೆಗೆ ಮೀಸಲಿಡಲಾಯಿತು. ಪೋಲಿಯೋ ಮುಕ್ತ ಜಗತ್ತಿನ ಗುರಿ ಈ ಯೋಜನೆಯದ್ದಾಗಿತ್ತು.
೧೯೮೭ ರಲ್ಲಿ ಮತ್ತೊಂದು ಸವಾಲು ಎದುರಾಯಿತು. ೧೨೫ ದೇಶಗಳಲ್ಲಿ ಪೋಲಿಯೋ ಮಾರಣಾಂತಿಕ ಸೋಂಕು ವ್ಯಾಪಿಸಿತ್ತು ಇದುವರೆಗೆ ೩.೫೦ ಲಕ್ಷ ಮಕ್ಕಳು ಪೋಲಿಯೋದಿಂದ ಸಾವನ್ನಪ್ಪಿದ್ದರು.
೧೯೮೪ ರಲ್ಲಿ ಲಸಿಕೆಯ ಪರಿಣಾಮದಿಂದ ಪೋಲಿಯೋ ಮುಕ್ತ ದೇಶವಾಗಿ ಅಮೇರಿಕಾವು ಘೋಷಿಸಲ್ಪಟ್ಟಿತ್ತು. ಜಗತ್ತಿನ ಅನೇಕ ದೇಶಗಳು ಹೊಸ ಆಶಾಭಾವನೆಯನ್ನು ಈ ಮೂಲಕ ತಳೆದವು.
೧೯೯೫ ರಲ್ಲಿ ಭಾರತ ಮತ್ತು ಚೀನಾ ದೇಶಗಳಲ್ಲಿನ ೧೬೫ ಮಿಲಿಯನ್ ಮಕ್ಕಳಿಗೆ ಕೇವಲ ೧ ವಾರದಲ್ಲಿ ಪೋಲಿಯೋ ನಿರೋಧಕ ಲಸಿಕೆ ನೀಡಲಾಯಿತು.
೨೦೦೦ - ವಿಶ್ವದಾದ್ಯಂತಲಿನ ೫೫೦ ಮಿಲಿಯನ್ ಮಕ್ಕಳು, ಅಂದರೆ ಜಗತ್ತಿನ ಮಕ್ಕಳ ಪೈಕಿ ಶೇ. ೧೦ ರಷ್ಟು ಮಕ್ಕಳು ಲಸಿಕೆ ಪಡೆದು ಪೋಲಿಯೋ ಮುಕ್ತರಾದರು.
ಆಸ್ಟೆçÃಲಿಯಾ, ಚೀನಾ ಸೇರಿದಂತೆ ಈಶಾನ್ಯ ಫೆಸಿಫಿಕ್ ದೇಶಗಳು ಪೋಲಿಯೋ ಮುಕ್ತವಾದವು.
೨೦೦೬ - ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ನೈಜೀರಿಯ ಸೇರಿದಂತೆ ಜಗತ್ತಿನ ೪ ದೇಶಗಳಲ್ಲಿ ಮಾತ್ರ ಪೋಲಿಯೋ ಸೋಂಕಿನ ಇರುವಿಕೆ ಕಂಡುಬAತು. ಜಗತ್ತಿನ ಉಳಿದ ದೇಶಗಳು ಪೋಲಿಯೋ ಮುಕ್ತವಾದವು. ರೋಟರಿಯ ಲಕ್ಷಾಂತರ ಸದಸ್ಯರು ನಿಟ್ಟುಸಿರು ಬಿಟ್ಟರು.
೨೦೦೯ - ಅಮೇರಿಕಾದ ಬಿಲ್ ಗೇಟ್ಸ್ ಫೌಂಡೇಶನ್ ಮೀಸಲಿಟ್ಟ ೩೫೫ ಮಿಲಿಯನ್ ಡಾಲರ್ ಸೇರಿದಂತೆ ರೋಟರಿಯ ೨೦೦ ಮಿಲಿಯನ್ ಡಾಲರ್ ಒಳಗೊಂಡAತೆ ೫೫೫ ಮಿಲಿಯನ್ ಡಾಲರ್ ಆರ್ಥಿಕತೆಯಲ್ಲಿ ಜಾಗತಿಕ ಮಟ್ಟದಲ್ಲಿ ಪೋಲಿಯೋ ನಿರ್ಮೂಲನೆಗೆ ಮತ್ತೊಂದು ಬೃಹತ್ ಹೋರಾಟ ಪ್ರಾರಂಭವಾಯಿತು. ಪೋಲಿಯೋ ಮುಕ್ತ ವಿಶ್ವದ ಗುರಿಯನ್ನು ರೋಟರಿ ಹೊಂದಿತ್ತು.
