ಗೋಣಿಕೊಪ್ಪಲು, ಅ.೧೧: ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಆದಿವಾಸಿಗಳಿಗೆ ಕೂಡಲೇ ಸರ್ಕಾರ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ, ಬುಡಕಟ್ಟು ಕೃಷಿಕರ ಸಂಘ ಹಾಗೂ ಪ್ರಗತಿಪರ ಹೋರಾಟ ಸಮಿತಿಯ ವತಿಯಿಂದ ತಿತಿಮತಿ ಗ್ರಾ.ಪಂ. ಮುಂದೆ ನೂರಾರು ಪ್ರತಿಭಟನಾ ಕಾರರು ಬೃಹತ್ ಪ್ರತಿಭಟನೆ ನಡೆಸಿದರು.
ಸುರಿಯುತ್ತಿರುವ ಮಳೆಯ ನಡುವೆ ಹಕ್ಕುಗಳಿಗಾಗಿ ಒತ್ತಾಯಿಸಿ ದರು. ತಾಲೂಕು ತಹಶೀಲ್ದಾರ್ ಯೋಗಾನಂದ್ ಹಾಗೂ ತಾಲೂಕು ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ ಅವರಿಗೆ ಮನವಿ ಸಲ್ಲಿಸಿದರು.
ಹೋರಾಟದ ನೇತೃತ್ವ ವಹಿಸಿದ್ದ ಜಿ.ಪಂ. ಮಾಜಿ ಸದಸ್ಯೆ ಪಿ.ಆರ್. ಪಂಕಜ ಮಾತನಾಡಿ, ಹಾಡಿಗಳಲ್ಲಿ ನೈಜ ಫಲಾನುಭವಿಗಳಿಗೆ ಮಳೆಗಾಲಕ್ಕೆ ಬೇಕಾದ ಟಾರ್ಪಲ್ ಗಳನ್ನು ನೀಡದೆ ತಮಗೆ ಇಷ್ಟ ಬಂದವರಿಗೆ ಪಂಚಾಯಿತಿಯು ಇಲಾಖೆಯಿಂದ ನೀಡುವ ಟಾರ್ಪಲ್‌ಗಳನ್ನು ವಿತರಿಸಿದೆ. ಇದರಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಆರೋಪಿಸಿ ದರು. ಅಲ್ಲದೆ ಕ್ಷೇತ್ರದ ಶಾಸಕರು ೬೦೦ಕ್ಕೂ ಅಧಿಕ ಮನೆಗಳನ್ನು ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ.
ಈ ಯೋಜನೆ ವಿವರವನ್ನು ಸಾರ್ವಜನಿಕವಾಗಿ ಪ್ರಕಟಿಸುವಂತೆ ಒತ್ತಾಯಿಸಿದರು. ಐ.ಟಿ.ಡಿ.ಪಿ. ಇಲಾಖೆ ವತಿಯಿಂದ ಆದ ಕಾಮಗಾರಿ ಇನ್ನೂ ಕೂಡ ಅನುಷ್ಟಾನವಾಗುತ್ತಿಲ್ಲ. ಪಂಚಾಯಿತಿ ವ್ಯಾಪ್ತಿಯ ಬೊಂಬು ಕಾಡು ಹಾಡಿಯ ೨೦ ಲಕ್ಷದ ರಸ್ತೆ ಕಾಮಗಾರಿ ನಡೆದಿಲ್ಲ. ರೇಷ್ಮೆ ಹಡ್ಲುಕಿರು ಸೇತುವೆ ಎರಡು ಕಾಮಗಾರಿಯ ಒಟ್ಟು ವೆಚ್ಚ ೧೫ ಲಕ್ಷ ಮಂಜೂರಾಗಿದ್ದರೂ ಕಾಮಗಾರಿ ನೆನೆಗುದಿಯಲ್ಲಿದೆ. ಚೀನಿಹಡ್ಲು ಹಾಡಿ, ಬೊಂಬು ಕಾಡು ಹಾಡಿ, ಆಯಿರಸುಳಿ ಹಾಡಿ, ಜಂಗಲಾಡಿ ಹಾಡಿಗಳಿಗೆ ಇನ್ನೂ ಕೂಡ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಕೇವಲ ಭರವಸೆಗಳನ್ನೇ ನೀಡಿ ಸರ್ಕಾರ ಆದಿವಾಸಿ ಹಾಗೂ ದಲಿತರನ್ನು ಕತ್ತಲೆಯಲ್ಲಿಟ್ಟಿದೆ ಎಂದು ಆರೋಪಿಸಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಹೆಚ್.ಇ. ಶಿವಕುಮಾರ್ ಮಾತನಾಡಿ, ಕೇಂದ್ರ ಸರ್ಕಾರದ ಜಲ್‌ಜೀವನ್ ಮಿಷನ್ ಅಡಿಯಲ್ಲಿ ಬರುವ ಕುಡಿಯುವ ನೀರಿಗೆ ದಲಿತರಿಂದ ಪಂಚಾಯಿತಿಯು ಮೀಟರ್ ಅಳವಡಿಕೆ ನೆಪದಲ್ಲಿ ಹಣ ವಸೂಲು ಮಾಡುತ್ತಿದೆ. ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರು ಹಣ ನೀಡಲು ತಯಾರಿಲ್ಲ. ಪಂಚಾಯಿತಿಯೆ ವಿಶೇಷ ನಿಧಿಯಿಂದ ಹಣವನ್ನು ಭರಿಸಿಕೊಂಡು ಯೋಜನೆಯ ಪ್ರಯೋಜನವನ್ನು ಬಡವರಿಗೆ ತಲುಪಿಸಬೇಕು. ಹಾಡಿಯ ಹಲವು ಮನೆಗಳಿಗೆ ಟಾರ್ಪಲ್ ವ್ಯವಸ್ಥೆಯಲ್ಲಿ ಆಗಿರುವ ತಾರತಮ್ಯವನ್ನು ಸರಿಪಡಿಸಿ ಕೂಡಲೇ ಅರ್ಹರಿಗೆ ಟಾರ್ಪಲುಗಳು ಅಗತ್ಯವಿರುವ ಕುಟುಂಬಕ್ಕೆ ಶೀಟ್ ಅಥವಾ ಹಂಚು ವಿತರಿಸಬೇಕು ಆರೋಪಿಸಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಹೆಚ್.ಇ. ಶಿವಕುಮಾರ್ ಮಾತನಾಡಿ, ಕೇಂದ್ರ ಸರ್ಕಾರದ ಜಲ್‌ಜೀವನ್ ಮಿಷನ್ ಅಡಿಯಲ್ಲಿ ಬರುವ ಕುಡಿಯುವ ನೀರಿಗೆ ದಲಿತರಿಂದ ಪಂಚಾಯಿತಿಯು ಮೀಟರ್ ಅಳವಡಿಕೆ ನೆಪದಲ್ಲಿ ಹಣ ವಸೂಲು ಮಾಡುತ್ತಿದೆ. ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರು ಹಣ ನೀಡಲು ತಯಾರಿಲ್ಲ. ಪಂಚಾಯಿತಿಯೆ ವಿಶೇಷ ನಿಧಿಯಿಂದ ಹಣವನ್ನು ಭರಿಸಿಕೊಂಡು ಯೋಜನೆಯ ಪ್ರಯೋಜನವನ್ನು ಬಡವರಿಗೆ ತಲುಪಿಸಬೇಕು. ಹಾಡಿಯ ಹಲವು ಮನೆಗಳಿಗೆ ಟಾರ್ಪಲ್ ವ್ಯವಸ್ಥೆಯಲ್ಲಿ ಆಗಿರುವ ತಾರತಮ್ಯವನ್ನು ಸರಿಪಡಿಸಿ ಕೂಡಲೇ ಅರ್ಹರಿಗೆ ಟಾರ್ಪಲುಗಳು ಅಗತ್ಯವಿರುವ ಕುಟುಂಬಕ್ಕೆ ಶೀಟ್ ಅಥವಾ ಹಂಚು ವಿತರಿಸಬೇಕು ಮುಖ್ಯಸ್ಥನ ಹೆಸರಿನಲ್ಲಿ ಆರ್.ಟಿ.ಸಿ. ವಿತರಣೆ ಆಗಲು ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಗ್ರಾ.ಪಂ. ಮತ್ತು ಕಂದಾಯ ಇಲಾಖೆ ವತಿಯಿಂದ ವಿತರಿಸುವ ಜಾತಿ ಪ್ರಮಾಣ ಪತ್ರ ಮತ್ತು ವಯೋವೃದ್ಧರಿಗೆ ಪಿಂಚಣಿ ವ್ಯವಸ್ಥೆ ಸರಿಯಾಗಿ ತಲುಪುತ್ತಿಲ್ಲ. ಗ್ರಾ.ಪಂ. ಉದ್ಯೋಗ ಖಾತ್ರಿ ಯೋಜನೆಯಡಿ ಯಲ್ಲಿಯೂ ಹಲವು ಕಾಮಗಾರಿಯೂ ಬಾಕಿಯಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳ ಬೇಕೆಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ರಜನಿಕಾಂತ್ ಒತ್ತಾಯಿಸಿ ದರು. ಕೂಲಿ ಕಾರ್ಮಿಕರಾಗಿ ಇಲ್ಲಿ ನೆಲೆಸಿರುವ ಅಸ್ಸಾಂ ಮೂಲದವರಿಗೆ ಇಲ್ಲಿನ ಕೆಲವು ತೋಟದ ಮಾಲೀಕರು ಆಧಾರ್‌ಕಾರ್ಡ್ ಪಡಿತರಚೀಟಿ ಇತ್ಯಾದಿಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ತಾಲೂಕು ಆಡಳಿತ ವಿಶೇಷ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹೋರಾಟದ ಪ್ರಮುಖರಾದ ಮಣಿಕುಂಞ, ಸಿದ್ದಪ್ಪ, ಶಾಂತಮ್ಮ, ಶಿವು, ರವೀಣ, ಸೇರಿದಂತೆ ವಿವಿಧ ಮುಖಂಡರು ಭಾಗವಹಿಸಿ ದ್ದರು. ಇಓ ಅಪ್ಪಣ್ಣ, ತಹಶೀಲ್ದಾರ್ ಯೋಗಾನಂದ್, ಪಿಡಿಒ ಮಮತ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು. -ಹೆಚ್.ಕೆ.ಜಗದೀಶ್