ಚೆಟ್ಟಳ್ಳಿ, ಅ. ೧೮: ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕಾವೇರಿಮಾತೆಗೆ ವಿಶೇಷ ಪೂಜೆ ಹಾಗೂ ತೀರ್ಥ ವಿತರಣೆ ನಡೆಯಿತು.

ತಲಕಾವೇರಿಯಲ್ಲಿ ತೀರ್ಥೋದ್ಭವದ ನಂತರ ಚೆಟ್ಟಳ್ಳಿ ಸಹಕಾರ ಸಂಘದ ವತಿಯಿಂದ ತಲಕಾವೇರಿಯಿಂದ ಕಾವೇರಿ ತೀರ್ಥವನ್ನು ತಂದು ಸಹಕಾರ ಸಂಘದ ಮುಂದಿರುವ ಕಾವೇರಿ ಪ್ರತಿಮೆಗೆ ವಿಶೇಷ ಹೂವಿನ ಅಲಂಕಾರದೊAದಿಗೆ ತುಲಾಸಂಕ್ರಮಣದ ಅಂಗವಾಗಿ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು.

ಪೂಜಾ ಕೈಂಕರ್ಯಗಳ ನಂತರ ತೀರ್ಥ ವಿತರಣೆ ಹಾಗೂ ಪ್ರಸಾದ ವಿತರಣಾ ಕಾರ್ಯ ನೆರವೇರಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ನಿರ್ದೇಶಕರು, ಸಿಬ್ಬಂದಿಗಳು, ಸಾರ್ವಜನಿಕರು ಹಾಜರಿದ್ದರು.ನಾಪೋಕ್ಲು: ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ ಪಟ್ಟಣದಲ್ಲಿ ಕಾವೇರಿ ತೀರ್ಥ ವಿತರಿಸಲಾಯಿತು.

ತಲಕಾವೇರಿ ತೀರ್ಥೋದ್ಭವದ ಬಳಿಕ ಭಾನುವಾರ ಭಾಗಮಂಡಲದಿAದ ರಥಯಾತ್ರೆ ಆರಂಭಗೊAಡು ಚೇರಂಗಾಲ, ಅಯ್ಯಂಗೇರಿ, ಪುಲಿಕೋಟು, ಬಲ್ಲಮಾವಟಿ, ನೆಲಜಿ ಮಾರ್ಗವಾಗಿ ರಾತ್ರಿ ನಾಪೋಕ್ಲು ತಲುಪಿತ್ತು. ಸೋಮವಾರ ರಥಯಾತ್ರೆ ನಾಪೋಕ್ಲುವಿನಿಂದ ಹೊರಟು ಪಾಲೂರು ಹರಿಶ್ಚಂದ್ರ ದೇವಳದಲ್ಲಿ ವಿಶೇಷ ಪೂಜೆ ಬಳಿಕ ವಿಸರ್ಜನೆಗೊಂಡಿತು.