ಮಡಿಕೇರಿ, ಅ. ೧೮: ಬೆಂಗಳೂರಿನ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಆಡಳಿತ ಮಂಡಳಿ ಸಭೆ ಇತ್ತೀಚೆಗೆ ನಡೆಯಿತು. ಸಬೆಯಲ್ಲಿ ೨೦೨೧-೨೩ನೇ ಸಾಲಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಅಧ್ಯಕ್ಷರಾಗಿ ರವೀಂದ್ರನಾಥ್ ಕೇವಳ ಅವರು ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಪಾಣತಲೆ ಪಳಂಗಪ್ಪ, ಕಾರ್ಯದರ್ಶಿಯಾಗಿ ನಾಗೇಶ್ ಕಲ್ಲುಮುಟ್ಲು, ಖಜಾಂಚಿಗಳಾಗಿ ಕುಂಬುಗೌಡನ ಸೋಮಣ್ಣ, ಜಂಟಿ ಕಾರ್ಯದರ್ಶಿಗಳಾಗಿ ನಾಗೇಶ್ ಬಂಟೋಡಿ ಹಾಗೂ ಡಾ. ಚೇತನ್ ಚೆಟ್ಟಿಮಾಡ, ಮಹಿಳಾ ಘಟಕದ ಅಧ್ಯಕ್ಷೆಯಾಗಿ ಜ್ಯೋತಿ ಕುಶಾಲಪ್ಪ ಪೊರೆಯನ, ಉಪಾಧ್ಯಕ್ಷೆಯಾಗಿ ಶಶಿಪ್ರಭಾ ಮಡ್ತಿಲ, ಯುವ ಘಟಕದ ಅಧ್ಯಕ್ಷೆಯಾಗಿ ನೇಹಾ ರೋಷನ್ ಪೊರೆಯನ ಹಾಗೂ ಉಪಾಧ್ಯಕ್ಷರಾಗಿ ದಯಾನಂದ ಕುಂಬ್ಲಾಡಿ ಆಯ್ಕೆಯಾಗಿದ್ದಾರೆ.