ಮಡಿಕೇರಿ/ಭಾಗಮಂಡಲ, ಅ. ೧೬: ಕರುನಾಡಿನ ಜೀವನದಿ ಪಾಪನಾಶಿನಿ ಮಾತೆ ಕಾವೇರಿಯ ಪವಿತ್ರ ತೀರ್ಥೋದ್ಭವ ತಾ. ೧೭ ರಂದು (ಇಂದು) ಮಧ್ಯಾಹ್ನ ೧.೧೧ಕ್ಕೆ ಮಕರ ಲಗ್ನದ ಶುಭ ಮುಹೂರ್ತದಲ್ಲಿ ನಡೆಯಲಿದ್ದು, ಆ ಪುಣ್ಯದ ಕ್ಷಣಕ್ಕಾಗಿ ತಲಕಾವೇರಿ ಕ್ಷೇತ್ರದಲ್ಲಿ ಅಗತ್ಯ ಸಿದ್ಧತೆಗಳು ನಡೆದಿವೆ. ತಲಕಾವೇರಿ ಮಡಿಕೇರಿ/ಭಾಗಮಂಡಲ, ಅ. ೧೬: ಕರುನಾಡಿನ ಜೀವನದಿ ಪಾಪನಾಶಿನಿ ಮಾತೆ ಕಾವೇರಿಯ ಪವಿತ್ರ ತೀರ್ಥೋದ್ಭವ ತಾ. ೧೭ ರಂದು (ಇಂದು) ಮಧ್ಯಾಹ್ನ ೧.೧೧ಕ್ಕೆ ಮಕರ ಲಗ್ನದ ಶುಭ ಮುಹೂರ್ತದಲ್ಲಿ ನಡೆಯಲಿದ್ದು, ಆ ಪುಣ್ಯದ ಕ್ಷಣಕ್ಕಾಗಿ ತಲಕಾವೇರಿ ಕ್ಷೇತ್ರದಲ್ಲಿ ಅಗತ್ಯ ಸಿದ್ಧತೆಗಳು ನಡೆದಿವೆ. ತಲಕಾವೇರಿ ವ್ಯಾಪ್ತಿಯಲ್ಲಿ ಇಂದು ನಿರಂತರವಾಗಿ ಮಳೆಯಾಗಿದ್ದು, ಮಳೆಯ ನಡುವೆಯೂ ತಯಾರಿ ಭರದಿಂದ ನಡೆದಿದೆ.

ಜಿಲ್ಲಾಧಿಕಾರಿ ಸಭೆ: ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅಧ್ಯಕ್ಷತೆಯಲ್ಲಿ ಭಾಗಮಂಡಲ ಭಗಂಡೇಶ್ವರ ದೇವಾಲಯದ ಆವರಣದಲ್ಲಿ ಕಾವೇರಿ ಜಾತ್ರೆಯ ಪೂರ್ವ ತಯಾರಿ ಕುರಿತು ಪಾರ್ಕಿಂಗ್‌ಗೆ ಚಾಮುಂಡಿ ಕಣದಲ್ಲಿ ಅವಕಾಶ ನೀಡಲಾಗುವುದು. ಅಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದಲ್ಲಿ ಕಾವೇರಿ ಕಾಲೇಜು ಮೈದಾನದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು. ತಲಕಾವೇರಿಯಲ್ಲಿ ೬೦೦ ರಿಂದ ೭೦೦ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿದ್ದೇವೆ ಎಂದು ಭಾಗಮಂಡಲ ಪೊಲೀಸ್ ಠಾಣಾಧಿಕಾರಿ ಮಹದೇವ್ ತಿಳಿಸಿದರು. ಕರಿಕೆ ಜಂಕ್ಷನ್ ಹಾಗೂ ತಲಕಾವೇರಿ ರಸ್ತೆಯ ಮಾರುಕಟ್ಟೆ ಬಳಿ ಎರಡು ಚೆಕ್‌ಪೋಸ್ಟ್ ತೆರೆಯಲಾಗು ವುದು. ಅಲ್ಲದೆ ಪ್ರತಿಯೊಂದು ವಾಹನವನ್ನೂ ತಪಾಸಣೆಗೆ ಒಳಪಡಿಸಲಾಗುವುದು ಎಂದು ಅವರು ಮಾಹಿತಿಯಿತ್ತರು.

