ಕಣಿವೆ, ಅ. ೧೫: ಈ ಪ್ಲಾಸ್ಟಿಕ್ ಹೊದಿಕೆಗಳ ಸೂರುಗಳು ಇರುವ ಮಂದಿ ಜಿಲ್ಲೆಯ ಯಾವುದೋ ಅರಣ್ಯಗಳಳೊಳಗೆ ಇರುವ ಯಾವುದೋ ಗಿರಿಜನ ಹಾಡಿಯ ವರಲ್ಲ. ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ಹಾಗೂ ಸಂಬAಧ ಪಟ್ಟ ಇಲಾಖೆಗಳಿಗೆ ಅರಿವಾಗದಂತೆ ಎಲ್ಲೋ ಕಾನನದೊಳಗೆ ಮರೆಯಾಗಿರುವ ಹಾಡಿಯಂತೂ ಮೊದಲೇ ಅಲ್ಲ.

ಆಧುನಿಕ ಸ್ಪರ್ಶದೊಂದಿಗೆ ರಾಷ್ಟಿçÃಯ ಹೆದ್ದಾರಿ ಗುಡ್ಡೆಹೊಸೂರಿ ನತ್ತ ಜಿಂಕೆಯ ವೇಗದಲ್ಲಿ ಬೆಳೆಯುತ್ತಾ ಬರುತ್ತಿರುವ ಕುಶಾಲನಗರ ತಾಲೂಕು ಕೇಂದ್ರದ ಕೂಗಳತೆಯಲ್ಲಿ ಇರುವ ಕಡು ಬಡತನದ ಕುಟುಂಬಗಳು ಸರ್ಕಾರ ನೀಡುವ ಉಚಿತ ಸೂರಿಗಾಗಿ ಬೇಡುತ್ತಾ ದಶಕಗಳಿಂದಲೂ ಇದ್ದಲ್ಲೇ ಬಿದ್ದು ಬೇಡುತ್ತಿರುವ ಬಸವನಹಳ್ಳಿಯ ಜನವಸತಿ ಪ್ರದೇಶವಿದು.

ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ರಾಷ್ಟಿçÃಯ ಹೆದ್ದಾರಿ ಬದಿಯಲ್ಲಿನ ಸರ್ವೆ ನಂಬರ್ ೧/೧ ರಲ್ಲಿ ಕಳೆದ ಹದಿನೈದು ವರ್ಷಗಳಿಂದಲೂ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿರುವ ಈ ನಿರ್ಗತಿಕರಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಇದುವರೆಗೂ ಸೂಕ್ತ ನಿವೇಶನ ಒದಗಿಸಿ ಮನೆ ಕಟ್ಟಿಕೊಡುವಲ್ಲಿ ವಿಫಲವಾಗಿದೆ.

ಅಷ್ಟೇ ಅಲ್ಲ, ದಶಕಗಳಿಗೂ ಹೆಚ್ಚಿನ ಅವಧಿಯಿಂದ ಇಲ್ಲಿ ಪ್ಲಾಸ್ಟಿಕ್ ಹೊದಿಕೆ ಹಾಕಿಕೊಂಡು ಅರಣ್ಯ ವಾಸಿಗಳಿಗೂ ಕಡೆಯಾಗಿ ಬವಣೆಗಳಲ್ಲಿ ಬಂಧಿಯಾಗಿ ಬದುಕುತ್ತಿರುವ ಈ ಮಂದಿ ಪಂಚಾಯಿತಿಯ ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಬಸವನಹಳ್ಳಿಯ ರಾಷ್ಟಿçÃಯ ಹೆದ್ದಾರಿಯ ಅಂಚಿನಲ್ಲೇ ಬವಣೆಗಳ ಬದುಕು ಕಟ್ಟಿಕೊಂಡು ಹರಕು ಮುರುಕಾದ ಸೂರುಗಳಲ್ಲಿ ಮಳೆ - ಚಳಿ ಲೆಕ್ಕಿಸದೆ ಬಿದ್ದು ಒದ್ದಾಡುತ್ತಾ ನಮಗೆ ವಾಸಕ್ಕೆ ಸರಿಯಾದ ಚೂರು - ಪಾರು ಸೂರು ಕೊಡಿ, ಕುಡಿಯಲು ನೀರು ಕೊಡಿ ಎಂದು ಪರಿ ಪರಿಯಾಗಿ ಪಂಚಾಯಿತಿಯನ್ನು ಬೇಡುತ್ತಿದ್ದರೂ ಕೂಡ ಈ ನಿರ್ಗತಿಕ ಮಂದಿಯ ರೋದನ ಜಿಲ್ಲಾಡಳಿತಕ್ಕೆ ಈವರೆಗೂ ಕೇಳದಿರುವುದು ಮಾತ್ರ ವಿಷಾಧನೀಯ. ಕೊಡಗು ಜಿಲ್ಲಾಧಿಕಾರಿಗಳು ಇದೇ ಹೆದ್ದಾರಿಯಲ್ಲಿ ಓಡಾಡುತ್ತಾರೆ. ಜಿಲ್ಲಾ ಪಂಚಾಯಿತಿ ಸಿಇಓ ಕೂಡ ಇಲ್ಲೇ ಹೋಗ್ತಾರೆ.

