ಮಡಿಕೇರಿ, ಅ.೧೬: ಮೊದ ಮೊದಲು ಸಾಮಾನ್ಯನಂತೆ ಬಂದು ಪರಿಚಯ ಮಾಡಿಕೊಂಡು ಸಭ್ಯನಂತೆ ಬಿಂಬಿಸಿಕೊAಡಿದ್ದ ಪುನಿತ್ ದಿಢೀರಾಗಿ ಒಂದು ದಿನ ಸಿರಿವಂತನAತೆ ಬಂದು ತಾನು ವಿಧಾನ ಸೌಧದಲ್ಲಿ ಕೆಲಸದಲ್ಲಿದ್ದು, ನನಗೆ ತುಂಬಾ ‘ಪವರ್’ ಇದೆ ಎಂದು ಹೇಳಿ ವಂಚನೆಯ ಬಲೆ ಬೀಸಿದ್ದ..!

ಬೆಟ್ಟದಪುರದ ವೆಂಕಟೇಶ್‌ಗೆ ಕುಶಾಲನಗರದಲ್ಲಿ ಪರಿಚಯವಾದಾಗ ಪುನಿತ್ ಒಂದು ವಾರವಾದರೂ ಒಂದೇ ಬಟ್ಟೆಯಲ್ಲಿದ್ದನಂತೆ. ಈತನಿಗೆ ಊಟ ಕೊಡಿಸುವದರೊಂದಿಗೆ ತನಗೆ ಬರುತ್ತಿದ್ದ ಅಲ್ಪ ಸಂಬಳದಲ್ಲಿ ಪುನಿತ್‌ಗೆ ಸಾಲ ಕೂಡ ನೀಡಿದ್ದ. ಆದರೆ, ಪಡೆದ ಸಾಲವನ್ನು ಹಿಂತಿರುಗಿಸಿ ನಂಬಿಕೆ ಗಿಟ್ಟಿಸಿಕೊಂಡಿದ್ದ. ಇದರಿಂದಾಗಿ ವೆಂಕಟೇಶ್ ತನ್ನೆಲ್ಲ ಸಂಕಷ್ಟಗಳನ್ನು ಹೇಳಿಕೊಂಡಿದ್ದ.

ಕೆಂಪು ಕಾರಿನಲ್ಲಿ ಬಂದ..!

ಕೆಲ ದಿವಸಗಳ ಕಾಲ ನಾಪತ್ತೆಯಾಗಿದ್ದ ಪುನಿತ್ ಒಂದು ದಿನ ಇದ್ದಕ್ಕಿದ್ದಂತೆ ಕೆಂಪು ಬಣ್ಣದ ಐಷಾರಾಮಿ ಕಾರಿನಲ್ಲಿ ನಾಲ್ವರು ಬೌನ್ಸರ್‌ಗಳೊಂದಿಗೆ ಬಂದಿಳಿಯುವಾಗ ವೆಂಕಟೇಶ್‌ಗೆ ಅಚ್ಚರಿ..!? ‘ತಾನು ಬೆಂಗಳೂರಿನಲ್ಲಿ ವಿಧಾನ ಸೌಧದಲ್ಲಿ ದೊಡ್ಡ ಹುದ್ದೆಯಲ್ಲಿದ್ದು, ಎಲ್ಲರ ಸಂಪರ್ಕವಿದೆ, ಕೆಲಸ ಖಾಯಂಗೊಳಿಸುವದಲ್ಲದೆ, ಪತ್ನಿಗೂ ಸರಕಾರೀ ಆಸ್ಪತ್ರೆಯಲ್ಲಿ ಕೆಲಸ ಕೊಡಿಸುವದಾಗಿ’ ಹೇಳಿದ್ದಾನೆ. ನಂಬಿದ ವೆಂಕಟೇಶ್ ತನ್ನದಲ್ಲದೆ ತನ್ನ ಸಂಬAಧಿಕರ, ಊರಿನವರಿಂದಲೂ ಹಣ ಸಂಗ್ರಹಿಸಿ ಕೊಟ್ಟಿದ್ದಾನೆ.

ಮಾತಿನಲ್ಲಿ ಮೋಡಿ..!

ಸರಕಾರೀ ಕೆಲಸ ಮಾಡಿಸಿಕೊಡುವುದಾಗಿ ಜನರಿಂದ ಅಷ್ಟೊಂದು ಮೊತ್ತದ ಹಣ ಕೀಳುವಾಗಲೂ ಯಾರಿಗೂ ಆತನ ಮೇಲೆ ಸಂಶಯ ಬಾರದಿರುವುದು ಮಾತ್ರ ಅಚ್ಚರಿಯೇ ಸರಿ..! ‘ಮಾತಿನಲ್ಲೇ ಮೋಡಿ ಮಾಡುತ್ತಾನೆ ಸರ್, ಆತ ಹೇಳುವದೆಲ್ಲವೂ ಹಂಡ್ರೆಡ್ ಪರ್ಸೆಂಟ್ ಸತ್ಯ ಅನ್ನೋ ಥರ ಮಾತಾಡ್ತಾನೆ; ನಮಗೆ ನಿಜವಾಗಿಯೂ ಗೊತ್ತಾಗಿಲ್ಲ’ ಎಂದು ಪುನಿತ್‌ನಿಂದ ಮೋಸ ಹೋದ ವೆಂಕಟೇಶ್ ಹೇಳುತ್ತಾರೆ.

