ಶನಿವಾರಸಂತೆ, ಅ. ೧೫: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಆವರಣದಲ್ಲಿ ಕೃಷಿ ಇಲಾಖೆ ಯೋಜನೆಗಳ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾ ಉಪ ಕೃಷಿ ನಿರ್ದೇಶಕ ಮುತ್ತುರಾಜ್ ಮಾತನಾಡಿ, ಬೆಳೆ ಸಮೀಕ್ಷೆಯ ಮಹತ್ವ, ಸಮೀಕ್ಷೆ ಕೈಗೊಳ್ಳುವ ವಿಧಾನ ಹಾಗೂ ಅದರಿಂದಾಗುವ ಅನುಕೂಲತೆಗಳ ಬಗ್ಗೆ ತಿಳಿಸಿದರು. ತಾಲೂಕು ಕೃಷಿ ಸಹಾಯಕ ನಿರ್ದೇಶಕ ಯಾದವ್ ಬಾಬು ಹಾಗೂ ಹೋಬಳಿ ರೈತ ಸಂಪರ್ಕಾಧಿಕಾರಿ ಜಹಾನ್ ತಾಜ್ ಮಾತನಾಡಿ, ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಾವನಾ, ಸದಸ್ಯರಾದ ಎಂ. ಹನೀಫ್, ದಿನೇಶ್ ಕುಮಾರ್, ದೊಡ್ಡಯ್ಯ, ರೇಣುಕಾ, ಲೀನಾ, ದಾಕ್ಷಾಯಿಣಿ, ಪಿಡಿಓ ಹರೀಶ್, ಕಾರ್ಯದರ್ಶಿ ದೇವರಾಜ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಬ್ಯಾಡಗೊಟ್ಟ, ಬೆಂಬಳೂರು, ಮಲ್ಲಳ್ಳಿ, ಕ್ಯಾತರ, ದೊಡ್ಡಕುಂದ, ಶಿವರಳ್ಳಿ, ಹಾರೋಹಳ್ಳಿ, ಶಿರಹ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.