ಮಡಿಕೇರಿ, ಅ. ೧೫: ಅಮೃತ ಧಾರೆ ಯೋಜನೆಯಡಿ ಜಿಲ್ಲೆಯಲ್ಲಿ ೧೨ ಜರ್ಸಿ ತಳಿಯ ಹಾಗೂ ೩ ಹಳ್ಳಿಕಾರ್ ತಳಿಯ ಜಾನುವಾರುಗಳ ಗಂಡು ಕರುಗಳನ್ನು ಅವುಗಳ ವಯಸ್ಸಿನ ಆಧಾರದ ಮೇರೆಗೆ ಇಲಾಖಾ ನಿಗದಿಪಡಿಸಿದ ಬೆಲೆಯಂತೆ ರೈತರಿಗೆ ವಿತರಿಸಲಾಗುವುದು. ೧ ವರ್ಷದಿಂದ ೪ ವರ್ಷ ಮೇಲ್ಪಟ್ಟ ೧೨ ಜರ್ಸಿ ಗಂಡು ಕರುವಿಗೆ ರೂ. ೧೦,೭೦೦ ರಿಂದ ೧೬,೬೪೦ ಮತ್ತು ೪ ವರ್ಷ ಮೇಲ್ಪಟ್ಟು ೫ ೧/೨ ವರ್ಷದೊಳಗಿನ ೩ ಹಳ್ಳಿಕಾರ್ ಗಂಡು ಕರುಗಳಿಗೆ ರೂ. ೪೦,೦೦೦ ಆಗಿದೆ. ಆಸಕ್ತ ರೈತರು ತಮ್ಮ ತಾಲೂಕಿನ ಪಶು ಆಸ್ಪತ್ರೆಯ ತಾಲೂಕು ಸಹಾಯಕ ನಿರ್ದೇಶಕರನ್ನು ಭೇಟಿ ಮಾಡಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವೆಗಳ ಉಪ ನಿರ್ದೇಶಕ ಸುರೇಶ್ ಭಟ್ ಅವರು ತಿಳಿಸಿದ್ದಾರೆ.