ಸುಂಟಿಕೊಪ್ಪ, ಅ. ೧೦: ಹೆರೂರು ಗ್ರಾಮದ ಗಿರಿಜನ ಹಾಡಿಯ ಜನತೆಗೆ ಆರೋಗ್ಯ ಇಲಾಖೆ ಮತ್ತು ಪಂಚಾಯಿತಿ ಸಹಕಾರದೊಂದಿಗೆ ಕೋವಿಡ್ ಲಸಿಕೆ ನೀಡಲಾಯಿತು. ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರೂರು ಗ್ರಾಮ ಗಿರಿಜನ ಹಾಡಿಯ ಸುಮಾರು ೧೫೦ ಮಂದಿ ಲಸಿಕೆಯನ್ನು ಪಡೆದುಕೊಳ್ಳಲು ನಿರಾಕರಿಸಿದ್ದರು.
ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಂದೋಡಿ ಜಗನಾಥ್ (ಶಶಿ) ಆರೋಗ್ಯ ಇಲಾಖೆಯವರೊಂದಿಗೆ ಹಾಡಿಯ ಪ್ರತಿ ಮನೆ ಮನೆಗಳಿಗೆ ತೆರಳಿ ಲಸಿಕೆಯ ಬಗ್ಗೆ ಮಾಹಿತಿ ನೀಡಿ ನಿವಾಸಿಗಳ ಮನವೊಲಿಸಿ ೧೫೦ ಮಂದಿಯಲ್ಲಿ ೧೩೦ ಮಂದಿಗೆ ಕೊರೊನಾ ಲಸಿಕೆ ಕೊಡಿಸುವಲ್ಲಿ ಯಶ್ವಸಿಯಾದರು.
ಈ ಸಂದರ್ಭ ಮಡಿಕೇರಿಯ ಗಿರಿಜನ ಯೋಜನ ಸಮನ್ವಯ ಅಧಿಕಾರಿ ಶ್ರೀನಿವಾಸ್, ಇಲಾಖೆ ಉಪ ನಿರ್ದೇಶಕರಾದ ಮಂಜುನಾಥ ರೈ. ಸಮಾಜ ಕಲ್ಯಾಣ ಇಲಾಖೆ ಯೋಜನಾಧಿಕಾರಿ ಪುಟ್ಟರಾಜು ಶಿಕ್ಷಕಿಯರು ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಶೀಲಾ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಜಿ.ಡಿ. ಜ್ಯೋತಿ, ಹಾಜರಿದ್ದರು.