ನೇಮಕಾತಿ ಪೋಸ್ಟ್ಪೋನ್..!

ಹಣ ಪಡೆದುಕೊಂಡ ಬಳಿಕ ಕೆಲವರಿಗೆ ನೇಮಕಾತಿ ಪತ್ರ ನೀಡಿದ್ದಾನೆ. ನೇಮಕಾತಿ ಪತ್ರ ಸಿಕ್ಕಿದವರು ಕೆಲಸಕ್ಕೆ ಸೇರಿಕೊಳ್ಳಲು ಮುಂದಾಗುತ್ತಿದ್ದAತೆ ಹಳೆಯ ನೇಮಕಾತಿ ಆದೇಶವನ್ನು ಏನಾದರೊಂದು ಕಾರಣ ನೀಡಿ ಮುಂದೂಡಿ ಮತ್ತೆ ಕೆಲವು ದಿನಗಳ ನಂತರ ಮತ್ತೆ ಇನ್ನೊಂದು ಪತ್ರ ಕಳುಹಿಸುತ್ತಿದ್ದ. ಮತ್ತೆ ಅದನ್ನು ಮುಂದೂಡುತ್ತಿದ್ದುದರಿAದ ಸಂಶಯಗೊAಡ ಹಣ ನೀಡಿದವರು ಪರಿಶೀಲಿಸಿದಾಗ ನಕಲಿ ಎಂದು ಪತ್ತೆಯಾಗಿದೆ.

(ಮೊದಲ ಪುಟದಿಂದ)

ಅರುಣ್ ಕೈಚಳಕ..!

ನಕಲಿ ನೇಮಕಾತಿ ಪತ್ರ ತಯಾರಿಸುವಲ್ಲಿ ಈಗಾಗಲೇ ಬಂಧಿತನಾಗಿರುವ ಮೈಸೂರಿನ ಗಾಯತ್ರಿಪುರದ ಅರುಣ್ ಕುಮಾರ್ ಕೈಚಳಕವೂ ಇದೆ. ತನ್ನ ಸಹೋದರಿಯ ವಿವಾಹಕ್ಕೆ ಹಣದ ಅವಶ್ಯಕತೆಯಿದ್ದ ಅರಣ್‌ನನ್ನು ಪರಿಚಯಿಸಿಕೊಂಡ ಪುನಿತ್ ಆತನಿಗೆ ಒಂದಿಷ್ಟು ಹಣ ನೀಡಿ ತನ್ನ ಕೆಲಸಕ್ಕೆ ಬಳಸಿಕೊಂಡಿದ್ದಾನೆ. ನಕಲಿ ನೇಮಕಾತಿ ಪತ್ರ ತಯಾರಿಸಿ ಅದನ್ನು ಗುಪ್ತವಾಗಿ ಮುದ್ರಿಸಿ ಕೊಡುವ ಕೆಲಸವನ್ನು ಈ ಅರುಣ್‌ಕುಮಾರ್ ಮಾಡುತ್ತಿದ್ದ.

ವಾಪಸ್ ಕೊಡುವ ಭರವಸೆ,.!

ಪುನಿತ್ ಕೊಟ್ಟ ನೇಮಕಾತಿ ಪತ್ರ ನಕಲಿ ಎಂದು ಅರಿವಾಗುತ್ತಿದ್ದಂತೆ ವೆಂಕಟೇಶ್ ‘ನಮಗೆ ಕೆಲಸ ಬೇಡ., ನಮ್ಮ ಹಣ ಹಿಂತಿರುಗಿಸಿ’ ಎಂದು ಒತ್ತಾಯ ಮಾಡಿದ್ದಾರೆ. ಅಲ್ಲಿಂದ ನಾಪತ್ತೆಯಾದ ಪುನಿತ್‌ನ ಮೊಬೈಲ್ ಕೂಡ ‘ಸ್ವಿಚ್ ಆಫ್’ ಆಗಿತ್ತು. ನಂತರ ಕೆಲವು ದಿನಗಳ ಬಳಿಕ ಬೇರೊಂದು ನಂಬರಿನಿAದ ಕರೆ ಮಾಡಿದ ಪುನಿತ್ ವೆಂಕಟೇಶನೊAದಿಗೆ ಮಾತನಾಡಿ, ’ಹಣವನ್ನು ಗುರುವಾರ (ತಾ.೭ರಂದು) ಬಂದು ಕೊಡುತ್ತೇನೆ, ಈ ವಿಷಯವನ್ನು ಯಾರಿಗೂ ಹೇಳಬೇಡ.,’ ಎಂದು ಹೇಳಿದ್ದ. ಆದರೆ, ದುರದೃಷ್ಟಕ್ಕೆ ತಾ.೬ರ ಬುಧವಾರದಂದು ಪೊಲೀಸರ ಅತಿಥಿಯಾದ..!

@ಕುಡೆಕಲ್ ಸಂತೋಷ್