ಮಡಿಕೇರಿ, ಅ. ೧೧: ಆಕಸ್ಮಿಕ ಮರಣ ಹೊಂದಿ, ತನ್ನೆರಡು ಸಣ್ಣ ಮಕ್ಕಳು ಹಾಗೂ ಮಡದಿಯನ್ನು ಅಗಲಿದ, ಅತಿಥಿ ಮಣಿ ಎಂದೇ ಮಡಿಕೇರಿಯಲ್ಲಿ ಪರಿಚಿತರಾಗಿದ್ದ ದಿ. ಕೆ.ಕೆ. ಮಣಿ ಅವರ ಕುಟುಂಬಕ್ಕೆ, ಮಡಿಕೇರಿ ನಾಯರ್ ಸಮಾಜದ ಕೆಎನ್‌ಎಸ್‌ಎಸ್ ಕರಯೋಗಮ್ ವತಿಯಿಂದ ಸಂಗ್ರಹಿಸಲಾಗಿದ್ದ ಮೂರೂವರೆ ಲಕ್ಷ ಧನ ಸಹಾಯ ನೀಡಲಾಯಿತು.
ಮಡಿಕೇರಿ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ, ನಡೆದ ಸರಳ ಸಮಾರಂಭದಲ್ಲಿ ಮಡಿಕೇರಿ ಕೆಎನ್‌ಎಸ್‌ಎಸ್ ಕರಯೋಗಮ್ ಅಧ್ಯಕ್ಷ ಕೆ.ಕೆ. ಹರೀಶ್ ಕುಮಾರ್, ಕಾರ್ಯದರ್ಶಿ ಕೆಪಿ. ರಾಜನ್, ಖಜಾಂಚಿ ಪಿ.ಟಿ. ಉತ್ತಮನ್, ವಕೀಲ ಶ್ರೀಧರನ್ ನಾಯರ್ ಹಾಗೂ ಸುಳ್ಯ ಕರಯೋಗಮ್ ಅಧ್ಯಕ್ಷ ಭಾಸ್ಕರನ್ ನಾಯರ್ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.