ಇನ್ಸ್ಪೆಕ್ಟರ್ ಮೇದಪ್ಪ ಮಾತನಾಡಿ ಭದ್ರತೆ ಹಿನ್ನೆಲೆ ಹೆಚ್ಚುವರಿಯಾಗಿ ಅಗತ್ಯವಿರುವೆಡೆ ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ. ಬಂದೋಬಸ್ತ್ ಗಾಗಿ ೪೫೦ ಸಿಬ್ಬಂದಿ, ೩ ಡಿವೈಎಸ್ಪಿ ಗಳನ್ನು ನಿಯೋಜಿಸಲಾಗುವುದು ಎಂದು ಹೇಳಿದರು. ವಸ್ತç ಸಂಹಿತೆ ಕಡ್ಡಾಯವಾಗಿ ಪಾಲನೆಯಾಗ ಬೇಕೆಂದು ತೀರ್ಮಾನಿಸಲಾಯಿತು. ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮಾತನಾಡಿ ತಾ. ೧೭ ಮತ್ತು ೧೮ ರಂದು ಕೊಡಗು ಏಕೀಕರಣ ರಂಗದಿAದ ಮೂರು ಹೊತ್ತು ತಲಕಾವೇರಿಯಲ್ಲಿ ಅನ್ನದಾನ ನಡೆಯಲಿದೆ. ಮಂಡ್ಯದ ಭಕ್ತರಿಂದಲೂ ಅನ್ನದಾನವಿರುತ್ತದೆ. ಭಾಗಮಂಡಲದಲ್ಲಿ

(ಮೊದಲ ಪುಟದಿಂದ) ಭಗಂಡೇಶ್ವರ ದೇವಾಲಯ ಸಮಿತಿಯಿಂದ ಎಂದಿನAತೆ ಅನ್ನದಾನ ನಡೆಯಲಿದೆ. ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮುಳುಗು ತಜ್ಞರನ್ನು ನಿಯೋಜಿಸಲಾಗುತ್ತದೆ ಎಂದರು.

ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡೂ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ತಹಶೀಲ್ದಾರ್ ಮಹೇಶ್, ತಲಕಾವೇರಿ-ಭಾಗಮಂಡಲ ದೇವಾಲಯ ಕಾರ್ಯನಿರ್ವಾಹಣಾಧಿಕಾರಿ ಕೃಷ್ಣಪ್ಪ ಮತ್ತಿತರರಿದ್ದರು. ಸಭೆ ಬಳಿಕ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳು ತಲಕಾವೇರಿಗೆ ಭೇಟಿ ನೀಡಿದ್ದರು.

ಸಚಿವರ ಆಗಮನ: ರಾಜ್ಯ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ. ನಾರಾಯಣ ಗೌಡ ಅವರು ತಾ. ೧೭ ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಸಚಿವರು ತಾ. ೧೭ ರಂದು (ಇಂದು) ಮಧ್ಯಾಹ್ನ ೧೨ ಗಂಟೆಗೆ ತಲಕಾವೇರಿಯ ಕಾವೇರಿ ತೀರ್ಥೋದ್ಭವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಎಚ್.ಜಿ. ಪ್ರಭಾಕರ್ ತಿಳಿಸಿದ್ದಾರೆ.

ರೂ.೨೦ ಲಕ್ಷ ಬಳಕೆಗೆ ಸೂಚನೆ

ತೀರ್ಥೋದ್ಭವ ಜಾತ್ರಾ ಕಾರ್ಯಕ್ರಮಕ್ಕೆ ರೂ. ೨೦ ಲಕ್ಷ ಅನುದಾನವನ್ನು ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಭರಿಸಲು ಅನುಮತಿ ನೀಡಿ ಸರಕಾರದ ಅಧೀನ ಕಾರ್ಯದರ್ಶಿ ಎಂ.ಎಲ್. ವರಲಕ್ಷಿö್ಮ ಆದೇಶಿಸಿದ್ದಾರೆ.

ಈ ಪ್ರಸ್ತಾವನೆಯನ್ನು ಮುಂದಿನ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಘಟನೋತ್ತರ ಅನುಮೋದನೆಗಾಗಿ ಮಂಡಿಸುವAತೆ ನಿರ್ದೇಶಿಸಲಾಗಿದೆ.

ಶಾಸಕ ಕೆ.ಜಿ. ಬೋಪಯ್ಯ ಅವರು ಕಾವೇರಿ ಕ್ಷೇತ್ರಕ್ಕೆ ಭೇಟಿ ನೀಡಿ ತೀರ್ಥೋದ್ಭವ ಸಂಬAಧ ಕೈಗೊಳ್ಳಲಾಗಿರುವ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಬಾರಿ ಹಗಲು ತೀರ್ಥೋದ್ಭವ ಇರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಭಕ್ತಾದಿಗಳು ಕೋವಿಡ್ ನಿಯಮಪಾಲನೆ ಮಾಡಬೇಕೆಂದು ಮನವಿ ಮಾಡಿದ ಅವರು ಜಿಲ್ಲೆಯ ಭಕ್ತಾದಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು. ಈ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನವಿತ್ತಿರುವುದಾಗಿ ತಿಳಿಸಿದರು. ಬಳಿಕ ಬೋಪಯ್ಯ ಅವರು ಕುಟುಂಬದೊAದಿಗೆ ಕಾವೇರಿ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಮೂಡಾ ಅಧ್ಯಕ್ಷ ರಮೇಶ್ ಹೊಳ್ಳಾ, ಭಾಗಮಂಡಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್ ಮತ್ತಿತರರಿದ್ದರು.