ಶನಿವಾರಸAತೆ, ಅ. ೧೧: ಸಮೀಪದ ಮಾಲಂಬಿ ಶಾಖೆಯ ಕಣಿವೆ ಬಸವನಹಳ್ಳಿಯ ಸಂಜೀವ ಅವರ ಕಾಫಿ ತೋಟದಲ್ಲಿ ೨ ಶ್ರೀಗಂಧದ ಮರಗಳನ್ನು ಕಡಿದು ೭ ನಾಟಾಗಳಾಗಿಸಿ ವಾಹನದಲ್ಲಿ ಸಾಗಾಣಿಕೆ ಮಾಡಲೆತ್ನಿಸಿದ ಆರೋಪಿಗಳನ್ನು ಬಂಧಿಸಿದ ಅರಣ್ಯಾಧಿಕಾರಿಗಳು ನಾಟಾಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾಸರಗೋಡು ತಾಲೂಕಿನ ಬ್ಯಾಲ ಗ್ರಾಮದ ಕೃತಿಗುರು, ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಶಶಿಕುಮಾರ್, ಕಣಿವೆ ಬಸವನಹಳ್ಳಿ ಗ್ರಾಮದ ಸಂಜು ಬಂಧಿತ ಆರೋಪಿಗಳು. ಶ್ರೀಗಂಧದ ನಾಟಾಗಳನ್ನು ವಶಪಡಿಸಿಕೊಂಡು ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ.
ಕಾರ್ಯಾಚರಣೆಯಲ್ಲಿ ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ, ಉಪ ವಲಯ ಅರಣ್ಯಾಧಿಕಾರಿ ಎಂ.ಜೆ. ಸೂರ್ಯ, ಅರಣ್ಯ ರಕ್ಷಕರಾದ ವೆಂಕಟೇಶ್, ಶಂಕರಗೌಡ ಕುಲಕರ್ಣಿ ಹಾಗೂ ಆರ್‌ಆರ್‌ಟಿ ಸಿಬ್ಬಂದಿ ಪಾಲ್ಗೊಂಡಿದ್ದರು.