ಇನ್ನು ಜಿಲ್ಲೆಯ ಶಾಸಕರುಗಳು ಹಾಗೂ ಜಿಲ್ಲೆಗೆ ಆಗಿಂದಾಗ್ಗೆ ಪ್ರವಾಸಿ ಗರಂತೆ ಬಂದು ಹೋಗುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಯಾರಿಗೂ ಕೂಡ ಈ ಜನರ ನರಕ ಯಾತನೆ ಕಾಣಿಸುತ್ತಿಲ್ಲ ಏಕೆ...? ಇದು ಇಲ್ಲಿನ ಸಾರ್ವಜನಿಕರನೇಕರ ಪ್ರಶ್ನೆ.

ಸರ್ವೆ ನಂಬರ್ ೧/೧ ಕ್ಕೆ ಸೇರಿದ ದಟ್ಟಾರಣ್ಯದಂತಿದ್ದ ಪೈಸಾರಿ ಜಾಗದಲ್ಲಿ ಸರಿ ಸುಮಾರು ೮೦ ಕ್ಕೂ ಹೆಚ್ಚಿನ ಮಂದಿ ೨೦೦೫ ರ ಈಚೆಗೆ ನಿವೇಶನಕ್ಕಾಗಿ ಮುಗಿ ಬಿದ್ದು ಪ್ಲಾಸ್ಟಿಕ್ ಹೊದಿಕೆಗಳನ್ನು ಹಾಕಿಕೊಂಡು ಅನೇಕ ವರ್ಷಗಳ ಕಾಲ ವಾಸವಿದ್ದರು.

ಬಳಿಕ ನೈಜ ಫಲಾನುಭವಿಗಳನ್ನು ಗುರುತಿಸಿದ ಸ್ಥಳೀಯ ಪಂಚಾಯಿತಿ ಆದ್ಯತೆಯಾನುಸಾರ ಬಡತನ ರೇಖೆಯ ಕೆಳಗಿನ ವಸತಿ ವಂಚಿತರನ್ನು ಗುರುತಿಸಿ ಉಳಿದವರನ್ನು ಆ ಪೈಸಾರಿ ಜಾಗದಿಂದ ಮರಳಿಸಿತ್ತು. ಇಲ್ಲಿ ವಾಸವಿದ್ದ ಮಂದಿ ವಾಹನದಟ್ಟಣೆಯ ರಾಷ್ಟಿçÃಯ ಹೆದ್ದಾರಿಯನ್ನು ದಾಟಿ ದೂರದಿಂದ ಕುಡಿವ ನೀರನ್ನು ಸಂಗ್ರಹಿಸಿ ತರುತ್ತಿದ್ದರು.

ಕೊನೆಗೆ ಮಾನವೀಯತೆ ಮಿಡಿದ ಪಂಚಾಯಿತಿ ಅಲ್ಲಿನ ಸೂರು ವಾಸಿಗಳಿಗೆ ಹೆದ್ದಾರಿಯ ಅಂಚಿನಲ್ಲಿ ತಾತ್ಕಾಲಿಕವಾಗಿ ಕುಡಿಯುವ ನೀರಿನ ನಳವೊಂದನ್ನು ಅಳವಡಿಸಿತ್ತು.

