ಸುಂಟಿಕೊಪ್ಪ, ಅ. ೧೮: ಆರೋಗ್ಯ ಮತ್ತು ಅರಿವು ಕಾರ್ಯಕ್ರಮವನ್ನು ಮಹಿಳೆಯರಿಗೆ ಇತ್ತೀಚೆಗೆ ಬಾಳೆಕಾಡು ತೋಟದಲ್ಲಿ ನಡೆಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸ್ವಸ್ಥ ಶಾಲೆಯ ನಿರ್ದೇಶಕಿ ಆರತಿ ಸೋಮಯ್ಯ ವಹಿಸಿದ್ದರು. ಸಮಾರಂಭದಲ್ಲಿ ಮಹಿಳೆಯರಿಗೆ ಕೊರೊನಾ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಸಿದ್ದಾಪುರ ಎ.ಎ.ಡಿ.ಪಿ. ಸಂಯೋಜಕ ಕೃಷ್ಣಮೂರ್ತಿ, ಕುಮಾರ, ಸುಂಟಿಕೊಪ್ಪ ಗ್ರಾ.ಪಂ. ಸದಸ್ಯೆ ನಾಗರತ್ನ, ಬಾಳೆಕಾಡು ತೋಟದ ವ್ಯವಸ್ಥಾಪಕ ಪ್ರಸನ್ನ ಹಾಗೂ ಅನಿತ ಪ್ರಕಾಶ್ ಸೇರಿದಂತೆ ಮಹಿಳೆಯರು ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.