ಮಡಿಕೇರಿ, ಅ. ೧೫: ಕೊಡಗು ಜಿಲ್ಲಾ ಪೊಲೀಸ್ ಘಟಕದಲ್ಲಿ ೨೦೨೧-೨೨ನೇ ಸಾಲಿನಲ್ಲಿ ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಿರುವ (ಪುರುಷ ಮತ್ತು ಮಹಿಳೆ) ಅರ್ಹ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯು ತಾ. ೨೪ ರಂದು ನಗರದ ವಿವಿಧ ಶಾಲೆ/ ಕಾಲೇಜುಗಳಲ್ಲಿ ನಡೆಸಲಾಗುತ್ತಿದ್ದು, ಅಭ್ಯರ್ಥಿಗಳು ಪ್ರವೇಶ ಪತ್ರ, ಹಾಜರಾತಿ ಪತ್ರವನ್ನು ಪೊಲೀಸ್ ಅಂತರ್‌ಜಾಲ ತಿತಿತಿ.ಞsಠಿ.gov.iಟಿ ಪಡೆದು ಅದರಲ್ಲಿ ನಿಗದಿಪಡಿಸಿರುವ ಭಾವಚಿತ್ರವಿರುವ ದಾಖಲಾತಿಯೊಂದಿಗೆ ಪರೀಕ್ಷೆಗೆ ಹಾಜರಾಗುವಂತೆ ಪೊಲೀಸ್ ಅಧೀಕ್ಷಕರು ಮತ್ತು ಪೊಲೀಸ್ ನೇಮಕಾತಿ ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.