ಲಖೀಂಪುರ್ ಖೇರಿ ಹಿಂಸಾಚಾರ : ಆಶಿಶ್ ಮಿಶ್ರಾಗೆ ರಿಮಾಂಡ್

ಲಖನೌ, ಅ.೧೧: ಲಖೀಂಪುರ್ ಖೇರಿ ಹಿಂಸಾಚಾರದ ಪ್ರಮುಖ ಆರೋಪಿ ಹಾಗೂ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಷರತ್ತಿನೊಂದಿಗೆ ಮೂರು ದಿನಗಳ ಪೊಲೀಸ್ ರಿಮಾಂಡ್ ಗೆ ಕಳುಹಿಸಲಾಗಿದೆ ಎಂದು ಪ್ರಾಸಿಕ್ಯೂಷನ್ ವಕೀಲ ಎಸ್ ಪಿ ಯಾದವ್ ಸೋಮವಾರ ಹೇಳಿದ್ದಾರೆ. ಶನಿವಾರ ತಡರಾತ್ರಿ ಆಶಿಶ್ ಮಿಶ್ರಾ ಅವರನ್ನು ಬಂಧಿಸಿದ ನಂತರ ಸ್ಥಳೀಯ ನ್ಯಾಯಾಲಯವೊಂದು ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇಂದು ಆಶಿಶ್ ಪೋಲಿಸ್ ಕಸ್ಟಡಿಗಾಗಿ ರಿಮಾಂಡ್ ಅರ್ಜಿಯ ವಿಚಾರಣೆ ನಡೆಯಿತು. ಲಖೀಂಪುರ್ ಖೇರ್ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರ ಹತ್ಯೆಗೆ ಸಂಬAಧಿಸಿದAತೆ ಶನಿವಾರ ಸುಮಾರು ೧೨ ಗಂಟೆಗಳ ಕಾಲ ಆಶಿಶ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಲಖೀಂಪುರ್ ಖೇರಿಯ ಅಪರಾಧ ವಿಭಾಗದ ಕಚೇರಿಯಲ್ಲಿ ವೈದ್ಯಕೀಯ ತಂಡವೊAದು ಆಶಿಶ್ ಮಿಶ್ರಾ ಅವರನ್ನು ಪರೀಕ್ಷಿಸಿದ ನಂತರ ಮ್ಯಾಜಿಸ್ಟೆçÃಟ್ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆತನನ್ನು ಕಸ್ಟಡಿಗೆ ನೀಡಿದೆ ಎಂದು ಪ್ರಾಸಿಕ್ಯೂಷನ್ ವಕೀಲ ಯಾದವ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಇಳಿಕೆ

ಬೆಂಗಳೂರು. ಅ. ೧೧: ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಇಳಿಕೆ ಕಂಡುಬAದಿದೆ. ಕಳೆದ ೨೪ ಗಂಟೆಗಳಲ್ಲಿ ೩೭೩ ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ ೨೯,೮೧,೪೦೦ಕ್ಕೆ ಏರಿಕೆಯಾಗಿದೆ. ೬೧೧ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ಗುಣಮುಖರಾದವರ ಸಂಖ್ಯೆ ೨೯,೩೩,೫೭೦ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸದ್ಯ ೯೯೦೬ ಸಕ್ರಿಯ ಪ್ರಕರಣಗಳಿರುವುದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಇಂದು ಸೋಂಕಿನಿAದ ೧೦ ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟಾರೇ ಮೃತರ ಸಂಖ್ಯೆ ೩೭,೮೯೫ಕ್ಕೆ ಏರಿಕೆಯಾಗಿದೆ. ಸೋಂಕಿನ ಪ್ರಮಾಣ ಶೇಕಡಾ ೦.೪೫ ರಷ್ಟಿದ್ದು, ಮರಣ ಪ್ರಮಾಣ ಶೇ. ೨.೬೮ ರಷ್ಟಿದೆ. ಬೆಂಗಳೂರಿನಲ್ಲಿ ೧೪೬ ಹೊಸ ಪ್ರಕರಣ ಪತ್ತೆಯಾಗಿದ್ದು, ೨೧೦ ಸೋಂಕಿತರು ಗುಣಮುಖರಾಗಿದ್ದಾರೆ. ಐವರು ಸಾವನ್ನಪ್ಪಿದ್ದಾರೆ. ಬಾಗಲಕೋಟೆ, ಚಿಕ್ಕಮಗಳೂರು, ಗದಗ, ಹಾವೇರಿ, ಕಲಬುರಗಿ, ವಿಜಯಪುರ ಮತ್ತು ಯಾದಗಿರಿಯಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ.

