ಮಡಿಕೇರಿ, ಅ.೧೮ : ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಮಡಿಕೇರಿ ತಾಲೂಕು ಮಟ್ಟದ ಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ ಸಮಿತಿ ಸಭೆ ಕೂಟದ ಜಿಲ್ಲಾಧ್ಯಕ್ಷ ಬಿ.ಬಿ.ಐತ್ತಪ್ಪ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಗರದ ಬಾಲಭವನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯಲ್ಲಿ ತುಳುಭಾಷಿಕರನ್ನು ಸಂಘಟಿಸುವ ಕುರಿತು ಚರ್ಚಿಸಲಾಯಿತು. ತಾಲೂಕು ಸಮಿತಿ ಸೇರಿದಂತೆ ಜಿಲ್ಲೆಯ ಎಲ್ಲಾ ಹೋಬಳಿ, ಗ್ರಾಮ ಸಮಿತಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲು ಪ್ರತಿ ಹೋಬಳಿಯಲ್ಲಿ ಸಭೆ ನಡೆಸುವಂತೆ ಕೂಟದ ಪ್ರಮುಖರು ಕರೆ ನೀಡಿದರು.
ಜಿಲ್ಲೆಯಲ್ಲಿರುವ ೧೩ ತುಳು ಭಾಷಿಕ ಸಮುದಾಯಗಳಿಗೆ ಕೂಟದಲ್ಲಿ ಸ್ಥಾನಮಾನ ನೀಡುವುದರೊಂದಿಗೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತುಳು ಕೂಟವನ್ನು ಬಲಿಷ್ಠಗೊಳಿಸುವಂತೆ ಐತ್ತಪ್ಪ ರೈ ತಿಳಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ
ಸಭೆಯಲ್ಲಿ ತುಳುವೆರ ಜನಪದ ಕೂಟದ ಮಡಿಕೇರಿ ತಾಲೂಕಿನ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಎಂ.ಡಿ.ಸುರೇಶ್ ಹಾಗೂ ಸಂಚಾಲಕರಾಗಿ ಪ್ರಸಾದ್ ಬಿಳಿಗೇರಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಸುರೇಶ್ ಮಕ್ಕಂದೂರು, ಖಜಾಂಚಿಯಾಗಿ ಶೋಭಾ ಮುತ್ತಪ್ಪ, ಸಲಹೆಗಾರರಾಗಿ ಸದಾನಂದ ಬಂಗೇರ ನೇಮಕಗೊಂಡರು.
ಸದಸ್ಯರುಗಳಾಗಿ ಸುಂದರ ಮದೆ, ಐತ್ತಪ್ಪ ಕಾಂಡನಕೊಲ್ಲಿ, ಚಂದ್ರಶೇಖರ್ ಮೂರ್ನಾಡು, ಸುಶೀಲ ಮಧು ಮೇಕೇರಿ, ನಾಗರಾಜ್ ಮಡಿಕೇರಿ, ಕುಶನ್ ರೈ, ಶ್ರೀನಿವಾಸ್ ಪನ್ನೆ, ಕಿಶೋರ್ ರೈ ಬಿಳಿಗೇರಿ, ಅಶೋಕ ಮಡಿಕೇರಿ, ಸುಂದರ ಮೂರ್ನಾಡು, ನಾರಾಯಣ ಮಡಿಕೇರಿ, ಲೋಕೇಶ್ ರೈ ಮಡಿಕೇರಿ ಆಯ್ಕೆಯಾಗಿದ್ದಾರೆ.
ಸನ್ಮಾನ
ಸಭೆಯಲ್ಲಿ ನಗರಸಭಾ ಸದಸ್ಯರುಗಳಾದ ಅರುಣ್ ಶೆಟ್ಟಿ, ಚಿತ್ರಾವತಿ ಪೂವಪ್ಪ ಹಾಗೂ ಓಂಕಾರ ಚಂದ್ರ ಅವರುಗಳನ್ನು ತುಳುವೆರ ಜನಪದ ಕೂಟದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕೂಟದ ಜಿಲ್ಲಾ ಉಪಾಧ್ಯಕ್ಷ ಆನಂದರಘು, ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ, ಸ್ಥಾಪಕಾಧ್ಯಕ್ಷ ಶೇಖರ್ ಭಂಡಾರಿ, ಖಜಾಂಚಿ ಪ್ರಭು ರೈ, ಸಂಘಟನಾ ಕಾರ್ಯದರ್ಶಿ ರಾಜೀವ್ ಲೋಚನ, ಉಪಾಧ್ಯಕ್ಷೆ ವಿಜಯಲಕ್ಷಿö್ಮ ರವಿ ಶೆಟ್ಟಿ, ಕಲಾವತಿ ಪೂವಪ್ಪ, ಸುಜಾತ ಚಂದ್ರಶೇಖರ್, ಆರ್.ಬಿ.ರವಿ, ಎಂ.ಡಿ.ನಾಣಯ್ಯ, ಸಂಧ್ಯಾ ಗಣೇಶ್ ರೈ, ಚಿತ್ರಾವತಿ ಮತ್ತಿತರ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಜಿಲ್ಲಾ ಕಾರ್ಯದರ್ಶಿ ಬಿ.ಎಸ್.ಆನಂದ ಸ್ವಾಗತಿಸಿ, ನಿರ್ದೇಶಕ ಬಿ.ಎಸ್.ಜಯಪ್ಪ ನಿರೂಪಿಸಿ, ಲೀಲಾ ಶೇಷಮ್ಮ ವಂದಿಸಿದರು.