೨೦೧೨ - ಭಾರತದ ಪಾಲಿಗೆ ಮಹತ್ವದ ವರ್ಷ, ೧ ವರ್ಷದಿಂದ ಭಾರತದಲ್ಲಿ ಪೋಲಿಯೋ ಸಂಬAಧಿತ ಯಾವುದೇ ಪ್ರಕರಣಗಳು ದಾಖಲಾಗಲಿಲ್ಲ. ೨೦೧೪ ರ ವೇಳೆಗೆ ಭಾರತದಲ್ಲಿ ಸತತ ೩ ವರ್ಷಗಳ ಕಾಲ ಪೋಲಿಯೋದ ಯಾವುದೇ ಪ್ರಕರಣಗಳು ಕಂಡುಬರಲಿಲ್ಲ.
೨೦೨೦ - ಜಗತ್ತಿನಲ್ಲಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಹೊರತುಪಡಿಸಿದರೆ ಉಳಿದೆಲ್ಲಾ ದೇಶಗಳು ಪೋಲಿಯೋ ಮುಕ್ತವಾದವು. ಆದರೆ ಈ ವರ್ಷದ ಜುಲೈನಲ್ಲಿ ಲಭಿಸಿದ ಅಂಕಿಅAಶದ ಪ್ರಕಾರ ಅಫ್ಘಾನಿಸ್ತಾನದಲ್ಲಿ ಇನ್ನೂ ಪೋಲಿಯೋ ಸೋಂಕು ತಾಂಡವವಾಡುತ್ತಿದೆ. ೨೦೧೯ ಕ್ಕೆ ಹೋಲಿಸಿದರೆ ೨೯ ಹೊಸ ಪ್ರಕರಣಗಳ ಮೂಲಕ ಶೇ. ೯೩ ರ ಹೆಚ್ಚಳವಾಗಿದೆ. ಪಾಕಿಸ್ತಾನದಲ್ಲಿ ೮೪ ಪ್ರಕರಣಗಳ ಮೂಲಕ ೨೦೧೯ ಕ್ಕೆ ಹೋಲಿಸಿದರೆ ಪೋಲಿಯೋ ಪ್ರಕರಣ ಶೇ. ೪೩ ರಷ್ಟು ಇಳಿಕೆಯಾಗಿದೆ.
***
ಯಾಕಾಗಿ ಪೋಲಿಯೋ ಮುಕ್ತ ವಿಶ್ವದ ಗುರಿ ರೋಟರಿಗೆ ಇದೆ ಎಂದರೆ...
ಇನ್ನೂ ಪೋಲಿಯೋ ಎಂಬ ಮಾರಣಾಂತಿಕ ಸೋಂಕು ಜಗತ್ತಿನಿಂದ ಸಂಪೂರ್ಣವಾಗಿ ಕಣ್ಮರೆಯಾಗಿಲ್ಲ. ಪಾಕಿಸ್ತಾನ, ಅಫ್ಘಾನಿಸ್ತಾನಗಳಲ್ಲಿ ಇನ್ನೂ ಸೋಂಕು ತಾಂಡವವಾಡುತ್ತಿದೆ. ಲಸಿಕೆ ಪಡೆಯದೇ ಇದ್ದಲ್ಲಿ ಭಾರತಕ್ಕೂ ಇದು ಯಾವುದೇ ಕ್ಷಣದಲ್ಲಿ ಲಗ್ಗೆಯಿಟ್ಟು ಭಾರತೀಯ ಮಕ್ಕಳಿಗೆ ಮರಣದ ಸೋಂಕಾಗುವ ಅಪಾಯ ಇದ್ದೇ ಇದೆ. ೫ ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ನಿರೋಧಕ ಲಸಿಕೆ ಹಾಕಿಸಿ.
ಮಕ್ಕಳ ಬಾಯಿಗೆ ಲಸಿಕೆ ಹಾಕುವುದರಿಂದಾಗಿ ನೋವು ಕೂಡ ಉಂಟಾಗದು. ಮಕ್ಕಳಿಗೆ ಲಸಿಕೆ ಹಾಕದೇ ನಿರ್ಲಕ್ಷö್ಯ ಮಾಡಿದ್ದೇ ಆದಲ್ಲಿ ಮುಂದೇನಾದರೂ ಸೋಂಕು ಮತ್ತೆ ತಾಂಡವ ರೂಪ ತಳೆದರೆ ಇದು ಲಸಿಕೆ ನೀಡದ ಮಕ್ಕಳಿಗೆ, ದೊಡ್ಡವರ ಜೀವಕ್ಕೂ ಕಂಟಕವಾಗುವ ಎಲ್ಲಾ ಅಪಾಯದ ಸಾಧ್ಯತೆಯಿದೆ.
ಹೀಗಾಗಿಯೇ ಸರ್ಕಾರದೊಂದಿಗೆ ಕೈಜೋಡಿಸುತ್ತಾ ಲಸಿಕೆ ಹಾಕಿಸಿಕೊಳ್ಳಿ ಎಂಬ ಜಾಗೃತಿ ಆಂದೋಲನವನ್ನು ರೋಟರಿ ಕೈಗೊಳ್ಳುತ್ತಲೇ ಬಂದಿದೆ.
