ಚೆಟ್ಟಳ್ಳಿ, ಅ. ೧೬: ಕಾವೇರಿ ತೀರ್ಥೋದ್ಭವದ ಪ್ರಯುಕ್ತ ಚೆಟ್ಟಳ್ಳಿಯ ಶ್ರೀಮಂಗಲ ಭಗವತಿ ದೇವಾಲಯದಲ್ಲಿ ಸಂಕ್ರಮಣಧಾರೆ ಪೂಜೆ ನೆರವೇರಿತು.
ಭಗವತಿದೇವಿಗೆ ವಿಘ್ನೇಶ್ವರ, ಕ್ಷೇತ್ರಪಾಲಕನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕಾವೇರಿ ತೀರ್ಥೋದ್ಭವದ ಅಂಗವಾಗಿ ಪ್ರತಿ ವರ್ಷ ಸಂಕ್ರಮಣಧಾರೆಯ ವಿಶೇಷ ಪೂಜೆಯನ್ನು ಸಲ್ಲಿಸಲಾಗುತಿದ್ದು, ಈ ವರ್ಷವೂ ದೇವಿಯ ಸನ್ನಿಧಿಯಲ್ಲಿ ಪೂಜೆಯನ್ನು ಸಲ್ಲಿಸಿ, ಒಳಿತನ್ನು ಮಾಡಲೆಂದು ದೇವಾಲಯ ಸಮಿತಿ ಸದಸ್ಯರಾದ ಪುತ್ತರಿರ ಕಾಶಿ ಸುಬ್ಬಯ್ಯ ದೇವರ ನೆಲೆಯಲ್ಲಿ ಊರಿನವರ ಪರವಾಗಿ ಬೇಡಿಕೊಂಡರು.