ಕಣಿವೆ, ಅ. ೧೮: ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಟೊಮ್ಯಾಟೋ ಹಣ್ಣಿನ ಬೆಳೆ ನೆಲಕಚ್ಚುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಇದರ ದರ ದುಬಾರಿಯಾಗುತ್ತಿದೆ.

ಭಾನುವಾರ ಕುಶಾಲನಗರದ ಮಾರುಕಟ್ಟೆ ರಸ್ತೆಯಲ್ಲಿನ ತರಕಾರಿ ಮಾರಾಟ ಮಳಿಗೆಗಳಲ್ಲಿ ಒಂದು ಕೆ.ಜಿ. ಟೊಮ್ಯಾಟೋ ಹಣ್ಣಿನ ಬೆಲೆ ೮೦ ರೂಗಳಿಗೆ ಮಾರಾಟ ಮಾಡುತ್ತಿರುವುದು ಕಂಡುಬAತು.

ದುಬಾರಿಯಾದ ಟೊಮ್ಯಾಟೋ ಹಣ್ಣಿನ ದರ ಕೇಳಿದ ಗ್ರಾಹಕರು ಆಶ್ಚರ್ಯ ಚಕಿತರಾದರು. ಸೇಬಿನ ಹಣ್ಣಿನ ಬೆಲೆ ರೂ. ೧೦೦ ಇದೆ. ಆದರೆ ಟೊಮ್ಯಾಟೋ ಬೆಲೆಯೂ ಹತ್ತಿರ ಹತ್ತಿರ ರೂ. ೧೦೦ ರ ಗಡಿಯಲ್ಲಿದೆಯೇ ಎಂದು ಮಾರಾಟಗಾರರನ್ನು ಪ್ರಶ್ನಿಸುತ್ತಾ ಇದ್ದ ಗ್ರಾಹಕರು ಒಂದು ಕೆ.ಜಿ. ಟೊಮ್ಯಾಟೋ ಬದಲಾಗಿ ಅರ್ಧ ಕೆ.ಜಿ. ಕೆಲವರು ಖರೀದಿಸಿದರೆ, ಕೆಲವರು ರೂ. ೨೦ ಕೊಟ್ಟು ಕಾಲು ಕೆ.ಜಿ.ಗೆ ಎರಡರಿಂದ ಮೂರು ಹಣ್ಣುಗಳನ್ನು ಖರೀದಿಸಿ ತೆರಳುತ್ತಿದ್ದುದು ಕಂಡುಬAತು. ಸಾಮಾನ್ಯವಾಗಿ ಕೃಷಿಕರು ಬೆಳೆಯುವ ತರಕಾರಿ ಕಾಯಿ ಪಲ್ಯೆಗಳಿಗೆ ಪೂರಕವಾದ ಬೆಲೆ ಮಾರುಕಟ್ಟೆಯಲ್ಲಿ ದೊರಕದೇ ಹತಾಶರಾಗುತ್ತಿರುವ ಈ ಹೊತ್ತಿನಲ್ಲಿ ಟೊಮ್ಯಾಟೋ ಹಣ್ಣಿನ ಬೆಲೆ ಜಿಗಿಯುತ್ತಿರುವುದು ಅಚ್ಚರಿಯುಂಟು ಮಾಡಿದೆ.