ಮಡಿಕೇರಿ, ಅ. ೧೮: ಮಡಿಕೇರಿ ತಾಲೂಕಿನ ತಾಳತ್ತಮನೆಯ ಶ್ರೀ ದುರ್ಗಾ ಭಗವತಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಅಂಗವಾಗಿ ಪ್ರತಿದಿನ ಬೆಳಿಗ್ಗೆ ಶ್ರೀ ದುರ್ಗಾಭಗವತಿ ದೇವಿಗೆ ವಿಶೇಷ ಅಲಂಕಾರ ಪೂಜೆಯನ್ನು ನಡೆಸಲಾಯಿತು. ಹಲವಾರು ಭಕ್ತಾದಿಗಳು ನವರಾತ್ರಿಯ ಸಂದರ್ಭ ಶ್ರೀ ಮಹಾಕಾಳಿ, ಶ್ರೀ ಮಹಾಲಕ್ಷಿö್ಮ, ಶ್ರೀ ದುರ್ಗಾಭಗವತಿ ದೇವಿಗೆ ವಿಶೇಷ ಅಲಂಕಾರ ಪೂಜೆಯನ್ನು ಸಲ್ಲಿಸಿದರು. ತಾ. ೧೩ ರಂದು ದುರ್ಗಾಷ್ಟಮಿಯಂದು ಬೆಳಿಗ್ಗೆ ೯ ಗಂಟೆಗೆ ಗಣಪತಿ ಹೋಮ ಹಾಗೂ ೧೦ ಗಂಟೆಗೆ ದುರ್ಗಾಹವನವನ್ನು ನಡೆಸಲಾಯಿತು. ಭಕ್ತಾದಿಗಳು ಕೈಜೋಡಿಸಿ ಮಾಡಿಸಿರುವ “ಮಾಂಗಲ್ಯ ಸರ”ವನ್ನು ಮಾತೆ ಶ್ರೀ ದುರ್ಗಾಭಗವತಿ ದೇವಿಗೆ ಅರ್ಪಿಸಲಾಯಿತು.