ಮುಳ್ಳೂರು, ಅ. ೧೮: ಭಾರತದ ಹೆಸರಾಂತ ಗಾಯಕ ಪದ್ಮಭೂಷಣ ದಿ. ಡಾ. ಎಸ್.ಪಿ. ಬಾಲಸುಬ್ರಮಣ್ಯ ಅವರ ೧ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಭಾನುವಾರ ಶನಿವಾರಸಂತೆ ಜೇನುಕಲ್ಲು ಮೆಲೋಡಿಸ್ ಆರ್ಕೇಸ್ಟç ವತಿಯಿಂದ ಯಶಸ್ವಿ ಕಲ್ಯಾಣ ಮಂಟಪದಲ್ಲಿ ಎಸ್.ಪಿ.ಬಿ. ನುಡಿನಮನ ಕಾರ್ಯಕ್ರಮ ನಡೆಯಿತು.
ರೋಟರಿ ಕ್ಲಬ್ ಜಿಲ್ಲಾ ವಲಯ ಸೇನಾನಿ ಟಿ.ಆರ್. ಪುರುಷೋತ್ತಮ್ ನುಡಿನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಾರತದ ಹೆಮ್ಮೆಯ ಗಾಯಕ ದಿ. ಡಾ. ಎಸ್.ಪಿ. ಬಾಲಸುಬ್ರಮಣ್ಯ ಅವರು ಕನ್ನಡದಲ್ಲಿ ಸಾವಿರಾರು ಚಲನಚಿತ್ರ ಹಾಡುಗಳು ಸೇರಿದಂತೆ ಭಾವಗೀತೆ, ಭಕ್ತಿಗೀತೆ ಜಾನಪದ ಗೀತೆಗಳನ್ನು ಹಾಡುವ ಮೂಲಕ ಕರ್ನಾಟಕದ ಹೆಮ್ಮೆಯ ಗಾಯಕರಾಗಿ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಹಾಡುಗಳು ಸದಾ ಅಮರವಾಗಿರುತ್ತದೆ ಎಂದರು.
ಜಾನಪದ ಅಂಧ ಕಲಾವಿದ ಹೆಮ್ಮನೆ ರುದ್ರಪ್ಪ ಮಾತನಾಡಿ, ಎಸ್.ಪಿ. ಬಾಲಸುಬ್ರಮಣ್ಯ ತಮ್ಮ ಗಾಯನದ ಮೂಲಕ ನಮ್ಮಂತಹ ಅಂಧರಲ್ಲೂ ಸಂಗೀತವನ್ನು ಕಾಣುವಂತೆ ಮಾಡಿದ ಶ್ರೇಷ್ಠ ಗಾಯಕರಾಗಿದ್ದರೆಂದು ಹೇಳಿದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್ ಕುಮಾರ್, ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷೆ ಸರೋಜ ಶೇಖರ್ ಮಾತನಾಡಿದರು. ಜೇನುಕಲ್ಲು ಮೆಲೋಡಿಸ್‌ನ ಮುಖ್ಯಸ್ಥ ತರುಣ್, ಶನಿವಾರಸಂತೆ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ವಿಠಲ್ ನಾಗರಾಜ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಲೋಕೇಶ್ ಸಾಗರ್, ಜೇನುಕಲ್ಲು ಮೆಲೋಡಿಸ್‌ನ ಕಲಾವಿದರಾದ ಕಿರಣ್, ಲಕ್ಷಿö್ಮÃಶ್ ಪೈ, ಶ್ಯಾಮಲ, ನಳಿನಿ, ಕಲ್ಯಾಣಿ, ನಿಶಾ, ಪ್ರೇಮನಂದ ಪೈ, ಪರಮೇಶ್, ಮುತ್ತಿನ ಹಾರ ಮೆಲೋಡಿಸ್‌ನ ಸುಭಾಷ್ ಮುಂತಾ ದವರಿದ್ದರು.
ನುಡಿನಮನ ಕಾರ್ಯಕ್ರಮದಲ್ಲಿ ಜೇನುಕಲ್ಲು ಮೆಲೋಡಿಸ್ ವತಿಯಿಂದ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್ ಕುಮಾರ್, ರೋಟರಿ ಜಿಲ್ಲಾ ವಲಯ ಸೇನಾನಿ ಟಿ.ಆರ್. ಪುರುಷೋತ್ತಮ್ ಅವರುಗಳನ್ನು ಸನ್ಮಾನಿಸಲಾಯಿತು. ನುಡಿನಮನ ಕಾರ್ಯಕ್ರಮದ ನಂತರ ಜೇನುಕಲ್ಲು ಮೆಲೋಡಿಸ್ ತಂಡ ದವರಿಂದ ಎಸ್‌ಪಿಬಿ ರಸಮಂಜರಿ ಕಾರ್ಯಕ್ರಮ ನಡೆಯಿತು.