***
ಅತ್ಯಂತ ಸುದೀರ್ಘ ಮತ್ತು ಅತೀ ದೊಡ್ಡದಾದ ಮುಗಿಯದ ಸಮರ ಇದು
೨೧೦ ದೇಶಗಳಲ್ಲಿನ ೩೫ ಸಾವಿರ ಕ್ಲಬ್‌ಗಳಲ್ಲಿನ ೧.೨ ಮಿಲಿಯನ್ ರೋಟರಿ ಸದಸ್ಯರು ಪೋಲಿಯೋ ನಿರ್ಮೂಲನೆಗೆ ಕೈಗೊಂಡ ಸಮಯ ಇಡೀ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಸದಸ್ಯರು ಅತೀ ಹೆಚ್ಚು ವರ್ಷಗಳ ಕಾಲ ನಿರಂತರವಾಗಿ ಕೈಗೊಂಡ ಆರೋಗ್ಯ ಯೋಜನೆಯಾಗಿದೆ. ಲಕ್ಷಾಂತರ ಸದಸ್ಯರ ಆರ್ಥಿಕ ಮತ್ತು ದೈಹಿಕ ಶ್ರಮದ ಕೊಡುಗೆಯೇ ಪೋಲಿಯೋ ಮುಕ್ತ ವಿಶ್ವದ ಕನಸು ಕೆಲವೇ ವರ್ಷಗಳಲ್ಲಿ ನನಸಾಗುವ ಆಶಾಭಾವನೆ ಹುಟ್ಟು ಹಾಕಿದೆ.
ಜಗತ್ತಿನ ಕೆಲವೊಂದು ದೇಶಗಳಲ್ಲಿ ನಿಸರ್ಗದ ಜತೆಗೆ ಸ್ಥಳೀಯ ಜನರ ಪ್ರತಿರೋಧಗಳ ಸವಾಲಿನ ನಡುವೇ ರೋಟರಿ ಸಂಸ್ಥೆಗಳ ಸದಸ್ಯರು ಏಕಚಿತ್ತದಿಂದ ಪೋಲಿಯೋ ವಿರುದ್ಧ ಹೋರಾಡಿದ್ದಾರೆ.
ಪ್ರಾರಂಭಿಕ ದಿನಗಳಲ್ಲಿ ಲಸಿಕೆ ಹಾಕಿಸಿಕೊಳ್ಳಲು ಪ್ರತಿರೋಧ ತೋರಿದ್ದ ಪಾಕಿಸ್ತಾನದಲ್ಲಿಯೇ ಈಗ ರೋಟರಿ ವತಿಯಿಂದ ಆರೋಗ್ಯ ತಪಾಸಣಾ ಕೇಂದ್ರಗಳು, ಪಾಕಿಸ್ತಾನ - ಅಫ್ಘಾನಿಸ್ತಾನ ಗಡಿಯಲ್ಲಿ ವಲಸಿಗ ಮಕ್ಕಳ ಆರೋಗ್ಯ ತಪಾಸಣೆಯಂಥ ಯೋಜನೆ ಜಾರಿಯಾಗಿದೆ. ಪಾಕಿಸ್ತಾನದಲ್ಲಿ ಮಹಿಳಾ ಆರೋಗ್ಯ ಕಾರ್ಯಕರ್ತೆಯರ ತಂಡವನ್ನು ರೂಪಿಸಿದ ರೋಟರಿ ಈ ಮೂಲಕ ಮನೆಗಳ ಒಳಗೆ ಮಹಿಳಾ ಕಾರ್ಯಕರ್ತೆಯರು ತೆರಳಿ ಮಕ್ಕಳಿಗೆ ಲಸಿಕೆ ನೀಡುತ್ತಿದ್ದಾರೆ.
ಲಸಿಕೆ ಜಾಗೃತಿ ಅಭಿಯಾನ ಮೂಡಿಸುತ್ತಿದ್ದಾರೆ. ಶಾಶ್ವತವಾದ ಆರೋಗ್ಯ ಕೇಂದ್ರಗಳು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಲ್ಲಿ ಸ್ಥಾಪನೆಯಾಗಿದ್ದು ಮುಂದೊAದು ದಿನ ಖಂಡಿತವಾಗಿಯೂ ಈ ದೇಶಗಳೂ ಪೋಲಿಯೋ ಮುಕ್ತವಾಗುವ ಭರವಸೆಯನ್ನು ಇಲ್ಲಿ ಕಾರ್ಯಪ್ರವೃತ್ತರಾಗಿರುವ ರೋಟರಿ ಸದಸ್ಯರು ಹೊಂದಿದ್ದಾರೆ. ೭ ವರ್ಷಗಳಿಂದ ಪೋಲಿಯೋದ ಏಕೈಕ ಪ್ರಕರಣ ವರದಿಯಾಗದ ಭಾರತವನ್ನೂ ಕೂಡ ಇನ್ನೊಂದೆರಡು ವರ್ಷಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಪೋಲಿಯೋ ಮುಕ್ತ ದೇಶ ಎಂದು ಅಧಿಕೃತ ಘೋಷಣೆ ಮಾಡಲಿದೆ. - ಅನಿಲ್ ಎಚ್.ಟಿ., ರೋಟರಿ ಉಪರಾಜ್ಯಪಾಲ.