ವೀರಾಜಪೇಟೆ, ಅ. ೧೧: ವೀರಾಜಪೇಟೆ ತಾಲೂಕಿನ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ವಿಭಾಗದ ಒಟ್ಟು ೩೮೩ ಶಿಕ್ಷಕರಿಗೆ ಡಿ.ಎಸ್.ಇ.ಆರ್.ಟಿ ಮತ್ತು ಸ್ಟಿರ್ (ಎಸ್‌ಟಿಐಆರ್) ಸಂಸ್ಥೆಯ ವತಿಯಿಂದ ಸಮಾಲೋಚನಾ ಸಭೆ ಆನ್ ಲೈನ್ ಮೂಲಕ ನಡೆಸಲಾಯಿತು. ಕೋವಿಡ್-೧೯ ರ ಹಿನೆÀ್ನಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಪುನರ್ ಸಂಪರ್ಕ ಬೆಳೆಸಿ ಅವರಲ್ಲಿ ರುವ ಭಯವನ್ನು ಹೋಗಲಾಡಿಸುವ ಮುಖ್ಯ ಉದ್ದೇಶದಿಂದ ಈ ಸಮಾಲೋಚನಾ ಸಭೆಯನ್ನು ನಡೆಸಲಾಗಿದ್ದು, ಒಂದೇ ದಿನ ವಿವಿಧ ಸಮಯ ಗಳಲ್ಲಿ ಶಿಕ್ಷಕರು ಗೂಗಲ್ ಮೀಟ್ ಮೂಲಕ ೧೪ ಕ್ಲಸ್ಟರ್‌ಗಳಲ್ಲಿ ಸಭೆಗೆ ಹಾಜರಾಗಿ ಕಲಿಕಾ ಸುಧಾರಣೆಗೆ ಒತ್ತು ನೀಡಿ ಮುಂದೆ ಕಾರ್ಯಗತಗೊಳಿಸ ಬೇಕಾದ ಕ್ರಿಯಾ ಯೋಜನೆಗಳ ಬಗ್ಗೆ ಚರ್ಚಿಸಿದರು. ಮಾತನಾಡಿದ ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಅವರು ಕೋವಿಡ್-೧೯ ರ ಹಿನೆÀ್ನಲೆಯಲ್ಲಿ ಮಕ್ಕಳ ಭಾವನಾತ್ಮಕ ಯೋಗ ಕ್ಷೇಮಕ್ಕೆ ಒತ್ತು ನೀಡಿ ಮಕ್ಕಳು ಮತ್ತೊಮ್ಮೆ ಪರಿಸರಕ್ಕೆ ಹೊಂದಿಕೊಳ್ಳುವAತೆ ಮಾಡುವ ಸದುದ್ದೇಶ ಈ ಸಭೆಯ ಕಾರ್ಯತಂತ್ರಗಳ ಮೂಲಕ ಅನುಷ್ಠಾನಕ್ಕೆ ಬರಲಿದೆ ಎಂದು ತಿಳಿಸಿದರು.
ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವನಜಾಕ್ಷಿ ಅವರು ಮಾತನಾಡಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಯು ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಾಧ್ಯ, ಇಂತಹ ವರ್ಚುವಲ್ ಸಭೆಗಳಿಂದ ಶಿಕ್ಷಕರು ತಮ್ಮಲ್ಲಿ ಆತ್ಮ ವಿಶ್ವಾಸವನ್ನು ಬೆಳೆಸಿಕೊಂಡು ಮಕ್ಕಳಲ್ಲೂ ಆತ್ಮ ವಿಶ್ವಾಸವನ್ನು ತುಂಬಲಿದ್ದಾರೆ ಎಂದರು.