ಹುಬ್ಬಳ್ಳಿ ಗಾಂಜಾ ಮಾರಾಟ ಪ್ರಕರಣ: ಇನ್ಸ್ಪೆಕ್ಟರ್ ಸೇರಿ ೭ ಮಂದಿ ಪೊಲೀಸರ ಅಮಾನತು

ಹುಬ್ಬಳ್ಳಿ, ಅ.೧೧: ಪೊಲೀಸರಿಂದಲೇ ಗಾಂಜಾ ಮಾರಾಟ ಮಾಡಿರುವ ಪ್ರಕರಣಕ್ಕೆ ಸಂಬAಧಪಟ್ಟAತೆ ಇನ್ಸ್ಪೆಕ್ಟರ್ ಸೇರಿ ೭ ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ. ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಕಳೆದ ವಾರ ಖಚಿತ ಮಾಹಿತಿ ಮೇರೆಗೆ ನವನಗರ ಠಾಣೆ ಪೊಲೀಸರು ಗಾಂಜಾ ಮಾರಾಟಗಾರನ್ನು ಸೆರೆಹಿಡಿದಿದ್ದರು. ಆದರೆ ನಂತರ ಕೇಸ್ ದಾಖಲಿಸದೇ ಹಣ ಪಡೆದು, ಆರೋಪಿಗಳನ್ನ ಬಿಟ್ಟು ಕಳುಹಿಸಿದ್ದರು. ಜೊತೆಗೆ ಸೀಜ್ ಮಾಡಿದ್ದ ೧ ಕೆಜಿ ಗಾಂಜಾವನ್ನ ಪೊಲೀಸರೇ ಮಾರಾಟ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿತ್ತು. ಹೀಗಾಗಿ ಡಿಸಿಪಿ ನೈತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ಅಂತಿಮವಾಗಿ ನವನಗರ ಠಾಣೆ ಇನ್ಸ್ಪೆಕ್ಟರ್ ವಿಶ್ವನಾಥ ಚೌಗಲೆ, ಎಎಸ್‌ಐ ವಿಕ್ರಮ ಪಾಟೀಲ್ ಸೇರಿದಂತೆ ೭ ಮಂದಿ ಪೊಲೀಸರು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.ಅಮಾನತಿನ ನಂತರ ಇಲಾಖಾ ತನಿಖೆ ಮುಂದುವರೆಯಲಿದೆ. ಗಾಂಜಾ ಎಷ್ಟು ಸೀಜ್ ಆಗಿದೆ, ಹಣ ಎಷ್ಟು ಪಡೆದಿದ್ದಾರೆ ಎನ್ನೋ ಮಾಹಿತಿ ತನಿಖೆಯ ನಂತರ ಗೊತ್ತಾಗಲಿದೆ. ತನಿಖೆಗೆ ತೊಂದರೆಯಾಗಬಾರೆAದು ತಕ್ಷಣ ಅಮಾನತು ಮಾಡಿರೋದಾಗಿ ಡಿಸಿಪಿ ಕೆ.ರಾಮರಾಜನ್ ಮಾಹಿತಿ ನೀಡಿದ್ದಾರೆ.

ಕಣಿವೆಯಲ್ಲಿ ಎನ್‌ಕೌಂಟರ್‌ನಲ್ಲಿ ಐವರು ಯೋಧರು ಹುತಾತ್ಮ!

