ಮಡಿಕೇರಿ, ಅ. ೧೦: ನಗರದ ಶ್ರೀ ಮುತ್ತಪ್ಪ ದೇವಾಲಯ ಆವರಣದಲ್ಲಿ ಸನ್ಮಾನ ಕಾರ್ಯಕ್ರಮ ಹಾಗೂ ದೇವಾಲಯದ ಅಂಗಡಿ ಮಳಿಗೆ ಉದ್ಘಾಟನೆ ನೆರವೇರಿತು. ಉದ್ಘಾಟನೆಯನ್ನು ಸ್ಥಳದಾನಿಗಳಾದ ಎಂ.ಸಿ. ಕುಲದೀಪ್ ಮತ್ತು ಸಹೋದರರು ನೆರವೇರಿಸಿದರು. ಅತಿಥಿಯಾಗಿ ಪಾಲ್ಗೊಂಡಿದ್ದ ಅಯ್ಯಪ್ಪ ದೇವಾಲಯದ ಸ್ಥಾಪಕಾಧ್ಯಕ್ಷರಾದ ಡಾ. ಎಂ.ಜಿ. ಪಾಟ್ಕರ್ ಅವರು ಮಾತನಾಡಿ, ಹಿಂದೂ ಸಮಾಜವು ಧರ್ಮದ ವಿಚಾರದಲ್ಲಿ ಅಸಡ್ಡೆ ತೋರದೆ ಸದಾ ಜಾಗೃತವಾಗಿರಬೇಕೆಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಸುಧೀರ್ ಮಾತನಾಡಿ, ಮಾನವೀಯತೆ ಹಾಗೂ ಉಪಕಾರ ಮನೋಭಾವವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದರು. ವೇದಿಕೆಯಲ್ಲಿ ದೇವಾಲಯದ ಸಲಹೆಗಾರ ವಾಸುದೇವ್ ಉಪಸ್ಥಿತರಿದ್ದು ಮಾತನಾಡಿದರು.

ಇದೇ ಸಂದರ್ಭ ಕೊರೊನಾ ಸಂಕಷ್ಟಕಾಲದಲ್ಲಿ ಸಾವನ್ನಪ್ಪಿದವರ ಮೃತದೇಹಗಳ ಅಂತ್ಯಸAಸ್ಕಾರ ನೆರವೇರಿಸಿ ಮಾನವೀಯತೆ ಮೆರೆದ ಭಜರಂಗದಳ ಪ್ರಮುಖ್ ಶಾಂತಿನಿಕೇತನ ಚೇತನ್, ಮುತ್ತಪ್ಪ ದೇವಾಲಯ ಉತ್ಸವ ಸಮಿತಿ ಅಧ್ಯಕ್ಷ ಸುರೇಶ್ ಮುತ್ತಪ್ಪ, ವಿಶ್ವಹಿಂದೂ ಪರಿಷತ್‌ನ ವಿನಯ್ ಇವರುಗಳನ್ನು ಮುತ್ತಪ್ಪ ದೇವಾಲಯ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮುತ್ತಪ್ಪ ದೇವಾಲಯ ಸಮಿತಿಯವರಾಗಿದ್ದು ನಗರಸಭಾ ಸದಸ್ಯರಾಗಿ ಆಯ್ಕೆಯಾದ ಕೆ.ಎಸ್. ರಮೇಶ್, ಅನಿತಾ ಪೂವಯ್ಯ, ಮಹೇಶ್ ಜೈನಿ, ಉಮೇಶ್ ಸುಬ್ರಮಣಿ, ಸವಿತಾ ರಾಕೇಶ್, ಕಲಾವತಿ, ಅಪ್ಪಣ್ಣ, ಎಸ್.ಸಿ ಸತೀಶ್ ಇವರುಗಳಿಗೆ ಅಭಿನಂದನೆ ಸಮರ್ಪಣೆ ನಡೆಯಿತು. ಟಿ.ಕೆ. ಸುಧೀರ್ ಪ್ರಾರ್ಥಿಸಿ, ಶ್ರೀ ಮುತ್ತಪ್ಪ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾರಾಮನ್ ನಿರೂಪಿಸಿ, ಕೆ.ಎಸ್. ರಮೇಶ್ ಸ್ವಾಗತಿಸಿದರು.

ಪ್ರಧಾನ ಕಾರ್ಯದರ್ಶಿ ಕೆ.ವಿ. ಸುಬ್ರಮಣಿ ಪ್ರಾಸ್ತಾವಿಕ ನುಡಿಯಾಡಿದರು. ವಿನೋದ್‌ಕುಮಾರ್ ವಂದಿಸಿದರು.