ಕಣಿವೆ, ಅ. ೧೧: ನೂರಾರು ಸಂಖ್ಯೆಯಲ್ಲಿರುವ ಕುರಿಗಳ ಮಂದೆಯನ್ನು ಕುರಿಗಾಹಿ ತನ್ನದೇ ಆದ ಪರಿಭಾಷೆಯಲ್ಲಿ ಕೂಗಿ ಕರೆದೊಡನೆ ತಿನ್ನುವುದನ್ನು ಬಿಟ್ಟು ಕೊರಳು ಆಡಿಸಿಕೊಂಡು ಬ್ಯಾ....ಬ್ಯಾ...ಅಂದುಕೊAಡು ತನ್ನ ಪಾಲಕನತ್ತ ಓಡೋಡಿ ಬರುವುದನ್ನು ನೋಡೋದೆ ಒಂದು ಆನಂದ.
ಮಳೆಗಾಲದ ಅವಧಿ ಮುಕ್ತಾಯವಾಗುತ್ತಿದ್ದಂತೆಯೇ ಸಾಮಾನ್ಯವಾಗಿ ಹಳ್ಳಿಗಾಡು ಪ್ರದೇಶಗಳಲ್ಲಿ ಹಿಂಡು-ಹಿAಡು ಕುರಿಗಳನ್ನು ತಂಡೋಪತAಡ ವಾಗಿ ಸಾಗಿಸುತ್ತಾ ಮೇಯಿಸುವುದನ್ನು ನಾವು ಕಂಡಿರುತ್ತೇವೆ. ಮೂಗುದಾರ ಹಾಕಿ ಹಗ್ಗಗಳನ್ನು ಕಟ್ಟಿದಂತಹ ಮೂರ್ನಾಲ್ಕು ಹಸು ಅಥವಾ ಎಮ್ಮೆಗಳನ್ನು ಒಬ್ಬ ವ್ಯಕ್ತಿ ಒಂದೆಡೆಯಿAದ ಮತ್ತೊಂದೆಡೆಗೆ ಸಾಗಿಸಲು ಹರಸಾಹಸ ಪಡುತ್ತಾನೆ. ಆದರೆ ನೂರಾರು -ಸಾವಿರಾರು ಸಂಖ್ಯೆಯಲ್ಲಿ ಇರುವಂತಹ ಕುರಿಗಳ ಹಿಂಡನ್ನು ಕೇವಲ ಒಬ್ಬನೇ ಒಬ್ಬ ಕುರಿಗಾಹಿ (ಕುರಿಗಳನ್ನು ಕಾಯುವವ) ನಿರ್ವಹಿಸುವುದು ಇದೆಯಲ್ಲಾ ಅದು ನಿಜಕ್ಕೂ ಒಂದು ರೀತಿಯಲ್ಲಿ ಆಶ್ಚರ್ಯವಾಗುತ್ತದೆ.
