ಕಣಿವೆ, ಅ. ೧೦ : ಕಿತ್ತು ನಿಂತಿದ್ದ ಕುಶಾಲನಗರ ಸರ್ಕಾರಿ ಆಸ್ಪತ್ರೆಯ ಮುಂಬದಿಯ ಒಳಾವರಣಕ್ಕೆ ಹತ್ತು ಲಕ್ಷ ವೆಚ್ಚದಲ್ಲಿ ಇಂಟರ್ ಲಾಕ್ ಅಳವಡಿಸುವ ಕಾಮಗಾರಿ ವರ್ಷದ ಹಿಂದಷ್ಟೇ ನಡೆದಿತ್ತು.
ಆದರೆ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅಳವಡಿಸಿರುವ ಇಂಟರ್ ಲಾಕ್‌ಗಳು ಸರಿಯಾಗಿ ಕೂಡದ ಕಾರಣ ಆಸ್ಪತ್ರೆಯ ಒಳಾವರಣದಲ್ಲಿ ಧಾವಿಸುವ ವೈದ್ಯ ಸಿಬ್ಬಂದಿಗಳಾದಿಯಾಗಿ ರೋಗಿಗಳೆಲ್ಲಾ ಈ ಇಂಟರ್ ಲಾಕ್ ಮೇಲೆ ಕಾಲಿಟ್ಟಾಗ ಅತ್ತಿಂದಿತ್ತ ಅಲುಗಾಡಿದ ಅನುಭವವಾಗಿ ಎಡವಿ ಬೀಳುತ್ತಲೇ ಒಳಗೆ ಧಾವಿಸುವಂತಹ ಸ್ಥಿತಿ ನಿರ್ಮಾಣಗೊಂಡಿದೆ.
ಇAಟರ್‌ಲಾಕ್ ಅಳವಡಿಸಿದ ಕೆಲವೇ ದಿನಗಳಲ್ಲಿ ಇದೊಂದು ಅವೈಜ್ಞಾನಿಕ ಹಾಗೂ ಅಸಮರ್ಪಕ ಕಾಮಗಾರಿ ಎಂದು ಸ್ವತಃ ಆಸ್ಪತ್ರೆಯ ವೈದ್ಯಾಧಿಕಾರಿಗಳು ದೂರಿದರೂ ಕೂಡ ಸಂಬAಧಿತ ಜಿಲ್ಲಾ ಪಂಚಾಯಿತಿ ಇಂಜಿನಿಯರಿAಗ್ ವಿಭಾಗದ ಅಧಿಕಾರಿಗಳು ಈ ಕಿತ್ತು ನಿಂತ ಇಂಟರ್ ಲಾಕ್‌ಗಳನ್ನು ಸರಿಪಡಿಸುವತ್ತ ಚಿತ್ತ ಹರಿಸಲೇ ಇಲ್ಲ. ಕಾರು, ಬೈಕ್ ಮೊದಲಾದ ವಾಹನಗಳಲ್ಲಿ ಆಸ್ಪತ್ರೆಯ ಒಳಗೆ ಬರುವಾಗ ಪ್ರವೇಶ ದ್ವಾರದಲ್ಲೇ ಅಳವಡಿಸಿರುವ ಈ ಇಂಟರ್ ಲಾಕ್‌ಗಳು ಜೋರು ಸದ್ದು ಮಾಡುತ್ತವೆ. ಅಷ್ಟೇ ಅಲ್ಲ ದ್ವಿ ಚಕ್ರ ವಾಹನ ಸವಾರರನ್ನು ಅಲುಗಾಡಿಸುತ್ತವೆ.
ಲಕ್ಷಾಂತರ ರೂಗಳನ್ನು ವ್ಯಯಿಸಿ ಮಾಡಿರುವ ಇಂಟರ್ ಲಾಕ್ ಕಾಮಗಾರಿಗೆ ಇದೀಗ ವರ್ಷ ಕಳೆದಿದ್ದು, ಇಂಜಿನಿಯರಿAಗ್ ವಿಭಾಗದ ಅಧಿಕಾರಿಗಳ ನಿರ್ಲಕ್ಷö್ಯದ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.