ಪೂಂಚ್, ಅ. ೧೧ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೋಮವಾರ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ, ಓರ್ವ ಸೇನಾಧಿಕಾರಿ ಮತ್ತು ನಾಲ್ವರು ಸೈನಿಕರು ಹುತಾತ್ಮರಾಗಿದ್ದಾರೆ. ಮೂಲಗಳ ಪ್ರಕಾರ ಸುರಂಕೋಟೆ ಪ್ರದೇಶದಲ್ಲಿ ಭಾರೀ ಗುಂಡಿನ ಚಕಮಕಿ ನಡೆಯುತ್ತಿದ್ದು, ನಾಲ್ಕರಿಂದ ಐದು ಜನ ಶಸ್ತçಸಜ್ಜಿತ ಭಯೋತ್ಪಾದಕರು ಭದ್ರತಾ ಪಡೆಗಳತ್ತ ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ದಾಳಿಯಲ್ಲಿ ಓರ್ವ ಜೂನಿಯರ್ ಕಮಿಷನ್ಡ್ ಅಧಿಕಾರಿ (ಜೆಸಿಒ) ಮತ್ತು ಇತರ ನಾಲ್ಕು ಸೈನಿಕರು ಹುತಾತ್ಮರಾಗಿದ್ದಾರೆ. ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿ ಇನ್ನೂ ಮುಂದುವರೆದಿದೆ. ಕೆಲವು ದಿನಗಳ ಹಿಂದೆ ಗಡಿ ನಿಯಂತ್ರಣ ರೇಖೆಯಿಂದ ಭಾರತದೊಳಕ್ಕೆ ನುಸುಳಿರುವ ಭಾರೀ ಶಸ್ತçಸಜ್ಜಿತ ಭಯೋತ್ಪಾದಕರ ಗುಂಪು, ಚಮರ್ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ. ಕಳೆದ ಕೆಲವು ದಿನಗಳಿಂದ ಕಣಿವೆಯ ಮುಗ್ಧ ನಾಗರಿಕರ ಮೇಲೆ ದಾಳಿ ಮಾಡುತ್ತಿರುವ ಉಗ್ರರು, ಹಲವರನ್ನು ಬಲಿ ಪಡೆದಿದ್ದಾರೆ. ಉಗ್ರರ ಈ ಕೃತ್ಯ ಕಣಿವೆ ಜನರನ್ನು ಕೆರಳಿಸಿದ್ದು, ಹೇಡಿಗಳ ವಿರುದ್ಧ ಸೂಕ್ತ ಕಾರ್ಯಾಚರಣೆಗೆ ಆಗ್ರಹಿಸಿ ಹಲವು ಪ್ರತಿಭಟನೆಗಳು ನಡೆದಿವೆ.

ಚೇತರಿಕೆಯ ಹಾದಿಯಲ್ಲಿ ದೇಶದ ಆರ್ಥಿಕತೆ

ನವದೆಹಲಿ, ಅ. ೧೧: ಹಣಕಾಸು ಸಚಿವಾಲಯದ ಮಾಸಿಕ ಆರ್ಥಿಕ ಪರಾಮರ್ಶೆ ಪ್ರಕಾರ, ಕೋವಿಡ್-೧೯ ಸಾಂಕ್ರಾಮಿಕದಿAದ ನಷ್ಟದಲ್ಲಿದ್ದ ದೇಶದ ಆರ್ಥಿಕತೆಯೂ ಕ್ಷಿಪ್ರ ಲಸಿಕೆ ಅಭಿಯಾನ ಹಾಗೂ ಸುಧಾರಣಾ ಕಾರ್ಯತಂತ್ರದಿAದ ತ್ವರಿತಗತಿಯ ಚೇತರಿಕೆಯ ಹಾದಿಯಲ್ಲಿದೆ. ಕೃಷಿಯಲ್ಲಿ ಸುಸ್ಥಿರ ಮತ್ತು ಆರೋಗ್ಯಕರ ಬೆಳವಣಿಗೆ, ಉತ್ಪಾದನೆ ಮತ್ತು ಉದ್ಯಮದಲ್ಲಿ ತೀವ್ರ ಮರುಕಳಿಸುವಿಕೆ, ಸೇವಾ ಚಟುವಟಿಕೆಗಳ ಪುನರಾರಂಭ ಮತ್ತು ಉತ್ಕೃಷ್ಟ ಆದಾಯವು ಆರ್ಥಿಕತೆಯು ಉತ್ತಮ ಪ್ರಗತಿಯಲ್ಲಿದೆ ಎಂಬುದನ್ನು ಸೂಚಿಸುತ್ತದೆ ಎಂದು ಸೆಪ್ಟೆಂಬರ್ ತಿಂಗಳ ಪರಾಮರ್ಶೆ ಹೇಳಿದೆ. ಆರ್ಥಿಕತೆಯ ಎಲ್ಲಾ ಕ್ಷೇತ್ರಗಳಲ್ಲಿ ಬೆಳವಣಿಗೆ ಗೋಚರಿಸುವುದರೊಂದಿಗೆ ದೇಶ ತ್ವರಿತಗತಿಯ ಚೇತರಿಕೆಯ ಹಾದಿಯಲ್ಲಿದೆ. ಲಸಿಕಾ ಅಭಿಯಾನದ ಹೊಸ ಮೈಲಿಗಲ್ಲುಗಳ ಜೊತೆಗೆ ಇದುವರೆಗೆ ಕೈಗೊಂಡ ಕಾರ್ಯತಂತ್ರದ ಸುಧಾರಣೆಗಳು ಆರ್ಥಿಕತೆ ಕೋವಿಡ್-೧೯ ಅಲೆ ಹೊಡೆತದಿಂದ ಹೊರಬರುವಂತೆ ಮಾಡುವಲ್ಲಿ ಶಕ್ತವಾಗಿದೆ ಎಂದು ಅದರಲ್ಲಿ ತಿಳಿಸಲಾಗಿದೆ. ೨೦೨೧-೨೨ರ ಆರ್ಥಿಕ ವರ್ಷದಲ್ಲಿ ದೇಶದ ಸರಕುಗಳ ರಫ್ತುಗಳು ಸತತ ಆರನೇ ತಿಂಗಳಿಗೆ ೩೦ ಬಿಲಿಯನ್ ಯುಎಸ್ ಡಾಲರ್ ದಾಟಿದ ಕಾರಣ ಬಾಹ್ಯ ವಲಯವು ಭಾರತದ ಬೆಳವಣಿಗೆಯ ಪುನರುಜ್ಜೀವನಕ್ಕೆ ಪ್ರಕಾಶಮಾನವಾದ ನಿರೀಕ್ಷೆಗಳನ್ನು ನೀಡುತ್ತಲೇ ಇದೆ ಎಂದು ಅದು ಹೇಳಿದೆ. ಸೆಪ್ಟೆಂಬರ್‌ನಲ್ಲಿ ಸರಕುಗಳ ವ್ಯಾಪಾರ ಕೊರತೆಯೂ ಏರಿಕೆಯಾಗುತ್ತಿದ್ದು, ದೇಶದಲ್ಲಿ ಬಳಕೆ ಮತ್ತು ಹೂಡಿಕೆ ಬೇಡಿಕೆ ಸುಧಾರಿಸಿಕೊಳ್ಳುವುದಕ್ಕೆ ಸ್ಪಷ್ಟ ಪುರಾವೆಗಳಿವೆ, ಬಾಹ್ಯ ಸಾಲದಿಂದ ಜಿಡಿಪಿ ಅನುಪಾತ ಸಹಜ ರೀತಿಯಲ್ಲಿ ಮುಂದುವರಿದಿದ್ದು, ಮಾರ್ಚ್ ೨೦೨೧ರ ಅಂತ್ಯದಲ್ಲಿದ್ದ ಶೇ.೨೧. ೧ ರಿಂದ ಜೂನ್ ಅಂತ್ಯದಲ್ಲಿ ಶೇ. ೨೦.೨ಕ್ಕೆ ಕುಸಿದಿದೆ.

