ನಾಪೋಕ್ಲು, ಅ. ೧೦: ಎಸ್.ವೈ.ಎಸ್. ಎಮ್ಮೆಮಾಡು ಶಾಖೆಯ ನೂತನ ಸಾಲಿನ ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಪಿ.ಎ. ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಕುನ್ನಿಕೋಯಾ ತಂಞಳ್, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಯು. ಮಹಮ್ಮದ್ ಆಶ್ರಫ್, ಖಜಾಂಚಿಯಾಗಿ ಆಶ್ರಫ್ ಸಖಾಫಿ ಪರಂಬು, ದಯಾವಾ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಆಶ್ರಫಿ, ಇಸಾಬ ಕಾರ್ಯದರ್ಶಿಯಾಗಿ ಮಹಮ್ಮದ್ ಮತ್ತು ಸಮಿತಿಯ ಸದಸ್ಯರಾಗಿ ಸಯ್ಯದ್ ಇಲ್ಯಾಸ್ ಅಲ್ ಹೈದರೂಸಿ ತಂಞಳ್, ಖಾದರ್ ಸಯದಿ ಕೊಪ್ಪಕಾರ, ಮುಹಮ್ಮದ್ ಮುಸ್ಲಿಯಾರ್ ಚಕ್ಕೇರ, ಅಬ್ದುಲ್ ಖಾರ‍್ಪುದಿಯರ, ಅಬ್ದುಲ್ ಖಾದರ್ ಕೊಯಿತಲ್ಚಿ, ಉಮ್ಮರ್ ಹಾಜಿ ಕನ್ನಡಿಯಂಡ, ಮುಜೇಬ್ ಬರಕೊಲ್ಲಿ, ಮಜೀದ್ ಕುರುಳಿ, ಉಮ್ಮರ್ ಮಂದಾಲ್, ಇಬ್ರಾಹಿಂ ಸಿ.ಎಸ್., ಅಹಮ್ಮದ್ ಪೊಟ್ಟಂಡಮುಸ್ತಾಫ್ ಪಟೀಲತ್, ಹನೀಫ್ ಚಕ್ಕೇರ, ಹಾರೀಸ್ ಕಡುವಣಿ, ಹಫೀಲ್ ಟಿ.ಎ. ನೇಮಕಗೊಂಡರು.

ಎಮ್ಮೆಮಾಡಿನಲ್ಲಿ ನಡೆದ ಸರಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ ರಹಿಮಾನ್ ವಹಿಸಿದ್ದರು. ಸಭೆಯಲ್ಲಿ ಕೊಡಗು ಜಿಲ್ಲಾ ಸಹಾಯ್ ಚೇರ್‌ಮೆನ್ ಸಯ್ಯದ್ ಇಲ್ಯಾಸ್ ಅಲ್ ಹೈದರೂಪಿ ಸಖಾಪಿ, ಕಾರ್ಯದರ್ಶಿ ಮುಜೀಬ್ ಚಿ.ಎಂ. ಜಲೀಲ್ ನಿಝಮಿ, ಅಬೂಬಕ್ಕರ್ ಸಖಾಫಿ ಉಸ್ತಾದ್, ಮತ್ತಿತರರು ಇದ್ದರು.