ಮಡಿಕೇರಿ ಅ. ೧೦: ನಾಡಹಬ್ಬ ದಸರಾ ಪ್ರಯುಕ್ತ ನಗರದ ಪತ್ರಿಕಾ ಭವನದಲ್ಲಿ ಜಿಲ್ಲೆಯ ಪತ್ರಕರ್ತರಿಗಾಗಿ ಆಯೋಜಿಸಿದ್ದ ವಿವಿಧ ಒಳಾಂಗಣ ಕ್ರೀಡಾಕೂಟದಲ್ಲಿ ಅಜ್ಜಮಾಡ ರಮೇಶ್ ಕುಟ್ಟಪ್ಪ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಪತ್ರಕರ್ತರಿಗಾಗಿ ಚದುರಂಗ, ಟೇಬಲ್ ಟೆನ್ನಿಸ್, ಕೇರಂ ಪಂದ್ಯಾಟಗಳು ನಡೆದವು. ಜಿಲ್ಲೆಯ ವಿವಿಧೆಡೆಯ ೫೦ಕ್ಕೂ ಹೆಚ್ಚು ಪತ್ರಕರ್ತರು ಕ್ರೀಡಾಕೂಟದಲ್ಲಿ ಸ್ಪರ್ಧಿಸಿದರು.

ವಿಜೇತರು : ಚದುರಂಗದಲ್ಲಿ ರಿಜ್ವಾನ್ ಹುಸೇನ್ ಪ್ರಥಮ, ಮುರುಳೀಧರ್ ದ್ವಿತೀಯ, ಕೇರಂ ಸಿಂಗಲ್ಸ್ ವಿಭಾಗದಲ್ಲಿ ಟಿ.ಎನ್. ಮಂಜುನಾಥ್ (ಪ್ರ), ಕೆ.ಎಂ. ವಿನೋದ್ (ದ್ವಿ) ಡಬಲ್ಸ್ ವಿಭಾಗದಲ್ಲಿ ಸಂತೋಷ್ ರೈ-ಶಿವರಾಜ್ ಜೋಡಿ (ಪ್ರ), ಜಯಪ್ರಕಾಶ್-ಮಂಜುನಾಥ್ ಜೋಡಿ (ದ್ವಿ), ಟೇಬಲ್ ಟೆನ್ನಿಸ್ ಸಿಂಗಲ್ಸ್ ವಿಭಾಗದಲ್ಲಿ ಅಜ್ಜಮಾಡ ರಮೇಶ್ ಕುಟ್ಟಪ್ಪ (ಪ್ರ) ಗಣೇಶ್ ಕುಮಾರ್ (ದ್ವಿ) ಡಬಲ್ಸ್ ವಿಭಾಗದಲ್ಲಿ ಅಜ್ಜಮಾಡ ರಮೇಶ್ ಕುಟ್ಟಪ್ಪ-ಮಂಜು ಸುವರ್ಣ ಜೋಡಿ (ಪ್ರ), ಅಲ್ಲಾರಂಡ ವಿಠಲ ನಂಜಪ್ಪ-ಗಣೇಶ್‌ಕುಮಾರ್ ಜೋಡಿ (ದ್ವಿ) ಸ್ಥಾನ ಪಡೆದುಕೊಂಡರು.

ಉದ್ಯಮಿ ಚೆಯ್ಯಂಡ ಸತ್ಯ ಬಹುಮಾನ ವಿತರಿಸಿ ಮಾತನಾಡಿ, ಕೊಡಗಿನ ಪತ್ರಕರ್ತರು ವೃತ್ತಿಯ ಜೊತೆಗೆ ಕ್ರೀಡಾಕೂಟ ಸೇರಿದಂತೆ ವಿವಿಧ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ರೀತಿಯ ಕಾರ್ಯಕ್ರಮದಿಂದ ವೃತ್ತಿಯ ಜಂಜಾಟದಿAದ ಹೊರಬರಲು ಸಾಧ್ಯವಾಗಿದೆ ಎಂದರು.

ಉದ್ಘಾಟನಾ ಕಾರ್ಯಕ್ರಮ

ಕ್ರೀಟಾಕೂಟವನ್ನು ಅಂತರರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಕ್ರೀಡಾಕೂಟಗಳ ಆಯೋಜನೆ ಕಡಿಮೆಯಾಗಿದೆ. ಕೊಡಗಿನ ಜನ ಕ್ರೀಡಾಪ್ರೇಮಿಗಳಾಗಿದ್ದು, ಈ ರೀತಿಯ ಕ್ರೀಡಾಕೂಟ ಆಯೋಜನೆಯಿಂದ ಜಿಲ್ಲೆಯ ಸಂಘಟನೆಗಳಿಗೆ ಮಾದರಿಯಾಗಿದೆ. ಸಾಧನೆ ಮಾಡುವ ಗುರಿ ಇದ್ದಾರೆ ಕ್ರೀಡಾ ಕ್ಷೇತ್ರದಲ್ಲಿ ಯಶಸ್ಸು ಸಾಧ್ಯ. ನಂಬಿಕೆ, ದೃಢ ನಿರ್ಧಾರ ಇದ್ದ ಕಾರಣ ನಾನು ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮಾಡುವಂತಾಯಿತು.

ಸತತ ಪರಿಶ್ರಮದಿಂದ ಗುರಿ ಮುಟ್ಟಬಹುದು. ಪ್ರತಿಯೊಬ್ಬರಿಗೂ ಪ್ರತಿಭೆ ಇದ್ದೆ ಇರುತ್ತೆ ಅದನ್ನು ಗುರುತಿಸಿಕೊಳ್ಳಬೇಕು. ಕೊಡಗಿನಲ್ಲಿ ಕ್ರೀಡೆಗೆ ಬೇಕಾದ ಪೂರಕ ವಾತಾವರಣ ಇಲ್ಲ. ಇದು ಕ್ರೀಡಾಪಟುಗಳಿಗೆ ಬೇಸರ ತರಿಸಿದೆ. ಕ್ರೀಡೆಗೆ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಬೇಕು.

ಕ್ರೀಡಾಪಟುಗಳು ಬೇರೆ ಜಿಲ್ಲೆ, ರಾಜ್ಯಕ್ಕೆ ತೆರಳಿ ತರಬೇತಿ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದ್ದು. ಉತ್ತಮ ತರಬೇತುದಾರರು ಬೇಕಾಗಿದೆ. ಪೋಷಕರು ಕೂಡ ಮಕ್ಕಳ ಪ್ರತಿಭೆ ಗುರುತಿಸಿ ಅದನ್ನು ಬೆಳೆಸಲು ಮುಂದಾಗಬೇಕು. ಕ್ರೀಡಾ ಕ್ಷೇತ್ರದಲ್ಲೂ ವಿಫುಲ ಅವಕಾಶಗಳಿವೆ. ಜಿಲ್ಲೆಯಲ್ಲಿ ಕ್ರೀಡಾ ಕ್ಷೇತ್ರಕ್ಕೆ ಕಾಯಕಲ್ಪ ಬೇಕು ಸರಕಾರ ಹಾಗೂ ಸ್ಥಳೀಯ ಆಡಳಿತ ಈ ಬಗ್ಗೆ ಕಾರ್ಯೋನ್ಮುಖಗೊಳ್ಳಬೇಕು. ಎಂದು ಹೇಳಿದರು.

ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ, ಒತ್ತಡದ ಬದುಕಿನ ನಡುವೆ ಇರುವ ಪತ್ರಕರ್ತರಿಗೆ ಈ ರೀತಿಯ ಕ್ರೀಡಾಕೂಟ ಉಲ್ಲಾಸ ಮೂಡಿಸುತ್ತದೆ. ಜೊತೆಗೆ ಆರೋಗ್ಯ ವೃದ್ಧಿಯಾಗುತ್ತದೆ. ಒಗ್ಗಟ್ಟಿಗೆ ಇದೊಂದು ವೇದಿಕೆ ಎಂದು ಹೇಳಿದರು.

ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಹಲವು ಪ್ರತಿಭಾನ್ವಿತ ಪತ್ರಕರ್ತರಿದ್ದಾರೆ. ಅವರಿಗೆ ವೇದಿಕೆ ಕಲ್ಪಿಸಲು ಕ್ರೀಡಾಕೂಟ ಆಯೋಜಿಸಲಾಗಿದೆ. ಅಂರ‍್ರಾಷ್ಟಿçÃಯ ಸಾಧಕರು ಹೊರ ಜಿಲ್ಲೆ, ರಾಜ್ಯಕ್ಕೆ ತೆರಳಿ ತರಬೇತಿ ಪಡೆದು ಸಾಧನೆ ಮಾಡಿದ್ದಾರೆ. ಕ್ರೀಡಾ ಜಿಲ್ಲೆಗೆ ಪೂರಕ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ, ದೂರದೃಷ್ಟಿ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ ಎಂದರು.

ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಕ್ರೀಡಾ ಸಂಚಾಲಕ ಮಂಜು ಸುವರ್ಣ ಮಾತನಾಡಿದರು.

ನಿರ್ದೇಶಕರಾದ ಪುತ್ತಂ ಪ್ರದೀಪ್, ಕುಪ್ಪಂಡ ದತ್ತಾತ್ರಿ, ಸುನಿಲ್ ಪೊನ್ನೆಟ್ಟಿ ಇದ್ದರು. ಚನ್ನನಾಯಕ ಪ್ರಾರ್ಥಿಸಿ, ಪ್ರೆಸ್‌ಕ್ಲಬ್ ಖಜಾಂಚಿ ಬೊಳ್ಳಜಿರ ಬಿ. ಅಯ್ಯಪ್ಪ ನಿರೂಪಿಸಿ, ಕ್ರೀಡಾ ಸಂಚಾಲಕ ನವೀನ್ ಡಿಸೋಜ ಸ್ವಾಗತಿಸಿ, ನಿರ್ದೇಶಕ ದಿವಾಕರ್ ಜಾಕಿ ವಂದಿಸಿದರು.