ಚೆಯ್ಯಂಡಾಣೆ,ಅ. ೧೧: ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿ ಆಶ್ರಯದಲ್ಲಿ ಶಾಂತಿ ವಾಹಕರೇ (ಸ) ತಾವು ಅಮರರು ಎಂಬ ಶೀರ್ಷಿಕೆಯಲ್ಲಿ ಬೃಹತ್ ಮೀಲಾದ್ ಸಮಾವೇಶ ದುಬೈ ದೇರಾದಲ್ಲಿರುವ ಪರ್ಲ್ ಕ್ರೀಕ್ ಹೊmÃೆಲ್ ನಲ್ಲಿ ತಾ. ೧೫ ರಂದು ಶುಕ್ರವಾರ ಸಂಜೆ ೬ ಗಂಟೆಗೆ ನಡೆಯಲಿದೆ. ಪ್ರಮುಖ ಆಧ್ಯಾತ್ಮಿಕ ನಾಯಕ, ಶಿಕ್ಷಣ ತಜ್ಞ ಬದ್ರುಸ್ಸಾದಾತ್ ಸಯ್ಯದ್ ಖಲೀಲುಲ್ ಬುಖಾರಿ ತಂಙಳ್ (ಪ್ರಧಾನ ಕಾರ್ಯದರ್ಶಿ, ಕೇರಳ ಮುಸ್ಲಿಂ ಜಮಾಅತ್) ಅವರು ಪ್ರಾರ್ಥನೆಗೆ ಮುಂದಾಳತ್ವ ವಹಿಸಲಿದ್ದಾರೆ. ಯುವ ವಾಗ್ಮಿ, ಎಸ್ ಎಸ್ ಎಫ್ ಕೊಡಗು ಜಿಲಾಧ್ಯಕ್ಷ ಮೌಲಾನಾ ಶಾಫಿ ಸಅದಿ ಸೋಮವಾರಪೇಟೆ ಮುಖ್ಯ ಭಾಷಣ ಮಾಡಲಿದ್ದಾರೆ.

ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ (ಏSWಂ) ಯುಎಇ ಸಮಿತಿ ಅಧ್ಯಕ್ಷ ಅಬೂಬಕರ್ ಹಾಜಿ ಕೊಟ್ಟಮುಡಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ, ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಕುಂಜಿಲ, ಉದ್ಯಮಿಗಳಾದ ನೆಲ್ಲರ ಗ್ರೂಪ್ ಛೇರ್ಮನ್ ಶಂಸುದ್ದೀನ್ ನೆಲ್ಲರ, ಕೆಸಿಎಫ್ ಯುಎಇ ಅಧ್ಯಕ್ಷರಾದ ಜಲೀಲ್ ನಿಝಾಮಿ ಎಮ್ಮೆಮಾಡು, ಆಬಿದ್ ಕಂಡಕ್ಕರೆ (ಪ್ರಧಾನ ಕಾರ್ಯದರ್ಶಿ, ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ ಸೌದಿ ಅರೇಬಿಯಾ), ಶಾಮ್ ಅಹ್ಮದ್ ನಾಪೋಕ್ಲು, ಮುಝಮ್ಮಿಲ್ ಪಾಲಿಬೆಟ್ಟ, ಝಮೀರ್ ಬೆಂಗಳೂರು ಸೇರಿದಂತೆ ಹಲವಾರು ಉಲಮಾ ಉಮರಾ ನಾಯಕರುಗಳು, ಯುಎಇ ಯಾ ಪ್ರಮುಖ ಉದ್ಯಮಿಗಳು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕೊಡಗಿನ ೪೦೦ರಷ್ಟು ಜನರು ಪಾಲ್ಗೊಳ್ಳಲಿದ್ದು, ಹುಬ್ಬುರ್ರಸೂಲ್ ಭಾಷಣ, ಪ್ರಾರ್ಥನಾ ಸಂಗಮ, ಅಭಿನಂದನಾ ಸಮಾರಂಭ, ಮೌಲೂದ್ ಪಾರಾಯಣ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಯುಎಇ ಯಲ್ಲಿರುವ ಎಲ್ಲಾ ಅನಿವಾಸಿಗಳು ಭಾಗವಹಿಸಿ ಸಹಕರಿಸಬೇಕಾಗಿ ಮೀಲಾದ್ ಸ್ವಾಗತ ಸಮಿತಿ ಛೇರ್ಮನ್ ಉಸ್ಮಾನ್ ಹಾಜಿ ನಾಪೋಕ್ಲು ಹಾಗೂ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮೂರ್ನಾಡು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.