ಇದೀಗ ಇಲ್ಲಿ ವಾಸವಿರುವ ಮಂದಿಗೆ ವ್ಯವಸ್ಥಿತವಾಗಿ ನಿವೇಶನ ಹಂಚಿಕೆ ಮಾಡುವ ಉದ್ದೇಶದಿಂದ ಅನೇಕ ವರ್ಷಗಳಿಂದ ಅರಣ್ಯ ಇಲಾಖೆಗೆ ಒತ್ತಡ ತಂದು ಪತ್ರ ವ್ಯವಹಾರ ಮಾಡಿದ ಪರಿಣಾಮ ಕಳೆದ ವರ್ಷದ ಹಿಂದೆ ಇಲ್ಲಿದ್ದಂತಹ ೨೦೦ ಕ್ಕೂ ಹೆಚ್ಚಿನ ಮರಗಳನ್ನು ಕಡಿದು ಅರಣ್ಯ ಇಲಾಖೆಯವರು ಸಾಗಿಸಿದ್ದಾರೆ. ಆದರೆ ಆಳ ಹಾಗೂ ಅಗಲಕ್ಕೆ ಹರಡಿರುವ ಮರದ ಬೇರುಗಳನ್ನು ತೆಗೆದು ಸಮತಟ್ಟು ಮಾಡಿ ನಿವೇಶನ ಸೂಕ್ತ ರಸ್ತೆ ಹಾಗೂ ಚರಂಡಿ ನಿರ್ಮಿಸಿ ನಿವೇಶನ ಹಂಚಿಕೆ ಮಾಡುವಲ್ಲಿ ಪಂಚಾಯಿತಿ ಆಡಳಿತ ಇನ್ನೂ ಕೂಡ ಆಮೆ ವೇಗ ಅನುಸರಿಸುತ್ತಲೇ ಇದೆ. ಹಾಗಾಗಿ ಇಲ್ಲಿನ ಮಂದಿಗೆ ಕುಡಿಯುವ ನೀರಿನ ಸೌಲಭ್ಯವೊಂದನ್ನು ಹೊರತುಪಡಿಸಿ ಸಮರ್ಪಕವಾದ ಶೌಚಾಲಯ ವನ್ನಾಗಲಿ, ಸೂಕ್ತವಾದ ಚರಂಡಿ ಹಾಗೂ ರಸ್ತೆಯನ್ನಾಗಲೀ ಮಾಡಿಲ್ಲ. ಶೌಚಾಲಯಕ್ಕೆ ಇಲ್ಲಿನ ಮಹಿಳೆಯರು ಹಾಗು ಮಕ್ಕಳು ಪಡುವ ಪಾಡು ಹೇಳ ತೀರದ್ದು. ಕೂಡಲೇ ಗ್ರಾಮ ಪಂಚಾಯಿತಿ ಆಡಳಿತ ಸರ್ವೆ ನಂಬರ್ ೧/೧ ರ ಜಾಗದಲ್ಲಿ ಹಕ್ಕುಪತ್ರ ಪಡೆದಂತಹ ನೈಜ ಫಲಾನುಭವಿಗಳಿಗೆ ತುರ್ತಾಗಿ ನಿವೇಶನಗಳನ್ನು ಗುರುತಿಸಿ ಕೊಡಬೇಕಿದೆ. ಜೊತೆಗೆ ಮನೆಗಳನ್ನು ಕಟ್ಟಲು ಸರ್ಕಾರದಿಂದ ದೊರಕುವ ಆರ್ಥಿಕ ನೆರವನ್ನು ಕೊಡಿಸಿಕೊಡಬೇಕಿದೆ.

ಈ ಬಗ್ಗೆ ಗ್ರಾಮ ಪಂಚಾಯಿತಿ ಪಿಡಿಓ ಶ್ಯಾಂಸುAದರ್ ಅವರ ಬಳಿ " ಶಕ್ತಿ " ಮಾಹಿತಿ ಬಯಸಿದಾಗ, ಬಸವನಹಳ್ಳಿಯ ಸರ್ವೆ ನಂಬರ್ ೧/೧ ರಲ್ಲಿ ಒಟ್ಟು ನಾಲ್ಕು ಎಕರೆ ಜಾಗವನ್ನು ೫೭ ನಿರ್ಗತಿಕ ಕುಟುಂಬಗಳಿಗೆ ೩೦-೪೦ ಅಳತೆಯ ನಿವೇಶನಗಳನ್ನು ನೀಡಲು ಬಳಸಿ ಕೊಳ್ಳಲಾಗಿದೆ. ಅವರು ಈಗ ವಾಸ ವಿರುವ ಜಾಗವನ್ನು ಶೀಘ್ರದಲ್ಲಿಯೇ ಸಮತಟ್ಟು ಮಾಡಲಾಗುತ್ತದೆ.

ಹಾಗೆಯೇ ೫೦ ಸೆಂಟು ಜಾಗದಲ್ಲಿ ಪಂಚಾಯಿತಿಯ ತ್ಯಾಜ್ಯ ವಿಲೇವಾರಿ ಘಟಕ ತೆರಯಲಾಗಿದೆ. ಮತ್ತೆ ಉಳಿದ ೫೦ ಸೆಂಟು ಜಾಗವನ್ನು ಪರಿಶಿಷ್ಟ ವರ್ಗ ಹಾಗೂ ಪಂಗಡಗಳ ಜನರಿಗೆ ಸ್ಮಶಾನಕ್ಕೆ ಮೀಸಲಿಡಲಾಗಿದೆ ಎಂದರು.

ಇದೇ ಸರ್ವೇ ನಂಬರ್‌ಗೆ ಸೇರಿದ ಮತ್ತೆ ೪ ಎಕರೆ ಜಾಗವನ್ನು ಸಾರಿಗೆ ಸಂಸ್ಥೆಯ ಬಸ್ ಡಿಪೋಗೆ ಮೀಸಲಿಡಲಾಗಿದೆ. ೫೦ ಸೆಂಟು ಜಾಗವನ್ನು ಕುಶಾಲನಗರ ತಾಲೂಕು ನ್ಯಾಯಾಂಗ ಇಲಾಖೆಯ ನ್ಯಾಯಾಧೀಶರ ವಸತಿ ನಿಲಯಕ್ಕೆ ಮೀಸಲಿಡಲಾಗಿದೆ ಎಂದು ಪಿಡಿಒ ಶ್ಯಾಂ ವಿವರಿಸಿದರು.

- ಕೆ.ಎಸ್. ಮೂರ್ತಿ