ಕುಶಾಲನಗರದ ಕಾವೇರಿ ನದಿ ದಂಡೆಯ ಪಾಳು ಬಿಟ್ಟ ಭೂಮಿಯೊಂದರಲ್ಲಿ ಕುರಿಗಳ ಹಿಂಡನ್ನು ಮೇಯಿಸುತ್ತಿದ್ದ ಚಿತ್ರದುರ್ಗ ತಾಲೂಕಿನ ಹುಳಿಯಾರಿನ ‘ಪಿಲಾಲಿ' ಎಂಬ ಗ್ರಾಮದ ನಾಗರಾಜ ಎಂಬ ಕುರಿಗಾಹಿ ಕುರಿಗಳ ಮಂದೆಯನ್ನು ನಿರ್ವಹಿಸುತ್ತಿದ್ದುದು ಮಾತ್ರ ರೋಮಾಂಚನವಾಗಿತ್ತು. ಅಂದರೆ ಪಾಳುಭೂಮಿಯಲ್ಲಿ ಮೇಯುತ್ತಿದ್ದ ಕುರಿಗಳ ಹಿಂಡಿನ ಕೆಲವು ಕುರಿಗಳು ಬೇಲಿ ದಾಟಿ ಬೆಳೆ ತಿನ್ನಲು ಹೋಗುವು ದನ್ನು ಕಂಡೊಡನೆ ಎಲ್ಲೋ ದೂರದಲ್ಲಿ ಅಂದರೆ ೨೦೦ ರಿಂದ ೩೦೦ ಮೀಟರ್ ದೂರದಲ್ಲಿರುವ ಕುರಿಗಾಹಿ ತನ್ನದೇ ಆದ ರೀತಿಯಲ್ಲಿ ಕುರಿಗಳ ಮಂದೆಗೆ ಅರ್ಥವಾಗುವ ಪರಿಭಾಷೆಯಲ್ಲಿ ಕೂಗು ಹಾಕಿದರೆ, ಕೈಬೆರಳನ್ನು ಬಾಯಿಗಿಟ್ಟು ಶಿಳ್ಳೆ ಹೊಡೆದರೆ ಸಾಕು ಅಲ್ಲಲ್ಲಿ ದೂರದಲ್ಲಿ ಚೆಲ್ಲಾಪಿಲ್ಲಿಯಾಗಿ ಬೇಲಿಯೊಳಗಿನ ಗಿಡ ಮರಗಳ ಸೊಪ್ಪು ತಿನ್ನುತ್ತಿದ್ದ ಕುರಿಗಳು ಓಡೋಡಿ ಬರುವ ರೀತಿ ಆಶ್ಚರ್ಯವಾಗುತ್ತದೆ. ಅಂಗಳದಲ್ಲಿ ಆಡುತ್ತಿದ್ದ ಮಕ್ಕಳನ್ನು ತಾಯಿ ಕೂಗಿ ಕರೆದೊಡನೆ ಬಂದೇ ಅಮ್ಮಾ ಅಂದುಕೊAಡು ಓಡೋಡಿ ಬರುವ ಪುಟ್ಟ ಕಂದಮ್ಮಗಳ ರೀತಿಯಲ್ಲಿ ತಮ್ಮ ಲಾಲನೆ - ಪಾಲನೆ ಮಾಡುವ ಕುರಿಗಾಹಿ ಎಂಬ ಪಾಲಕನ ಬಳಿ ಓಡೋಡಿ ಬಂದು ನಿಲ್ಲುವ ಮತ್ತು ಮಲಗಿ ಮೆಲುಕು ಹಾಕುವ ಕುರಿಗಳ ಮುಗ್ಧತೆ ಹಾಗೂ ಆಪ್ತತೆ ನಿಜಕ್ಕೂ ಮನಮೋಹಕ. ಕೇವಲ ಮಂದೆಯಲ್ಲಿನ ಕುರಿಗಳು ಮಾತ್ರವಲ್ಲ, ಅವುಗಳೊಟ್ಟಿಗೆ ನಿಕಟ ಬಾಂಧವ್ಯ ಹೊಂದಿ ಕುರಿಗಳೊಟ್ಟಿಗೆ ಬದುಕುವ ಸಾಕು ಶ್ವಾನಗಳು ಕೂಡ ಓಡೋಡಿ ಬಂದು ಕುರಿಗಾಹಿ ಪಾಲಕನ ಬಳಿ ಬಾಲ ಅಲುಗಾಡಿಸಿ ಕುರಿಗಾಹಿಯ ಆದೇಶಕ್ಕಾಗಿ ಕಾಯುತ್ತವೆ. ಅಂದರೆ ಕುರಿ ಮಂದೆಯ ಜೊತೆಯಿರುವ ಯಾವುದಾದರೂ ಕುರಿಗಳು ಗುಂಪಿನಿAದ ಕದಡಿ ದೂರ ಉಳಿದಿದ್ದರೆ ಅದನ್ನು ಗುರುತಿಸಿ ಅದನ್ನು ಬೆನ್ನತ್ತಿ ಕುರಿಗಳ ಗುಂಪಿಗೆ ಸೇರಿಸುವ ಸತ್ಯ ಶುದ್ಧ ಕಾಯಕದಲ್ಲಿ ಈ ಶ್ವಾನ ತೊಡಗುತ್ತದೆ.