ಸ್ವಯಂಚಾಲಿತ ಮಾಹಿತಿ ವಿನಿಮಯದಡಿ ಭಾರತಕ್ಕೆ ಸ್ವಿಸ್ ಬ್ಯಾಂಕ್ ನ ೩ ನೇ ಸೆಟ್ ವಿವರ ಲಭ್ಯ

ನವದೆಹಲಿ, ಅ. ೧೧: ಸ್ವಯಂಚಾಲಿತ ಮಾಹಿತಿ ವಿನಿಮಯದಡಿ ಭಾರತಕ್ಕೆ ಸ್ವಿಸ್ ಬ್ಯಾಂಕ್ ಖಾತೆಗಳ ಮೂರನೇ ಸೆಟ್ ವಿವರಗಳು ಲಭ್ಯವಾಗಿದೆ. ಈ ಬಾರಿ ಯುರೋಪಿಯನ್ ರಾಷ್ಟç ೩೩ ಲಕ್ಷ ಆರ್ಥಿಕ ಖಾತೆಗಳನ್ನು ೯೬ ರಾಷ್ಟçಗಳೊಂದಿಗೆ ಹಂಚಿಕೊAಡಿದೆ. ಸ್ವಿಟ್ಜರ್ಲ್ಯಾಂಡ್ ನ ಎಫ್ ಟಿಎ ಈ ಸಂಬAಧ ಹೇಳಿಕೆ ಬಿಡುಗಡೆ ಮಾಡಿದ್ದು ಈ ವರ್ಷ ಮಾಹಿತಿಯ ವಿನಿಮಯದ ಅಡಿಯಲ್ಲಿ ಈ ಬಾರಿ ಇನ್ನೂ ೧೦ ಹೆಚ್ಚು ದೇಶಗಳು- ಆಂಟಿಗುವಾ ಮತ್ತು ಬಾರ್ಬುಡಾ, ಅಜೆರ್ಬೈಜಾನ್, ಡೊಮಿನಿಕಾ, ಘಾನಾ, ಲೆಬನಾನ್, ಮಕಾವು, ಪಾಕಿಸ್ತಾನ, ಕತಾರ್, ಸಮೋವಾ ಮತ್ತು ವನವಾಟುಗಳೊಂದಿಗೆ ಮಾಹಿತಿ ಹಂಚಿಕೊಳ್ಳಲಾಗಿದೆ ಎಂದು ಹೇಳಿದೆ.