*ಸಿದ್ದಾಪುರ, ಅ. ೧೫: ನೆಲ್ಲಿಹುದಿಕೇರಿ, ವಾಲ್ನೂರು, ತ್ಯಾಗತ್ತೂರು ಹಾಗೂ ಚೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಿಜೆಪಿ ಬೂತ್ ಅಧ್ಯಕ್ಷರುಗಳ ಮನೆಗೆ ನಾಮಫಲಕ ಅಳವಡಿಸುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಜಿಲ್ಲೆಯಲ್ಲಿ ಪಕ್ಷ ಬಲವಾಗಿದ್ದು, ಮತ್ತಷ್ಟು ಸಂಘಟನೆಗೆ ಮುಂದಾಗಬೇಕೆAದು ಕರೆ ನೀಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿ.ಕೆ. ಲೋಕೇಶ್, ಸೋಮವಾರಪೇಟೆ ಮಂಡಲ ಅಧ್ಯಕ್ಷ ಮನು ಕುಮಾರ್ ರೈ, ಪ್ರಧಾನ ಕಾರ್ಯದರ್ಶಿಗಳಾದ ಗೌತಮ್, ಮೋಹಿತ್, ಕೃಷ್ಣಪ್ಪ, ತಾಲೂಕು ಯುವ ಮೋರ್ಚಾದ ಅಧ್ಯಕ್ಷ ಚಂದ್ರಶೇಖರ್ ಹೇರೂರು, ಶಕ್ತಿ ಕೇಂದ್ರದ ಪ್ರಮುಖ್‌ಗಳಾದ ಬೆಳ್ಳಿಯಪ್ಪ, ಮನುಮಹೇಶ್, ಕಂಠಿಕಾರ್ಯಪ್ಪ ಮತ್ತಿತರ ಪ್ರಮುಖರು ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಜರಿದ್ದರು.