ಸುಂಟಿಕೊಪ್ಪ, ಅ. ೧೧: ಇಲ್ಲಿಗೆ ಸಮೀಪದ ಕೊಡಗರಹಳ್ಳಿಯ ಬಿ.ಟಿ.ನರೇಂದ್ರ ಭಟ್ ಎಂಬವರ ಮನೆಯ ಹಿಂಬದಿಯ ಹಿತ್ತಲಿನಲ್ಲಿ ಇದ್ದ ಐದು ಅಡಿ ಉದ್ದದ ನಾಗರ ಹಾವನ್ನು ಏಳನೇ ಹೊಸಕೋಟೆಯ ಉರಗ ರಕ್ಷಕ ಸ್ನೇಕ್ ಶಾಜಿ ಸಂರಕ್ಷಿಸಿ ಅರಣ್ಯಾಧಿಕಾರಿ ಅನಿಲ್ ಡಿಸೋಜಾ ನೇತೃತ್ವದಲ್ಲಿ ಅತ್ತೂರು ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.
ಹಾವುಗಳು ಯಾವುದೇ ಜಾತಿಯದ್ದಾಗಿರಲೀ, ಎಂತಹ ಸ್ವರೂಪದ್ದೇ ಆಗಿರಲೀ, ಕೊಲ್ಲಲು ಹೋಗದಿರಿ. ಅವುಗಳನ್ನು ರಕ್ಷಿಸಿ ಎಂದು ಸಾರ್ವಜನಿಕರಿಗೆ ಕರೆಕೊಟ್ಟಿರುವ ಸ್ನೇಕ್ ಶಾಜಿ, ಹಾವುಗಳನ್ನು ಕಂಡಾಗ ಮನುಷ್ಯರಾದ ನಮಗೆ ಹೇಗೆ ಭಯ ಕಾಡುತ್ತದೆಯೋ ಅದಕ್ಕಿಂತಲೂ ಹೆಚ್ಚಾಗಿ ನಮ್ಮನ್ನು ಕಂಡರೆ ಆ ಹಾವುಗಳು ಕೂಡ ಹೆದರಿ ಅಡಗುತ್ತವೆ. ಹಿಡಿದು ರಕ್ಷಿಸಲಾಗುವುದೆಂದು ಹೇಳಿದರು. ಹಾವನ್ನು ಕಂಡರೆ ಕರೆ ಮಾಡಿ ವಿಷಯ ತಿಳಿಸಿದರೆ, ಹಾವನ್ನು ಇಲ್ಲಿಯ ತನಕ ೪ ಸಾವಿರಕ್ಕಿಂತಲೂ ಹೆಚ್ಚಿನ ಹಾವನ್ನು ಹಿಡಿದು ರಕ್ಷಣೆ ಮಾಡಿ ಅವುಗಳ ಆವಾಸ ಸ್ಥಾನಕ್ಕೆ ಮರಳಿಸಿರುವದಾಗಿ ತಿಳಿಸಿದರು. ಶಾಜಿ. ಅವರ ಸಂಖ್ಯೆ ೯೪೪೮೭೯೨೨೬೧.