ಒಂದು ವೇಳೆ ಮಂದೆಯೊಳಗಿದ್ದ ಗರ್ಭವತಿ ಕುರಿ ಏನಾದರೂ ಮರಿಗೆ ಜನ್ಮವಿತ್ತರೆ ಅಂತಹ ಪ್ರಸಂಗಗಳನ್ನು ಗುರುತಿಸಿ ತನ್ನ ಪಾಲಕ ಅಲ್ಲಿಗೆ ಬಂದು ಆ ಹಸುಳೆ ಕುರಿ ಮರಿಯನ್ನು ಎತ್ತಿಕೊಂಡು ಗೂಡು ಸೇರಿಸುವವರೆಗೂ ಆ ಶ್ವಾನಗಳು ಕಾರ್ಯನಿರತವಾಗಿರುತ್ತವೆ. ಅಂದರೆ ಗ್ರಾಮೀಣ ಪ್ರದೇಶಗಳಲ್ಲಿನ ಬೀಡಾಡಿ ಶ್ವಾನಗಳು ಏನಾದರು ಧಾವಿಸಿ ಹಸುಳೆ ಕುರಿ ಮರಿಗಳಿಗೆ ಕಚ್ಚದಂತೆ ಅಥವಾ ಇನ್ನಾವುದೇ ಘಾಸಿಯಾಗದಂತೆ ಆ ಶ್ವಾನ ನಿಯತ್ತನ್ನು ಪ್ರದರ್ಶಿಸುತ್ತದೆ ಎನ್ನುತ್ತಾರೆ ಕುರಿಗಾಹಿ ನಾಗರಾಜು.
ಹಳ್ಳಿಗಳಿಂದ ಹಳ್ಳಿಗಳಿಗೆ ಕುರಿಗಳನ್ನು ಸಾಗಿಸುವ ಸಂದರ್ಭ ಹೆದ್ದಾರಿಗಳಲ್ಲಿ ದಟ್ಟಣೆಯ ವಾಹನಗಳ ಸಂಚಾರವಿದ್ದಾಗ್ಯೂ ಯಾವುದೇ ಮುಜುಗರ ಅಥವಾ ಭಯಕ್ಕೆ ಒಳಗಾಗದ ಈ ಕುರಿಗಳ ಹಿಂಡು ತನ್ನ ಮುಂದಿರುವ ತನ್ನ ಕುರಿಗಾಹಿಯ ಹೆಜ್ಜೆಯನ್ನಷ್ಟೇ ಅನುಸರಿಸಿ ಒಂದರ ಹಿಂದೆ ಒಂದು ಗುಂಪುಗೂಡಿ ತೆರಳುತ್ತವೆ. ಅಂದರೆ ಅವು ಸಾಗುವ ಮಾರ್ಗದಲ್ಲಿ ಬೇರೆ ಯಾರೇ ವ್ಯಕ್ತಿಗಳು ಇದ್ದು ಕೂಗಿದರೂ ಕೂಡ ಆ ಹೊಸ ಕೂಗಿನ ಧ್ವನಿಗೆ ಓಗೊಡದೇ ತನ್ನ ಪಾಲಕನನ್ನು ವಾಸನೆಯಿಂದ ಗ್ರಹಿಸಿ ಆತನ ಆಜ್ಞೆಗಳನ್ನಷ್ಟೇ ಪಾಲಿಸುವುದು ಈ ಕುರಿ ಮಂದೆಯ ಮತ್ತೊಂದು ವಿಶೇಷ.
