ಭಾಗಮಂಡಲ, ಅ. ೧೮: ತಲಕಾವೇರಿಯಲ್ಲಿ ತೀರ್ಥೋದ್ಭವದಂದು ಕಾವೇರಿ ತೀರ್ಥರೂಪಿಣಿಯಾಗಿ ಉಕ್ಕಿ ಹರಿದು ಸಹಸ್ರಾರು ಭಕ್ತರ ಮನಸೆಳೆದಳು. ನಂತರದ ದಿನಗಳಲ್ಲಿ ಪ್ರತಿವರ್ಷವೂ ಕ್ಷೇತ್ರಗಳಿಗೆ ಭಕ್ತರು ಆಗಮಿಸುತ್ತಾರೆ. ಆದರೆ ಈ ವರ್ಷ ಭಕ್ತರ ಸಂಖ್ಯೆ ವಿರಳವಾಗಿತ್ತು.
ಪ್ರತಿವರ್ಷದಂತೆ ತೀರ್ಥೋದ್ಭವದ ಮರುದಿನ ಹೆಚ್ಚಿನ ಭಕ್ತರು ಕಂಡುಬರಲಿಲ್ಲ. ಇಂದು ಭಾಗಮಂಡಲಕ್ಕೆ ಆಗಮಿಸಿದ ಭಕ್ತರು ಪಿಂಡಪ್ರದಾನ ಮಾಡಿ ಭಗಂಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ತೀರ್ಥ ಪ್ರಸಾದ ಸ್ವೀಕರಿಸಿದರು. ಕೊಡಗು ಏಕೀಕರಣ ರಂಗದಿAದ ಇಂದೂ ಕೂಡ ಭಕ್ತರಿಗೆ ಅನ್ನದಾನ ವ್ಯವಸ್ಥೆ ಕಲ್ಪಿಸಲಾಗಿತ್ತು.
ತೀರ್ಥ ಪ್ರಸಾದ ವಿತರಣೆಯಲ್ಲಿ ಭಾಗಮಂಡಲದ ಸ್ಥಳೀಯ ಯುವಕರು ಸ್ವಯಂ ಸೇವಕರಾಗಿ ಸೇವೆಸಲ್ಲಿಸಿದರು. ಇನ್ನೂ ಒಂದು ತಿಂಗಳ ಕಾಲ ಅಂದರೆ ನವೆಂಬರ್ ೧೭ರವರೆಗೆ ಕ್ಷೇತ್ರದಲ್ಲಿ ಜಾತ್ರೆಯ ಸಂಭ್ರಮ ಇರಲಿದೆ ಭಕ್ತರು ದೇವಾಲಯದಿಂದ ಪಡಿಯಕ್ಕಿ ತೆಗೆದುಕೊಂಡು ಹೋಗುವ ದೃಶ್ಯ ಕಂಡುಬAದಿತು. ಮಡಿಕೇರಿ ಮತ್ತು ಸುತ್ತಮುತ್ತಲ ಭಾಗಗಳಿಂದ ಭಾಗಮಂಡಲಕ್ಕೆ ಬಸ್ಸಿನ ಮೂಲಕ ಆಗಮಿಸಿದ ಭಕ್ತರು ತಲಕಾವೇರಿಗೆ ತೆರಳಲು ಸಂಚಾರ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದುದು ಕಂಡುAಬAದಿತು. ಬಾಡಿಗೆ ವಾಹನ ಬಳಸಿ ಭಕ್ತರು ತಲಕಾವೇರಿಗೆ ತೆರಳುತ್ತಿದ್ದ ದೃಶ್ಯ ಗೋಚರಿಸಿತು. ಕಿರು ಸಂಕ್ರಮಣದವರೆಗೆ ತಲಕಾವೇರಿಗೆ ಬಸ್‌ನ ವ್ಯವಸ್ಥೆ ಕಲ್ಪಿಸುವಂತೆ ಭಕ್ತರ ಆಗ್ರಹವಾಗಿದೆ.