ಕುಶಾಲನಗರ ಆ ೧೧: ತಾ. ೨೫ ರಂದು ದೆಹಲಿಯಲ್ಲಿ ನಡೆಯಲಿ ರುವ ೬೭ನೇ ಸಾಲಿನ ರಾಷ್ಟಿçÃಯ ಚಲನಚಿತ್ರೋತ್ಸವ ಸಮಾರಂಭದಲ್ಲಿ ಪ್ರಾದೇಶಿಕ ಭಾಷೆಯ ತುಳು ಚಿತ್ರ "ಪಿಂಗಾರ" ಚಿತ್ರ ತಂಡ ಪ್ರಶಸ್ತಿ ಯನ್ನು ತನ್ನ ಮುಡಿಗೇರಿಸಿಕೊಳ್ಳ ಲಿದೆ. ಕೊಡಗು ಜಿಲ್ಲೆಯ ಯುವ ನಟಿ ಸಿಂಚನಾ ಚಂದ್ರಮೋಹನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ತುಳು ಚಿತ್ರ "ಪಿಂಗಾರ" ೨೦೧೯ರ ರಾಷ್ಟಿçÃಯ ಪ್ರಶಸ್ತಿಗೆ ಭಾಜನ ವಾಗಿತ್ತು.

ಚಲನಚಿತ್ರ ಹಾಗೂ ಕಿರುತೆರೆಯ ಖ್ಯಾತ ಯುವ ನಿರ್ದೇಶಕ ಆರ್. ಪ್ರೀತಂ ಶೆಟ್ಟಿ ಅವರ ಕಥೆ ಮತ್ತು ನಿರ್ದೇಶನ ಮತ್ತು ನಿರ್ಮಾಪಕ ಅವಿನಾಶ್ ಶೆಟ್ಟಿ ನೇತೃತ್ವದಲ್ಲಿ ನಿರ್ಮಾಣವಾಗಿರುವ ಪ್ರಾದೇಶಿಕ ತುಳು ಭಾಷೆಯ ಚಿತ್ರದ ಮುಖ್ಯ ಪಾತ್ರದಲ್ಲಿ ನೀಮಾ ರೇ, ಶರಣ್ ಶೆಟ್ಟಿ, ಉಷಾ ಭಂಡಾರಿ, ಗುರು ಹೆಗ್ಡೆ, ಸುನಿಲ್ ನೆಲ್ಲಿಗುಡ್ಡೆ, ಪ್ರಶಾಂತ್, ರಂಜಿತ್ ನಟಿಸಿದ್ದಾರೆ. ಖ್ಯಾತ ಛಾಯಾಗ್ರಾಹಕ ವಿ ಪವನ್ ಕುಮಾರ್ ಛಾಯಾಗ್ರಹಣ ಮಾಡಿ ದ್ದಾರೆ. ಚಿತ್ರದಲ್ಲಿ ಕುಶಾಲನಗರದ ಸಿಂಚನಾ ಚಂದ್ರಮೋಹನ್ ವಸ್ತçವಿನ್ಯಾಸ ಮತ್ತು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇನ್ನೂ ತೆರೆ ಕಾಣದ ಈ ಚಿತ್ರ ದಕ್ಷಿಣಕನ್ನಡಲ್ಲಿ ಪ್ರಚಲಿತದಲ್ಲಿರುವ ಭೂತಾರಾಧನೆ ಸುತ್ತ ಹೆಣೆಯ ಲಾಗಿದೆ. ಬೆಂಗಳೂರು ೨೦೧೯ ರ ಅಂತರರಾಷ್ಟಿçÃಯ ಚಲನ ಚಿತ್ರೋತ್ಸವ ದಲ್ಲಿ ‘‘ಪಿಂಗಾರ’’ ಪ್ರದರ್ಶನ ಗೊಂಡಿದ್ದು, ಕನ್ನಡ ಭಾಷೆ ಚಲನಚಿತ್ರ ಸ್ಪರ್ಧೆಯಲ್ಲಿ ಅತ್ಯುತ್ತಮ ಏಷಿಯನ್ ಚಲನಚಿತ್ರ ಪ್ರಶಸ್ತಿ ಗಳಿಸಿತ್ತು. ೨೦೨೦ ರಲ್ಲಿ ಚೆನ್ನೆöÊ, ರಾಜಸ್ತಾನ ಮುಂತಾದ ಕಡೆ ಅಂತರ ರಾಷ್ಟಿçÃಯ ಚಲನಚಿತ್ರ ಉತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು. ಇದೀಗ ೨೦೧೯ ರ ರಾಷ್ಟಿçÃಯ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದು ತಾ. ೨೫ ರಂದು ದೆಹಲಿಯ ವಿಜ್ಞಾನ ಭವನ ದಲ್ಲಿ ನಡೆಯಲಿರುವ ಸಮಾರಂಭ ದಲ್ಲಿ ಉಪರಾಷ್ಟçಪತಿ ವೆಂಕಯ್ಯನಾಯ್ಡು ಅವರು ಪ್ರಶಸ್ತಿ ಪ್ರದಾನ ಮಾಡಲಿ ದ್ದಾರೆ ಎಂದು ಚಲನಚಿತ್ರೋತ್ಸವ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.