ಮಡಿಕೇರಿ, ಅ.೨೧: ದೂರದಲ್ಲೆಲ್ಲೋ ಕುಗ್ರಾಮದಲ್ಲಿರು ವವರಲ್ಲ ಈತನ ವಂಚನೆಯ ಬಲೆಗೆ ಬಿದ್ದವರು., ಪಟ್ಟಣದಲ್ಲಿರು ವವರು, ವಿದ್ಯಾವಂತರೇ ಇದ್ದಾರೆ., ಅದರಲ್ಲೂ ಪೊಲೀಸ್ ಎಸ್‌ಪಿ ಕಚೇರಿ ಬಳಿಯಲ್ಲೇ ಇರುವ, ದಿನನಿತ್ಯ ನೂರಾರು ಪೊಲೀಸ್ ಅಧಿಕಾರಿಗಳು ಓಡಾಡುವ ಪ್ರದೇಶದಲ್ಲಿರುವರನ್ನೂ ತನ್ನ ವಂಚನೆಯ ಬಲೆಗೆ ಕೆಡವಿ ಕೊಂಡಿದ್ದಾನೆ.., ಈತನ ಮೋಸದ ಜಾಲಕ್ಕೆ ಸಿಲುಕಿದ ಅಮಾಯಕ ಈಗ ಸಾಲಗಾರರಾಗಿದ್ದಾರೆ..!

ಮಡಿಕೇರಿಗೆ ಬಂದಿದ್ದ ಪುನಿತ್ ಬಿಡಾರ ಹೂಡಿದ್ದು ಕನ್ನಿಕಾ ಬಡಾವಣೆ ಯಲ್ಲಿರುವ ಹೋಂಸ್ಟೇನಲ್ಲಿ. ವರ್ಷಗಟ್ಟಲೇ ತಂಗಿದ್ದ ಆತ ನೆರೆ ಕರೆಯವರ ಪರಿಚಯ ಮಾಡಿ ಕೊಂಡಿದ್ದ. ಪಕ್ಕದ ಮನೆಯವರಾದ, ಕಾನ್ವೆಂಟ್ ಜಂಕ್ಷನ್‌ನಲ್ಲಿ ಪುಟ್ಟ ಕ್ಯಾಂಟೀನ್ ನಡೆಸುತ್ತಿರುವ ನಾರಾಯಣ ಅವರ ಕ್ಯಾಂಟೀನ್‌ಗೂ ಟೀ ಕುಡಿಯಲು ಬರುತ್ತಿದ್ದ. ಪರಿಚಯವಾದ್ದರಿಂದ ನಾರಾಯಣ ಅವರ ಕುಟುಂಬ ವಿವರಗಳನ್ನೆಲ್ಲ ತಿಳಿದುಕೊಂಡಿದ್ದ. ನಾರಾಯಣ ಅವರ ಮಗ ಮೈಸೂರಿನಲ್ಲಿ ಎಂಎಸ್‌ಡಬ್ಲೂö್ಯ ವ್ಯಾಸಂಗ ಮಾಡುತ್ತಿರುವ ಬಗ್ಗೆ ಅರಿತುಕೊಂಡ ಬಳಿಕ ಆತನಿಗೆ ಪೊಲೀಸ್ ಇಲಾಖೆಯಲ್ಲಿ ಎಸ್‌ಐ ಹುದ್ದೆ ಕೊಡಿಸುವುದಾಗಿ ಹೇಳಿ ತನಗಿರುವ ದೊಡ್ಡ ದೊಡ್ಡ ಹುದ್ದೆಯಲ್ಲಿರುವವರ ಪರಿಚಯದ ಬಗ್ಗೆ ನಂಬಿಕೆ ಮೂಡುವಂತೆ ಮಾಡಿದ್ದಾನೆ.

ಆಯ್ಕೆ ಸಮಿತಿ ಪರಿಚಯ..!

ಮಗನಿಗೆ ಎಸ್‌ಐ ಹುದ್ದೆ ಕೊಡಿಸುವ ಆಸೆ ಹುಟ್ಟಿಸಿದ ಬಳಿಕ ಕೆಲಸಕ್ಕಾಗಿ ಹಿರಿಯ ಅಧಿಕಾರಿಗಳು ಹಾಗೂ ಆಯ್ಕೆ ಸಮಿತಿಯವರಿಗೂ ಲಂಚ ಕೊಡಬೇಕಿದೆ, ಇದಕ್ಕೆ ಹಣ ನೀಡುವಂತೆ ಪುನಿತ್ ಬೇಡಿಕೆಯಿಟ್ಟಿ ದ್ದಾನೆ. ಐಷಾರಾಮಿ ಜೀವನ ನಡೆಸುತ್ತಿದ್ದ ಪುನಿತ್ ಆಡುವ ದೊಡ್ಡ ದೊಡ್ಡ ಮಾತುಗಳು ಹಾಗೂ ಆತ ತನಗೆ ಪರಿಚಯವಿದೆ ಎಂದು ಹೇಳುತ್ತಿದ್ದ ದೊಡ್ಡ ಅಧಿಕಾರಿಗಳು, ಆಯ್ಕೆ ಸಮಿತಿಯಲ್ಲಿ ಇಂತಹ ಅಧಿಕಾರಿಗಳಿದ್ದಾರೆ ಎಂದು ಹೇಳುತ್ತಿದ್ದುದರಿಂದ ನಾರಾಯಣ ಕೂಡ ಆತನನ್ನು ನಂಬಿದ್ದಾರೆ. ಮಗನನ್ನು ಎಸ್‌ಐ ಆಗಿ ನೋಡುವ ಆಸೆಯಿಂದ ಆತ ಹೇಳಿದ್ದಕ್ಕೆಲ್ಲ ಒಪ್ಪಿಕೊಂಡಿದ್ದಾರೆೆ.

