ಚೆಟ್ಟಳ್ಳಿ, ಅ. ೧೦: ಚೆಟ್ಟಳ್ಳಿಯ ಹಿಂದೂ ರುದ್ರ ಭೂಮಿಯಲ್ಲಿ ಚಿತಾಗಾರದ ಸಿಲಿಕಾನ್ ಚೇಂಬರ್ ಅಳವಡಿಕೆ ಮಾಡಲು ಹಿಂದೂ ಬಾಂಧವರು ಮುಂದಾಗಿದ್ದು ಸ್ಥಳೀಯ ಹಿಂದೂ ಭಾಂದವರು ಕಂಡಕರೆ ರಸ್ತೆ ಬದಿಯ ಹಿಂದೂರುದ್ರ ಭೂಮಿಯ ಸುತ್ತಲಿನ ಕಾಡು ಕಡಿದು ಸ್ವಚ್ಛತಾ ಕಾರ್ಯವನ್ನು ನೆರವೇರಿಸಿದರು.

ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುವ ಬಡಕೂಲಿ ಕಾರ್ಮಿಕರು, ಭೂರಹಿತ ಕುಟುಂಬದವರು ಮೃತಪಟ್ಟರೆ ಅಂತ್ಯಕ್ರಿಯೆ ನೆರವೇರಿಸಲು ಚೆಟ್ಟಳ್ಳಿಯ ಹಿಂದೂ ರುದ್ರ ಭೂಮಿಯಲ್ಲಿ ಯಾವುದೇ ಸೌಕರ್ಯವಿರುವುದಿಲ್ಲ. ಆದ್ದರಿಂದ ಸಿಲಿಕಾನ್ ಚೇಂಬರ್ ಅಳವಡಿಕೆಗೆ ಸ್ಥಳೀಯ ಹಿಂದೂ ಬಾಂಧವರು ತೀರ್ಮಾನಿಸಿರುವ ಬಗ್ಗೆ ಪ್ರವೀಣ್ ಕುಮಾರ್ ಹಾಗೂ ರವಿಚಂದ್ರನ್ ತಿಳಿಸಿದ್ದಾರೆ. ಸುಮಾರು ರೂ. ೬ ರಿಂದ ೭ ಲಕ್ಷ ವೆಚ್ಚವಾಗಲಿದೆ. ಇದಕ್ಕೆ ಸಂಬAಧಿಸಿದAತೆ ಹಲವು ಸಂಘ ಸಂಸ್ಥೆಗಳು ಹಿಂದೂ ಭಾಂದವರು ಕೈಜೋಡಿಸಿದ್ದು ಸಿಲಿಕಾನ್ ಚೇಂಬರ್ ಅಳವಡಿಕೆ ಮಾಡಲು ಸಹಕರಿಸುವಂತೆ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಲಾಗಿದೆ.

ಹಿಂದೂ ರುದ್ರಭೂಮಿ ಕಾಮಗಾರಿ ನಿಧಿ ಎಂಬ ವಾಟ್ಸಾö್ಯಪ್ ಗ್ರೂಪ್‌ಗಳನ್ನು ಮಾಡಿ ಸ್ಥಳೀಯ ಹಿಂದೂ ಬಾಂಧವರನ್ನು ಈ ಗ್ರೂಪಿಗೆ ಸೇರಿಸುವ ಮೂಲಕ ಎಲ್ಲರೂ ಕೈಜೋಡಿಸುವಂತೆ ಕೋರಲಾಗುತ್ತಿದೆ. ಈಗಾಗಲೇ ದಾನಿಗಳು ಹಣ ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಇದಕ್ಕೆ ಸಂಬAಧಿಸಿದ ಸಮಿತಿಯನ್ನು ಆಯ್ಕೆ ಮಾಡುವ ಮೂಲಕ ಚೆಟ್ಟಳ್ಳಿ ಹಿಂದೂ ರುದ್ರಭೂಮಿಯಲ್ಲಿ ಚಿತಾಗಾರದ ಸಿಲಿಕಾನ್ ಚೇಂಬರ್ ಅಳವಡಿಕೆಯಾಗಲಿದೆ. ದಾನಿಗಳ ಸಹಕಾರಕ್ಕೆ ಪ್ರವೀಣ್‌ಕುಮಾರ್ - ೮೭೬೨೫೫೧೩೮೫, ರವಿಚಂದ್ರ - ೯೪೪೯೨೩೯೩೦೫ ಇವರುಗಳನ್ನು ಸಂಪರ್ಕಿಸಬಹುದಾಗಿದೆ.

-ಕರುಣ್‌ಕಾಳಯ್ಯ