ಮಡಿಕೇರಿ, ಅ. ೨೧: ಮಡಿಕೇರಿಯಲ್ಲಿರುವ ಕೊಡವ ವಿದ್ಯಾನಿಧಿ(ಕೂರ್ಗ್ ಎಜುಕೇಶನ್ ಫಂಡ್)ಗೆ ದಾನಿಯೊಬ್ಬರು ರೂ. ೧.೧೫ ಕೋಟಿಯಷ್ಟು ಮೊತ್ತದ ದೇಣಿಗೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಪ್ರಸ್ತುತ ವಿದ್ಯಾನಿಧಿಯ ಖಜಾಂಚಿಯಾಗಿರುವ ಕೊಡಂದೇರ ಸರೋಜ ಪೂವಣ್ಣ ಹಾಗೂ ಅವರ ಪತಿ ಪೂವಣ್ಣ ಅವರುಗಳು ಪೂವಣ್ಣ ಅವರ ಪೋಷಕರಾದ ಕೊಡಂದೇರ ಚಂಗಪ್ಪ ಹಾಗೂ ದೇವಮ್ಮ ಅವರ ಜ್ಞಾಪಕಾರ್ಥವಾಗಿ ರೂ. ೧ ಕೋಟಿ ೧೫ ಲಕ್ಷದ ೨೫ ಸಾವಿರದ ೨೦೦ ರಷ್ಟು ದೇಣಿಗೆ ನೀಡಿದ್ದಾರೆ.
ದೇಣಿಗೆಯಿಂದ ಬರುವ ಬಡ್ಡಿ ಆಧಾರದಲ್ಲಿ ವಾರ್ಷಿಕ ವಿದ್ಯಾರ್ಥಿವೇತನ ನೀಡುವ ಉದ್ದೇಶವಿದ್ದು, ಮೆರಿಟ್ ಆಧಾರದಲ್ಲಿ ಮೆಡಿಕಲ್ ಅಥವಾ ಇಂಜಿನಿಯರಿAಗ್ ಕಾಲೇಜುಗಳಿಗೆ ಪ್ರವೇಶಾತಿ ಪಡೆದುಕೊಳ್ಳುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ನೀಡಲಾಗುತ್ತದೆ. ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ ಬಳಿಕ, ಮೆಡಿಕಲ್ ಕಾಲೇಜಿಗೆ ಪ್ರವೇಶ ಪಡೆದುಕೊಳ್ಳುವ ಓರ್ವ ವಿದ್ಯಾರ್ಥಿ ಹಾಗೂ ಇಂಜಿನಿಯರಿAಗ್ಗೆ ಪ್ರವೇಶ ಪಡುವ ಓರ್ವ ವಿದ್ಯಾರ್ಥಿಯನ್ನು ವಿದ್ಯಾನಿಧಿ ವತಿಯಿಂದ ಆಯ್ಕೆಮಾಡಲಾಗುತ್ತದೆೆ. ಫಲಾನುಭವಿಗಳು ತಮ್ಮ ಪದವಿ ಮುಗಿಸುವ ತನಕ ವಿದ್ಯಾರ್ಥಿವೇತನ ದೊರಕುತ್ತದೆ ಎಂದು ವಿದ್ಯಾನಿಧಿಯ ಪ್ರಕಟಣೆ ತಿಳಿಸಿದೆ.
ತಾ. ೩೦ ರಂದು ನಿಧಿಯಿಂದ ಸನ್ಮಾನ ಕಾರ್ಯಕ್ರಮ
ಕೊಡವ ವಿದ್ಯಾನಿಧಿ ವತಿಯಿಂದ ತಾ. ೩೦ ರಂದು ವೈದ್ಯಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಡಾ. ಎಂ. ಅಮೃತ್ ನಾಣಯ್ಯ, ಡಾ. ಎಂ. ಸೌಮ್ಯ ನಾಣಯ್ಯ ಹಾಗೂ ಡಾ. ಎಂ.ಎA. ಪೊನ್ನಪ್ಪ ಅವರುಗಳನ್ನು ಸನ್ಮಾನಿಸ ಲಾಗುವುದು. ಸನ್ಮಾನ ಕಾರ್ಯಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಂದು ಬೆಳಿಗ್ಗೆ ೧೧:೩೦ಕ್ಕೆ ಮಡಿಕೇರಿ ಕೊಡವ ಸಮಾಜದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ವಿದ್ಯಾನಿಧಿಯ ಅಧ್ಯಕ್ಷ ಕೆ.ಪಿ. ಉತ್ತಪ್ಪ ಹಾಗೂ ಉಪಾಧ್ಯಕ್ಷ ಕೆ.ಎಸ್. ದೇವಯ್ಯ ಅವರು ಮಾಹಿತಿ ನೀಡಿದ್ದಾರೆ.