ಮುಳ್ಳೂರು, ಅ. ೧೬: ಸಮೀಪದ ಶನಿವಾರಸಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಮುಳ್ಳೂರು, ಅ. ೧೬: ಸಮೀಪದ ಶನಿವಾರಸಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಹಾಗೂ ವಾಣಿಜ್ಯ ಸಂಕೀರ್ಣ ಕಟ್ಟಡ ಕಾಮಗಾರಿಗೆ ವಿಜಯ ದಶಮಿಯಂದು ಶಂಕುಸ್ಥಾಪನೆ ನೆರವೇರಿಸಲಾಯಿತು.

ಶನಿವಾರಸಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಸಿ.ಶರತ್‌ಶೇಖರ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ಸವಿತ ಸತೀಶ್, ಸಂಘದ ನಿರ್ದೇಶಕರಾದ ಲೋಕೇಶ್, ಎಸ್.ಎನ್.ರಘು, ಟಿ.ಆರ್.ಗಿರೀಶ್, ಪುಷ್ಪ ಪೊನ್ನಪ್ಪ, ಸಿ.ಜೆ.ಗಿರೀಶ್, ರಕ್ಷಿತ್, ಆನಂದ್, ಬಸಪ್ಪ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೊಡ್ಡಯ್ಯ, ಕಚೇರಿ ಸಿಬ್ಬಂದಿ ಹಾಜರಿದ್ದರು.