ಕರಿಕೆ, ಅ. ೧೬: ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಅವರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಸರಕಾರ ಆದೇಶಿಸಿದೆ.
ಕಳೆದ ಹನ್ನೊಂದು ತಿಂಗಳ ಹಿಂದೆ ರವಿಕುಶಾಲಪ್ಪ ಅವರನ್ನು ರಾಜ್ಯ ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷರನ್ನಾಗಿ ಸರಕಾರ ನೇಮಿಸಿ ಆದೇಶ ಮಾಡಿತ್ತು. ಈ ಹಿಂದೆ ಕೊಡಗು ಜಿ.ಪಂ. ಅಧ್ಯಕ್ಷರಾಗಿ ರವಿಕುಶಾಲಪ್ಪ ಕೆಲಸ ಮಾಡಿದ್ದರು. ಶಾಸಕ ಕೆ.ಜಿ. ಬೋಪಯ್ಯ ಇವರನ್ನು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲು ಶಿಫಾರಸ್ಸು ಮಾಡಿದ್ದರು.
ಕಡತ ಪರಿಶೀಲನೆ ಹಂತದಲ್ಲಿ ಮುಖ್ಯಮಂತ್ರಿ ಬದಲಾದ ಹಿನ್ನೆಲೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಈ ಬಗ್ಗೆ ಮರುಪರಿಶೀಲನೆ ಮಾಡಲು ಕೋರಲಾಗಿತ್ತು. ಮುಖ್ಯಮಂತ್ರಿಗಳು ರಾಜ್ಯಪಾಲರಿಗೆ ಮುಂದಿನ ಕ್ರಮಕ್ಕೆ ಶಿಪಾರಸ್ಸು ಮಾಡಿ ಕಡತ ರಾಜಭವನಕ್ಕೆ ಕಳುಹಿಸಿದ್ದರು. ಇದೀಗ ರಾಜ್ಯಪಾಲರ ಆದೇಶದನ್ವಯ ತಕ್ಷಣ ಜಾರಿಗೆ ಬರುವಂತೆ ಸಚಿವ ಸಂಪುಟದ ದರ್ಜೆಯ ಸ್ಥಾನ ಮಾನ ನೀಡಿ ಸರಕಾರ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.