ಕೂಡಿಗೆ, ಅ. ೧೫: ಹೆಬ್ಬಾಲೆ ಗ್ರಾ.ಪಂ.ನ ೨೦೧೯-೨೦ ಮತ್ತು ೨೧ ಸಾಲಿನ ಜಮಾಬಂದಿ ಕಾರ್ಯಕ್ರಮ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎಸ್. ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

೨೦೧೯-೨೦ಸಾಲಿನ ರಾಷ್ಟಿçÃಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನಡೆದ ಕಾಮಗಾರಿಗಳ ಸವಿಸ್ತಾರ ಮಾಹಿತಿ ನೀಡಿದರು. ನಂತರ ೨೦೨೦-೨೧ ಸಾಲಿನಲ್ಲಿ ೧೪ ಮತ್ತು ೧೫ನೇ ಹಣಕಾಸು ಯೋಜನೆಯಲ್ಲಿ ಕ್ರಿಯಾ ಯೋಜನೆ ಬಗ್ಗೆ ಗ್ರಾಮಸ್ಥರ ಅನುಮೋದನೆಯ ಅನುಗುಣವಾಗಿ ಜಮಾಬಂದಿ ಕಾರ್ಯಕ್ರಮ ನಡೆಯಿತು. ನೋಡಲ್ ಅಧಿಕಾರಿಯಾಗಿ ಪಶುಪಾಲನೆ ಇಲಾಖೆಯ ಅಧಿಕಾರಿ ನಾಗರಾಜ್ ಭಾಗವಹಿಸಿದ್ದರು. ಸಭೆಯಲ್ಲಿ ಉಪಾಧ್ಯಕ್ಷೆ ಅರುಣ ಕುಮಾರಿ ಅಭಿವೃದ್ಧಿ ಅಧಿಕಾರಿ ರಾಕೇಶ್, ಸದಸ್ಯ ರಾದ ಶಿವನಂಜಪ್ಪ, ನಾರಾಯಣ್, ಹೆಚ್.ವಿ. ಚಂದ್ರ ಶೇಖರ್, ಜೋಗಿ, ತನುಕುಮಾರ್, ರತ್ನಮ್ಮ, ಪರಮೇಶ್ವರ, ಮಹದೇವ, ಕವಿತ, ಪುಟ್ಟಲಕ್ಷಿö್ಮ, ಲತಾ, ಪವಿತ್ರ, ಯಶಸ್ವಿ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.