ಮಡಿಕೇರಿ, ಅ. ೧೮: ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಶೌರ್ಯ ಯುವತಿ ಮಂಡಲ ಪೈಲಾರು ಮತ್ತು ಚೊಕ್ಕಾಡಿ ಮುನ್ನೂರೊಕ್ಲು ಗೌಡ ಬಾಂಧವರ ಸಮಿತಿ ವತಿಯಿಂದ ೩ ದಿನದ ಶಿಬಿರ ಪೈಲಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಲಕ್ಷಿö್ಮ ನಾರಾಯಣ ಕಜೆಗದ್ದೆ, ನಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತಿದ್ದಂತೆ ನಮ್ಮ ಭಾಷೆ ಮತ್ತು ಸಂಸ್ಕೃತಿ ನಶಿಸಿ ಹೋಗುತ್ತಿದೆ. ಇದನ್ನು ತಡೆಯುವ ದೃಷ್ಟಿಯಿಂದ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯ ಅರಿವು ಮೂಡಿಸಲು ಇಂತಹ ಶಿಬಿರಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಚೊಕ್ಕಾಡಿ ಮುನ್ನೂರೊಕ್ಲು ಗೌಡ ಬಾಂಧವರ ಸಮಿತಿ ಅಧ್ಯಕ್ಷ ವೆಂಕಟ್ರಮಣ ಕರ್ಮಾಜೆ ಮತ್ತು ಗೌರವಾಧ್ಯಕ್ಷ ಪುಟ್ಟಣ್ಣ ಗೌಡ ನಾಯರ್ಕಲ್ಲು ಭತ್ತದ ಮುಡಿಗೆ ಭತ್ತವನ್ನು ಹಾಕಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅಕಾಡೆಮಿ ಸದಸ್ಯ ಸಂಚಾಲಕ ಜಯಪ್ರಕಾಶ್ ಮೊಂಟಡ್ಕ, ಬಿಳಿನೆಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಅಣ್ಣಾಜಿ ಗೌಡ ಪೈಲೂರು, ಅಮರಮುಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಪ್ರಿಯ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಯೋಗೀಶ್ ಮಾಡಬಾಕಿಲು, ಶಿಬಿರದ ಸಂಚಾಲಕ ಸದಾಶಿವ ಮೂಕಮಲೆ, ಶೌರ್ಯ ಯುವತಿ ಮಂಡಲದ ಅಧ್ಯಕ್ಷೆ ಚರಿಷ್ಮಾ ಕಡಪಳ ಉಪಸ್ಥಿತರಿದ್ದರು.
ದಿಶಾ ಮಾಡಬಾಕಿಲು ಸ್ವಾಗತಿಸಿ, ಅನುಜ್ಞಾ ಸಂಕೇಶ ಪ್ರಾರ್ಥಿಸಿದರು. ಚರಿಷ್ಮಾ ಕಡಪಳ ವಂದಿಸಿದರು. ಅಶೋಕ್ ಚೂಂತಾರು ಕಾರ್ಯಕ್ರಮ ನಿರೂಪಿಸಿದರು.