ಸುAಟಿಕೊಪ್ಪ, ಅ. ೨೩: ಕಾಡುಕೋಣ ದಾಳಿಗೆ ಕೂಲಿ ಕಾರ್ಮಿಕ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಜೀವನ್ಮರಣದ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾಂಡನಕೊಲ್ಲಿ ಗ್ರಾಮದ ಬಪ್ಪಕೊಚ್ಚಿ ಲಕ್ಷಿö್ಮ ತೋಟದಲ್ಲಿ ಕೆಲಸಕ್ಕೆಂದು ತೆರಳಿದ್ದ ಸೋಮ (೮೩) (ಕರಡಿ ಸೋಮ) ಅವರು ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿರುವಾಗ ಪಾಪ್ಲಿಕಾಡು ತೋಟದ ರಸ್ತೆಯಲ್ಲಿ ದಿಢೀರನೆ ಎದುರಾದ ಕಾಡುಕೋಣಗಳ ಗುಂಪಿನ ೧ ಕಾಡುಕೋಣ ಸೋಮ ಅವರ ಮೇಲೆ ದಾಳಿ ನಡೆಸಿ ಬುಜ, ಸೊಂಟ, ಮುಖದ ಭಾಗಕ್ಕೆ ತಿವಿದು ಗಂಭೀರ ಗಾಯಗೊಳಿಸಿದ್ದು, ಸಂಜೆಯಾದರೂ ಮನೆಗೆ ಹಿಂತಿರುಗಿ ಬರದಿರುವುದನ್ನು ಮನಗಂಡ ಮನೆಯವರು ಸೋಮ ಅವರನ್ನು ಹುಡುಕಿಕೊಂಡು ಕೆಲಸಕ್ಕೆ ತೆರಳಿದ ತೋಟದ ಬಳಿ ತೆರಳುತ್ತಿದ್ದಾಗ ಚಿಂತಾಜನಕ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೆ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ದು ಚಿಕಿತ್ಸೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡಿರುವ ಸೋಮ ಸುಂಟಿಕೊಪ್ಪ ಟಾಟಾ ಎಸ್ಟೇಟ್‌ನಲ್ಲಿ ಕೆಲಸ ಮಾಡಿ ನಿವೃತ್ತಿಗೊಂಡು ಅಲ್ಲಿಯೇ ನೆಲೆಸಿದ್ದರು.

ಕಾಡು ಕೋಣಗಳು ಈ ವಿಭಾಗದಲ್ಲಿ ಆಗಾಗ್ಗೆ ಅಡ್ಡಾಡುತ್ತಿದ್ದು ಅರಣ್ಯ ಇಲಾಖೆ ನಿರ್ಲಕ್ಷö್ಯ ವಹಿಸಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.