ಲಗೇಜ್ ಹೊರಲು ಕತ್ತೆಗಳ ಬಳಕೆ
ಕುರಿಮಂದೆಯೊಳಗೆ ಸಾಮಾನ್ಯವಾಗಿ ಕತ್ತೆಗಳು ಕಂಡು ಬರುತ್ತವೆ. ಅಂದರೆ ಕುರಿಗಾಹಿಗಳ ಬಳಕೆಯ ಅಡುಗೆಯ ಪಾತ್ರೆ, ಸಾಮಾನು ಸರಂಜಾಮು ಗಳು ಹಾಗೂ ಕುರಿಗಳು ಮರಿಗಳನ್ನು ಹಾಕಿದಲ್ಲಿ ಅವುಗಳನ್ನು ಕತ್ತೆಯ ಮೇಲಿನ ಚೀಲಗಳಲ್ಲಿಟ್ಟು ಊರಿಂದ ಊರಿಗೆ ಸಾಗಿಸುತ್ತಾರೆ. ಭಾರದ ವಸ್ತುಗಳನ್ನು ಹೊರಲೆಂದೇ ಕತ್ತೆಗಳನ್ನು ಕುರಿಗಾಹಿಗಳು ಕುರಿಮಂದೆಯಲ್ಲಿ ಸಾಕುತ್ತಾರೆ.
ಬೆಳೆಗಳಿಗೆ ಬೆಲೆ ಕುಸಿತ ಕುರಿಮಂದೆಗೆ ಹಿಂದೇಟು ಹಾಕುವ ರೈತ
ಕುರಿಗಾಹಿಗಳು ಒಮ್ಮೆ ತಮ್ಮ ಊರುಗಳನ್ನು ಬಿಟ್ಟು ಪರ ಜಿಲ್ಲೆಗಳಿಗೆ ಧಾವಿಸಿದಾಗ ತಿಂಗಳುಗಟ್ಟಲೆ ವರ್ಷಗಟ್ಟಲೇ ಊರಿಗೆ ಮರಳುವುದಿಲ್ಲ. ಅಂದರೆ ನಿತ್ಯವೂ ಗ್ರಾಮ ಸಂಚಾರದಲ್ಲೇ ತೊಡಗುವ ಈ ಕುರಿಗಾಹಿಗಳಿಗೆ ಮತ್ತು ಕುರಿಗಳಿಗೆ ಕುರಿ ಮಂದೆಯೇ ಪ್ರಮುಖ ಆಸರೆ. ಅಂದರೆ ಹೆಚ್ಚು ಕೃಷಿ ಭೂಮಿ ಉಳ್ಳ ಕೃಷಿಕರು ಭೂಮಿಯನ್ನು ಫಲವತ್ತತೆಯಿಂದ ಇಡಲು ತಮ್ಮ ಜಮೀನಿನಲ್ಲಿ ಕುರಿಗಳ ಮಂದೆಯನ್ನು ಬಿಡಿಸುತ್ತಾರೆ. ಒಂದು ರಾತ್ರಿ ಕುರಿಗಳ ಹಿಂಡು ಒಂದು ಜಮೀನಿನಲ್ಲಿ ಉಳಿದರೆ ಅವುಗಳ ಮಲ-ಮೂತ್ರ ಉತ್ತಮವಾದ ಸಾವಯವ ಗೊಬ್ಬರವಾದ್ದರಿಂದ ಅದರಲ್ಲಿ ಬೆಳೆಯುವ ಯಾವುದೇ ಬೆಳೆಗಳು ಹುಲುಸಾಗಿ ಬೆಳೆಯುತ್ತವೆ. ಆದರೆ ಈ ಬಾರಿ ಶುಂಠಿಗೆ ಬೆಲೆ ಕುಸಿತವಾದ್ದರಿಂದ ರೈತರು ಹೆಚ್ಚಾಗಿ ಕುರಿ ಮಂದೆಗೆ ಮುಂದಾಗುತ್ತಿಲ್ಲ ಎನ್ನಲಾಗುತ್ತಿದೆ. ಒಂದು ರಾತ್ರಿ ಜಮೀನಿನಲ್ಲಿ ಕುರಿಮಂದೆ ತಡೆದರೆ ೩೦೦ ರಿಂದ ೫೦೦ ರೂಗಳ ತನಕ ಕುರಿಗಾಹಿಗೆ ಟಿಪ್ಸ್ ಕೊಡಲಾಗು ತ್ತದೆ. ಹಾಗೆಯೇ ಕುರಿಗಾಹಿಗಳಿಗೆ ಊಟೋಪಚಾರದ ವ್ಯವಸ್ಥೆಗೆ ದವಸ ಧಾನ್ಯಗಳನ್ನು ಕೃಷಿಕರು ಕೊಡುವ ವಾಡಿಕೆ ಇದೆ. ಬಯಲು ಸೀಮೆಯ ಪ್ರದೇಶಗಳಲ್ಲಿ ಕುರಿ ಮಂದೆಗೆ ಹೆಚ್ಚಿನ ಒತ್ತು ಕೊಡುತ್ತಾರೆ. ಆದರೆ ಕಳೆದ ಎರಡು ವರ್ಷಗಳಿಂದ ಶುಂಠಿ ಫಸಲಿಗೆ ದರ ಕುಸಿತವಾದ್ದರಿಂದ ಸಾಕಷ್ಟು ನಷ್ಟಕ್ಕೆ ಒಳಗಾದ ಕೃಷಿಕರು ಇದೀಗ ಯಾವ ಮಂದೆಯೂ ಬೇಡ ಹೋಗಪ್ಪಾ ಎನ್ನುತ್ತಾರೆ ಎಂದು ಕುರಿಗಾಹಿ ನಾಗರಾಜು ಹೇಳುತ್ತಾರೆ.
ಕುಲಕಸುಬು
ತಲ ತಲಾಂತರಗಳಿAದ ಕುಲ ಕಸುಬಾಗಿಸಿಕೊಂಡಿರುವ ತಾತ ಮುತ್ತಾತಂದಿರ ಪದ್ಧತಿಯನ್ನೇ ನಾವು ಅನುಸರಿಸಿಕೊಂಡು ಬರುತ್ತಿದ್ದೇವೆ. ನಮ್ಮಲ್ಲಿ ಕೆಲವರು ಶ್ರೀಮಂತರು ಸಾವಿರಾರು ಸಂಖ್ಯೆಯಲ್ಲಿ ಕುರಿಗಳನ್ನು ಖರೀದಿಸಿ ಅವುಗಳನ್ನು ಮೇಯಿಸಲು ವರ್ಷಕ್ಕೆ ೫೦ ಸಾವಿರ ರೂಗಳ ಸಂಭಾವನೆ ಕೊಡಲಾಗುತ್ತದೆ. ಹಾಗಾಗಿ ಬಡತನದ ರೇಖೆಯ ಕೆಳಗಿನ ಹಲವು ಕುಟುಂಬಗಳು ಇದೇ ಕುಲಕಸುಬನ್ನು ನಂಬಿ ಜೀವನ ಕಟ್ಟಿದ್ದೇವೆ ಎನ್ನುವ ನಾಗರಾಜು, ನಮ್ಮನ್ನು ನಮ್ಮ ಅಪ್ಪ ಅಮ್ಮ ಶಾಲೆಗಳಿಗೆ ಕಳಿಸಲಿಲ್ಲ. ಈಗ ನಮ್ಮ ಮಕ್ಕಳಾದರೂ ಓದಲಿ ಅನ್ನೋ ಆಸೆಯಿಂದ ಶಾಲೆಗೆ ಮಕ್ಕಳನ್ನು ಕಳಿಸುತ್ತಿದ್ದೇವೆ ಎನ್ನುತ್ತಾರೆ.
- ಕೆ.ಎಸ್. ಮೂರ್ತಿ,
ಕುಶಾಲನಗರ.