ಹೇಳಿದರೆ ಕೆಲಸ ಕಷ್ಟ..!

ಯಾರಿಗೂ ತಿಳಿಯದಂತೆ ತನಗೆ ಪರಿಚಯ ಇರುವ ಅಧಿಕಾರಿಗಳ ಮೂಲಕ ಈ ಕೆಲಸ ಮಾಡಿಸಿ ಕೊಡುತ್ತಿದ್ದು, ಈ ಬಗ್ಗೆ ಯಾರಿಗೂ ತಿಳಿಯಕೂಡದು, ಯಾರಿಗಾದರೂ ಹೇಳಿದರೆ

(ಮೊದಲ ಪುಟದಿಂದ)ಕೆಲಸ ಸಿಗುವುದು ಕಷ್ಟವಾಗುತ್ತದೆ, ಹಿರಿಯ ಅಧಿಕಾರಿಗಳ ಘನತೆಗೂ ಕುಂದುAಟಾಗುತ್ತದೆ ಎಂದು ನಂಬಿಸಿದ್ದರಿAದ ನಾರಾಯಣ ಕೂಡ ಯಾರಿಗೂ ಈ ವಿಚಾರ ಹೇಳಿಲ್ಲ. ತನ್ನ ಕ್ಯಾಂಟೀನ್‌ಗೆ ದಿನನಿತ್ಯ ಹತ್ತಾರು ಪೊಲೀಸರು ಟೀ ಕುಡಿಯಲು ಬರುತ್ತಿದ್ದರೂ ‘ಸೀಕ್ರೆಟ್’ ಕಾಪಾಡಿದ್ದರು.

ಮಗ ಬಚಾವ್..!

ಇತ್ತ ಎಸ್‌ಐ ಕೆಲಸಕ್ಕಾಗಿ ಪುನಿತ್ ಹೇಳಿದ ಹಾಗೆ ನಾರಾಯಣ ತಾನು ವ್ಯಾಪಾರ ಮಾಡಿ ಕೂಡಿಟ್ಟ ಹಣ, ಚಿನ್ನ ಅಡವಿಟ್ಟು, ಕೈಸಾಲ ಮಾಡಿ ಹೇಗೋ ಹೊಂದಿಸಿ ರೂ.೨೨ಲಕ್ಷ ಹಣವನ್ನು ಪುನಿತ್ ಕೈಗಿತ್ತಿದ್ದಾರೆ. ಹಣ ಪಡೆದ ಪುನಿತ್ ಎಸ್‌ಐ ಕೆಲಸದ ನೇಮಕಾತಿ ಪತ್ರ ನೀಡಿ ಮಗನನ್ನು ಕಾಲೇಜಿನಿಂದ ಬಿಡಿಸಿಕೊಂಡು ಬರಲು ಹೇಳಿದಂತೆ ನಾರಾಯಣ ಮಗನನ್ನು ಬಿಡಿಸಿಕೊಂಡು ಬಂದಿದ್ದಾರೆ. ಇತ್ತ ನೇಮಕಾತಿ ಪತ್ರ ಹಿಡಿದುಕೊಂಡು ಕೆಲಸಕ್ಕೆ ಸೇರಲೆಂದು ಹೋದಾಗ ಅದು ನಕಲಿ ಎಂದು ಗೊತ್ತಾಗಿದೆ. ಪುನಿತ್‌ನನ್ನು ವಿಚಾರಿಸಿದಾಗ ಸಬೂಬು ಹೇಳುತ್ತಾ ಸಾಗಹಾಕತೊಡಗಿದ. ಈ ನಡುವೆ ಮಗನನ್ನು ಕೂಡ ಆತನೊಂದಿಗೆ ಸೇರಿಸಿಕೊಳ್ಳಲೂ ಪ್ರಯತ್ನಿಸಿದ್ದ. ನಂತರ ಪುನಿತ್ ನಾಪತ್ತೆಯಾದ ಬಳಿಕ ನಾರಾಯಣ ಪೊಲೀಸ್ ದೂರು ನೀಡಿದ್ದಾರೆ. ಆ ಬಳಿಕ ಅಪರಾಧ ಪತ್ತೆದಳದವರು ಪುನಿತ್‌ನನ್ನು ಬಂಧಿಸಿದ್ದಾರೆ.

ಆದರೆ., ಇತ್ತ ಆತನ ಮಾತಿನ ಮೋಡಿಗೆ ಬಲಿಯಾದ ನಾರಾಯಣ ರೂ.೧೩ ಲಕ್ಷದ ಸಾಲಗಾರರಾಗಿದ್ದಾರೆ..!

?ಕುಡೆಕಲ್ ಸಂತೋಷ್